RRR ಹೀರೋ ಮಗಳಿಗೆ KKK ಹೆಸರು ನಾಮಕರಣ: ಲಲಿತ ಸಹಸ್ರನಾಮದಿಂದ ಹೆಸರು ಆಯ್ಕೆ

Public TV
1 Min Read

ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಹತ್ತು ವರ್ಷದ ದಾಂಪತ್ಯ ಬದುಕಿನಲ್ಲಿ ಇದೀಗ ರಾಮ್ ಚರಣ್(Ram Charan)- ಉಪಾಸನಾ (Upasana) ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ರಾಮ್ ಚರಣ್ ಅವರ ಪತ್ನಿ ಉಪಾಸನಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಮೆಗಾಸ್ಟಾರ್ ಕುಟುಂಬದ ಕುಡಿಗೆ ನಾಮಕರಣ ಮಾಡಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ರಾಮ್ ಚರಣ್ ಪತ್ನಿ ಶೇರ್ ಮಾಡಿದ್ದಾರೆ. RRR ಹೀರೋ ಮಗಳಿಗೆ KKK ಹೆಸರು ನಾಮಕರಣ ಮಾಡಿದ್ದಾರೆ.

ತೆಲುಗಿನ ಸ್ಟಾರ್ ನಟ ಚಿರಂಜೀವಿ (Megastar Chiranjeevi) ಪುತ್ರ ರಾಮ್ ಚರಣ್ ಅವರು ಮುದ್ದು ಮಗಳಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಉಪಾಸನಾ-ರಾಮ್ ಚರಣ್ ಹಲವು ವರ್ಷಗಳು ಪ್ರೀತಿಸಿ, ಮದುವೆಯಾಗಿದ್ರು. ಮದುವೆಯಾಗಿ 10 ವರ್ಷಗಳು ಕಳೆದರು ಮಕ್ಕಳಾಗಿರಲಿಲ್ಲ. ಮಕ್ಕಳು ಮಾಡಿಕೊಳ್ಳುವ ಯೋಜನೆಯನ್ನೇ ಮುಂದೂಡಿದ್ರು. ಇತ್ತೀಚಿಗೆ ಮನೆಗೆ ಮುದ್ದು ಮಗಳ ಆಗಮನವಾಯಿತು. ಇದನ್ನೂ ಓದಿ:ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಹೋಗಲ್ಲ: ನಿರ್ದೇಶಕ ನಾಗತಿಹಳ್ಳಿ ಸ್ಪಷ್ಟನೆ

RRR ಸೂಪರ್ ಸ್ಟಾರ್ ರಾಮ್ ಚರಣ್ ಅವರು ಮಗಳಿಗೆ ಕ್ಲಿನ್ ಕಾರ ಕೊನಿಡೆಲಾ(Klin Kaara Konidela) ಎಂದು ಭಿನ್ನವಾಗಿ ನಾಮಕರಣ ಮಾಡಿದ್ದಾರೆ. ನಾಮಕರಣದ ಫೋಟೋವನ್ನ ನಟನ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮಗುವಿನ ಈ ಹೆಸರನ್ನ ಲಲಿತ ಸಹಸ್ರನಾಮದಿಂದ ತೆಗೆದುಕೊಂಡ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ಶಕ್ತಿಯನ್ನು ಸೂಚಿಸುತ್ತದೆ ಎಂದು ಚರಣ್ ಪತ್ನಿ ತಿಳಿಸಿದ್ದಾರೆ.

ಕ್ಲಿನ್ ಕಾರ ಕೊನಿಡೆಲಾ ಎಂಬ ಭಿನ್ನ ಹೆಸರು ಅಭಿಮಾನಿಗಳ ಗಮನ ಸೆಳೆದಿದೆ. ಒಟ್ನಲ್ಲಿ ಜ್ಯೂ.ರಾಮ್ ಚರಣ್ ಮನೆಯ ಸಂಭ್ರಮದ ಫೋಟೋಗಳನ್ನ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್