ಹ್ಯಾಟ್ರಿಕ್‌ ಸೋಲುಂಡ ಕೋಲ್ಕತ್ತಾ ಇಂದಾದ್ರೂ ಗೆಲ್ಲುತ್ತಾ?

1 Min Read

ಕೋಲ್ಕತಾ: ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ ಈ ಬಾರಿ ಐಪಿಎಲ್‌ನಲ್ಲಿ (IPL) ಆಡಿರುವ 3 ಪಂದ್ಯಗಳ ಪೈಕಿ ಒಂದರಲ್ಲೂ ಗೆದ್ದಿಲ್ಲ. ತಂಡ ಮೊದಲ ಗೆಲುವಿಗಾಗಿ ಪರದಾಡುತ್ತಿದೆ. ಇಂದು (ಏ.9) ಲಕ್ನೋ (LSG) ವಿರುದ್ಧ ಕೋಲ್ಕತ್ತಾ ತವರಿನಲ್ಲೇ ಸೆಣಸಾಡಲಿದ್ದು, ಈ ಪಂದ್ಯದಲ್ಲಾದ್ರೂ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ಟೂರ್ನಿಯಲ್ಲಿ ಮುಂಬೈ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದೆ. ಪಂಜಾಬ್ ವಿರುದ್ಧ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಮತ್ತೊಂದೆಡೆ ಲಕ್ನೋ ತಂಡ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತಿದ್ದರೂ ಬಳಿಕ ಸನ್‌ ರೈಸರ್ಸ್ ವಿರುದ್ಧ ಜಯಗಳಿಸಿದೆ. ತಂಡ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಇದನ್ನೂ ಓದಿ: ಗೆಲ್ಲುವ ಪಂದ್ಯ ಕೈಚೆಲ್ಲಿದ ಡೆಲ್ಲಿ – ಗುಜರಾತ್‌ಗೆ 1 ರನ್‌ ರೋಚಕ ಜಯ 

ಕೆಕೆಆರ್‌ಗೆ ಈ ಬಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ವಿಫಲವಾಗಿದೆ. ತಂಡದ ಬ್ಯಾಟಿಂಗ್ ವಿಭಾಗ ಸ್ವಲ್ಪ ಮಟ್ಟಿಗೆ ಉತ್ತಮವಾಗಿದ್ದರೂ, ಇಂದು ಮೊಹಮ್ಮದ್ ಶಮಿ ದಾಳಿಯನ್ನು ಹೇಗೆ ಎದುರಿಸಲಿದೆ ಎಂಬ ಕುತೂಹಲವಿದೆ. ಮತ್ತೊಂದೆಡೆ, ರಿಷಭ್ ಪಂತ್ ನಾಯಕತ್ವದ ಲಕ್ನೋ ತಂಡ ವಿದೇಶಿ ಬ್ಯಾಟರ್‌ಗಳ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದೆ. ಇದನ್ನೂ ಓದಿ: ಒಡೆದ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಹೊಸ ಫೋನ್‌ ಗಿಫ್ಟ್‌ ಕೊಟ್ಟ ಸಂಜು ಸ್ಯಾಮ್ಸನ್!

Share This Article