ಬೆಂಗಳೂರು: ಸ್ಮಾರ್ಟ್ ಮೀಟರ್ (Smart Meter) ವಿಚಾರದಲ್ಲಿ ಕೋರ್ಟ್ ಕೊಡೋ ತೀರ್ಪಿಗೆ ನಾನು ಬದ್ಧನಾಗಿರುತ್ತೇನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ (K J George) ಸ್ಪಷ್ಟಪಡಿಸಿದ್ದಾರೆ.
ಸ್ಮಾರ್ಟ್ ಮೀಟಿಂಗ್ ಹಗರಣ ಆರೋಪದಲ್ಲಿ ಸಚಿವ ಜಾರ್ಜ್ ಮೇಲೆ ಎಫ್‌ಐಆರ್‌ಗೆ ಕೋರ್ಟ್ ಸೂಚನೆ ಕೊಟ್ಟಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋರ್ಟ್ ಎಫ್‌ಐಆರ್ ಹಾಕಿ ಅಂತ ಹೇಳಿರೋ ಆರ್ಡರ್ ಇದ್ದರೆ ಕೊಡಿ. ಜನಪ್ರತಿನಿಧಿಗಳ ಕೋರ್ಟ್ ಆದೇಶ ಮಾಡಿರೋದು ನಾನು ನೋಡಿಲ್ಲ. ಆದೇಶ ಪ್ರತಿ ಇದ್ದರೆ ಕೊಡಿ ನಾನು ಪ್ರತಿಕ್ರಿಯೆ ಕೊಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ದರ್ಶನ್ ಜಾಮೀನು ಭವಿಷ್ಯ; ವಾದ-ಪ್ರತಿವಾದ ಮುಕ್ತಾಯ – ಒಂದು ವಾರದಲ್ಲಿ ಸುಪ್ರೀಂ ಆದೇಶ
ಸ್ಮಾರ್ಟ್ ಮೀಟರ್ ಕುರಿತು ಅಶ್ವಥ್ ನಾರಾಯಣ ಮತ್ತು ಬಿಜೆಪಿಯವರು ಈ ಕೇಸ್ ಹಾಕಿದ್ದಾರೆ. ಹೈಕೋರ್ಟ್, ರಾಜ್ಯಪಾಲರು, ಜನಪ್ರತಿನಿಧಿಗಳ ಕೋರ್ಟ್ ಎಲ್ಲಾ ಕಡೆ ಅವರು ದೂರು ಕೊಟ್ಟಿದ್ದಾರೆ. ಕೋರ್ಟ್ ಏನಾದ್ರು ನನಗೆ ವಿವರಣೆ ಕೇಳಿದ್ರೆ ಕೊಡ್ತೀನಿ. ಸ್ಮಾರ್ಟ್ ಮೀಟರ್ ವಿಚಾರ ನಾವು ಕಾನೂನು ಪ್ರಕಾರವಾಗಿ ಮಾಡಿದ್ದೇವೆ. ಅಕ್ರಮದ ದಾಖಲೆ ಇದ್ದರೆ ಕೋರ್ಟ್ಗೆ ಅವರು ಕೊಡಲಿ. ಕೋರ್ಟ್ ಕೊಡುವ ತೀರ್ಪಿಗೆ ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.