161ಕ್ಕೆ ಕೆಕೆಆರ್‌ ಆಲೌಟ್‌ – ಎಸ್‌ಆರ್‌ಹೆಚ್‌ಗೆ 65 ರನ್‌ಗಳ ಭರ್ಜರಿ ಜಯ

0 Min Read

ಕೋಲ್ಕತ್ತಾ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟಿಂಗ್‌ ಅಬ್ಬರಕ್ಕೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತತ್ತರಿಸಿದೆ. ಕೆಕೆಆರ್‌ ವಿರುದ್ಧ ಎಸ್‌ಆರ್‌ಹೆಚ್‌ 65 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 227 ರನ್‌ಗಳ ಬೃಹತ್‌ ಟಾರ್ಗೆಟ್ ನೀಡಿತು. ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತ 16 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಅಂಗ್ರೀಶ್ ರಘುವಂಶಿ (52) ಮತ್ತು ರಿಂಕು ಸಿಂಗ್ (35) ಗಳಿಸಿದರು. ಉಳಿದವರು ನೀರಸ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

ಇದಕ್ಕೂ ಮೊದಲು, ಹೆನ್ರಿಚ್ ಕ್ಲಾಸೆನ್ ಅವರ ಅರ್ಧಶತಕದ ನೆರವಿನಿಂದ ಈಡನ್ ಗಾರ್ಡನ್ಸ್‌ನಲ್ಲಿ ಎಸ್‌ಆರ್‌ಎಚ್ 226/8 ರನ್ ಗಳಿಸಿತು. ಕೇವಲ 35 ಎಸೆತಗಳಲ್ಲಿ 52 ರನ್ ಗಳಿಸಿ ತಂಡದ ಮುನ್ನಡೆಗೆ ಕಾರಣರಾದರು.

ಟ್ರಾವಿಸ್‌ ಹೆಡ್‌ 46, ಅಭಿಷೇಕ್‌ ಶರ್ಮಾ 48, ನಿತೀಶ್‌ ಕುಮಾರ್‌ ರೆಡ್ಡಿ 39 ರನ್‌ ಗಳಿಸಿ ತಂಡ ಬೃಹತ್‌ ಮೊತ್ತ ಪೇರಿಸಲು ಕಾರಣರಾದರು.

Share This Article