ಮುದ್ದು ಮಗಳಿಗೆ ಸುಂದರ ಹೆಸರಿಟ್ಟ ಅಥಿಯಾ ಶೆಟ್ಟಿ ದಂಪತಿ- ಅದರ ಅರ್ಥವೇನು ಗೊತ್ತಾ?

Public TV
1 Min Read

ಬಾಲಿವುಡ್ ಬೆಡಗಿ ಅಥಿಯಾ ಶೆಟ್ಟಿ (Athiya Shetty) ಅವರು ಪತಿ ಕೆ.ಎಲ್ ರಾಹುಲ್ (KL Rahul) ಹುಟ್ಟುಹಬ್ಬದಂದು ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಮಗಳಿಗೆ ವಿಭಿನ್ನವಾಗಿರುವ ಎಂದು ಹೆಸರನ್ನು ಇಟ್ಟಿದ್ದಾರೆ. ಇದನ್ನೂ ಓದಿ:ಲಕ್ಷ್ಮಿ ಮಂಚು ಇನ್ಸ್ಟಾಗ್ರಾಂ ಖಾತೆ ಹ್ಯಾಕ್- ಫ್ಯಾನ್ಸ್‌ಗೆ ಎಚ್ಚರಿಸಿದ ನಟಿ

ಕೆ.ಎಲ್ ರಾಹುಲ್‌ಗೆ ಇಂದು (ಏ.18) 33ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಮಗಳೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿ ನಮ್ಮ ಹೆಣ್ಣು ಮಗು, ನಮ್ಮ ಸರ್ವಸ್ವ, ‘ಇವಾರಾ’ ಎಂದು ನಟಿ ಅಥಿಯಾ ಶೆಟ್ಟಿ ಬರೆದುಕೊಂಡಿದ್ದಾರೆ. ಫೋಟೋ ಶೇರ್ ಮಾಡಿದ್ರು ಕೂಡ ಮಗಳ ಮುಖವನ್ನು ಅವರು ರಿವೀಲ್ ಮಾಡಿಲ್ಲ. ಇದನ್ನೂ ಓದಿ: ಮೊಮ್ಮಗಳ ಬಗ್ಗೆ ಭಾವನಾತ್ಮಕ ನೋಟ್ ಬರೆದ ಅಜ್ಜ ಸುನಿಲ್ ಶೆಟ್ಟಿ

 

View this post on Instagram

 

A post shared by KL Rahul👑 (@klrahul)

ಅಥಿಯಾ ದಂಪತಿ ಪುತ್ರಿಗೆ ʻಇವಾರಾ’ ಎಂದು ವಿಭಿನ್ನವಾಗಿರೋ ಹೆಸರಿಟ್ಟಿದ್ದು, ಇವಾರಾ ಎಂದರೆ ‘ದೇವರ ಉಡುಗೊರೆ’ ಎಂದರ್ಥ ಬರುತ್ತದೆ. ಇಂತಹ ಸುಂದರವಾದ ಸಂಸ್ಕೃತ ಹೆಸರನ್ನು ಅಥಿಯಾ ಶೆಟ್ಟಿ ಜೋಡಿ ಮಗಳಿಗೆ ಇಟ್ಟಿದ್ದಾರೆ. ಅಥಿಯಾ ಅಜ್ಜಿಯ ಹೆಸರು ವಿಫುಲ ಆಗಿದೆ. ಅವರ ಗೌರವಾರ್ಥವಾಗಿ ಮಧ್ಯದ ಹೆಸರು V ಹಾಗೂ ರಾಹುಲ್‌ ಹೆಸರಲ್ಲಿ Rah ಹೆಸರನ್ನು ಸೇರಿಸಿ ಮಗಳಿಗೆ (Evaarah) ಇಟ್ಟಿರೋದು ವಿಶೇಷ. ಇನ್ನೂ ಅಥಿಯಾ ಪೋಸ್ಟ್‌ಗೆ ಸಮಂತಾ, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಹಾರ್ಟ್ ಎಮೋಜಿ ಹಾಕಿ ವಿಶ್ ಮಾಡಿದ್ದಾರೆ.

ಅಂದಹಾಗೆ, ಹಲವು ವರ್ಷಗಳ ಡೇಟಿಂಗ್ ಬಳಿಕ 2023ರಲ್ಲಿ ಕೆ.ಎಲ್ ರಾಹುಲ್ (KL Rahul) ಅವರನ್ನು ಅಥಿಯಾ ಮದುವೆಯಾದರು. ಮಾ.24ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.

Share This Article