ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

Public TV
2 Min Read

ಮ್ಮ ಅಡುಗೆ ಮನೆಯಲ್ಲಿರುವ ಎಷ್ಟೋ ಪದಾರ್ಥಗಳೇ ಔಷಧಿಯಾಗಿದೆ. ಇದನ್ನು ನಮ್ಮ ಹಿರಿಯರು ಉಪಯೋಗಿಸಿಕೊಂಡು ಗಟ್ಟಿ ಮುಟ್ಟಗಿರುತ್ತಿದ್ದರು. ಆಧುನಿಕ ಪ್ರಪಂಚದಲ್ಲಿ ಸರಿಯಾದ ಸಮಯಕ್ಕೆ ಊಟ, ತಿಂಡಿ, ನಿದ್ದೆ ಮಾಡದೆ ರೋಗ ರುಜಿನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾದ ಅಜೀರ್ಣ, ಗ್ಯಾಸ್, ಎಸಿಡಿಟಿಯಂತಹ ಸಮಸ್ಯೆಗಳು ಹೆಚ್ಚಾಗಿವೆ. ಇದಕ್ಕೆಲ್ಲಾ ನಾವು ಸುಲಭವಾಗಿ ಮನೆಯಲ್ಲಿ ಮದ್ದು ಮಾಡಿಕೊಂಡು ಬೇಗ ಹುಷಾರಾಗಬಹುದು. ಅದ್ಯಾವುದೆಂದು ನಾವು ತಿಳಿಯೋಣ.

ಶುಂಠಿ: ಇದು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವ ಪ್ರಸಿದ್ಧ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಯುರ್ವೇದ ಚಿಕಿತ್ಸೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ನಿವಾರಣೆಗೆ ಸೂಕ್ತ ಔಷಧ ಪದಾರ್ಥಗಳಲ್ಲಿ ಒಂದು. ನೀವು ಪ್ರತಿನಿತ್ಯ ಊಟ ಮಾಡುವಾಗ ಹಸಿ ಶುಂಠಿಗೆ ಉಪ್ಪು, ನಿಂಬೆ ರಸ ಸೇರಿಸಿ ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಸಹಾಯವಾಗಿತ್ತದೆ. ಜೊತೆಗೆ ಶುಂಠಿ ಟೀ ಕುಡಿಯುವುದರಿಂದ ಶೀತ ಸೇರಿದಂತೆ ಅನೇಕ ರೋಗಗಳಿಂದ ಮುಕ್ತಿ ಪಡೆಯಲು ನೈಸರ್ಗಿಕ ಪರಿಹಾರವಾಗಿದೆ.

ದಾಲ್ಚಿನಿ: ದಾಲ್ಚಿನಿಯು ತಿನ್ನಲು ಸ್ವಲ್ಪ ಖಾರವಾಗಿದ್ದರೂ, ಇದು ದೇಹಕ್ಕೆ ಉತ್ತಮವಾಗಿದೆ. ಸಾಮಾನ್ಯವಾಗಿ ಇದು ನೆಗಡಿಗೆ ಉತ್ತಮ ಔಷಧಿಯಾಗಿದೆ. ಜೊತೆಗೆ ಗಂಟಲು ನೋವು, ಹೊಟ್ಟೆಗೆ ಸಂಬಂಧಿಸಿದ ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಮನೆಮದ್ದಾವಾಗಿದೆ.

ಜೀರಿಗೆ: ಹೊಟ್ಟೆ ನೋವಿಗೆ ಉತ್ತಮ ಮನೆ ಮದ್ದು ಎಂದಾಕ್ಷಣ ನೆನಪಾಗುವುದು ಜೀರಿಗೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಹೊಟ್ಟೆ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯವಾಗಿದೆ. ಜೊತೆಗೆ ಮಲಬದ್ಧತೆ ನಿವಾರಣೆಯಾಗುತ್ತದೆ.

ಕೊತ್ತಂಬರಿ ಸೊಪ್ಪು: ಆಸಿಡಿಟಿಯಿಂದ ಬಳಲುವವರಿಗೆ ಇದು ಉತ್ತಮ ಮನೆಮದ್ದಾಗಿದೆ. ಇದು ಹೊಟ್ಟೆ ಉಬ್ಬನ್ನು ನಿವಾರಿಸಲು ಉತ್ತಮ ಚಿಕಿತ್ಸೆಯಾಗಿದೆ. ಹೊಟ್ಟೆಯಲ್ಲಿನ ಹುಳುಗಳನ್ನು ಕೊಂದು ಹಸಿವನ್ನು ಹೆಚ್ಚಿಸುತ್ತದೆ.

ಇಂಗು: ಒಂದು ಚಿಟಿಕೆ ಇಂಗನ್ನು ತೆಗೆದರೆ ಸಾಕು ಇಡೀ ಮನೆಯನ್ನೇ ಆವರಿಸುವಷ್ಟು ಸುವಾಸನೆಯನ್ನು ಹೊಂದಿದೆ. ಇದು ದೇಹಕ್ಕೂ ಇದರ ಸುವಾಸನೆಯಷ್ಟೇ ಒಳ್ಳೆಯದಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ ಹೊಟ್ಟೆನೋವು, ಉಬ್ಬುವಿಕೆ, ಗ್ಯಾಸ್‍ನಂತಹ ಹೊಟ್ಟೆ ಸಮಸ್ಯೆ ಮಾಯವಾಗಲು ರಾಮಾಬಾಣವಾಗಿದೆ.

ಅರಿಶಿನ: ಇದು ನಮ್ಮ ಅಡುಗೆ ಮನೆಯಲ್ಲಿ ಮೆಡಿಕಲ್ ಸ್ಟೋರ್ ಇದ್ದಂತೆ. ಎಲ್ಲಾ ರೋಗಗಳಿಗೂ ಉತ್ತಮ ಮನೆಮದ್ದಾಗಿದೆ. ಇದು ಆಯುರ್ವೇದ ಪರಿಹಾರಗಳಲ್ಲಿ ಅರಿಶಿನಕ್ಕೆ ಹೆಚ್ಚು ವೈಶಿಷ್ಟ್ಯವಿದೆ. ಚರ್ಮವನ್ನು ಸುಂದರಗೊಳಿಸಲು ಶೀತ, ಮಧುಮೇಹ, ಹೃದ್ರೋಗ ಮತ್ತು ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಅರಿಶಿನವನ್ನು ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ. ಅರಿಶಿನ ಆಹಾರದ ರುಚಿ ಮತ್ತು ಬಣ್ಣವನ್ನು ಹೆಚ್ಚಿಸುತ್ತದೆ. ಇದು ಪಿತ್ತವನ್ನು ಕಡಿಮೆ ಮಾಡಲು ಒಳ್ಳೆಯದು. ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ

ಏಲಕ್ಕಿ: ಖಾರ ಅಥವಾ ಸಿಹಿ ತಿನಿಸುಗಳಿಗೆ ಸಾಮಾನ್ಯವಾಗಿ ಬಳಸುವ ತಿನಿಸೆಂದರೆ ಏಲಕ್ಕಿ. ಇದು ಬಾಯಿಯ ದುರ್ವಾಸನೆ ಮುಕ್ತಗೊಳಿಸಲು ಸಹಾಯವಾಗಿದೆ. ಚಹಾದಲ್ಲಿ ಇದನ್ನು ಸೇರಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ಜೊತೆಗೆ ವಾತ ಹಾಗೂ ಕಫವನ್ನು ಕಡಿಮೆಗೊಳಿಸುತ್ತದೆ. ಇದನ್ನೂ ಓದಿ: ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ

Share This Article
Leave a Comment

Leave a Reply

Your email address will not be published. Required fields are marked *