ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ (Dharmasthala) ಅನಾಮಿಕನ ಮಂಪರು ಪರೀಕ್ಷೆ ಮಾಡುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು (Kishor Kumar Puttur) ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ತಿನ ಶೂನ್ಯವೇಳೆ ಈ ವಿಷಯ ಪ್ರಸ್ತಾಪ ಮಾಡಿದ ಅವರು, ಕೂಡಲೇ ಸರ್ಕಾರ ಅನಾಮಿಕನ ಮಂಪರು ಪರೀಕ್ಷೆ ನಡೆಸಬೇಕು. ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಲು ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯವ್ರು ರಾಜಕೀಯಕ್ಕಾಗಿ ಧರ್ಮಸ್ಥಳದ ಹೆಸರು ಬಳಕೆ ಮಾಡ್ತಿದ್ದಾರೆ – ಡಿಕೆಶಿ
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ಬಳಿ 13 ಸ್ಥಳಗಳಲ್ಲಿ ಶವ ಹೂತು ಹಾಕಿರುವ ಬಗ್ಗೆ ಅನಾಮಿಕ ದೂರು ನೀಡಿದ ಮೇರೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದೆ. ದೂರುದಾರನು ಗುರುತಿಸಿದ 13 ಸ್ಥಳಗಳಲ್ಲಿ ಕಳೇಬರವನ್ನು ಪತ್ತೆ ಹಚ್ಚುವ ಸಲುವಾಗಿ ಅಗೆಯಲು ಗುರುತಿಸಿದ 6ನೇ ಸ್ಥಳದಲ್ಲಿ ಮಾತ್ರ ಪುರುಷನ ಕಳೇಬರ ದೊರಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್ ಮಾಡಲು ಪರಮೇಶ್ವರ್ ಸೂಚನೆ
ಆಧುನಿಕ ತಂತ್ರಜಾನವನ್ನು (ಜಿಪಿಆರ್) ಪ್ರಯೋಗಿಸಿದರೂ ಕೂಡ ಮಿಕ್ಕಿದ ಯಾವ ಸ್ಥಳದಲ್ಲೂ ಕಳೇಬರದ ಕುರುಹು ಸಿಕ್ಕಿರುವುದಿಲ್ಲ. ಸದರಿ ಅನಾಮಿಕ ದೂರು ನೀಡಿದ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅನಾಮಿಕನಿಗೆ ಮಂಪರು ಪರೀಕ್ಷೆ ಮಾಡಿ ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದರು ಎಂಬ ಮಾಹಿತಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಅದೇ ಸಮಯದಲ್ಲಿ, ಸಿಎಂ ಅವರು ಯಾವುದೇ ಕಾರಣಕ್ಕೂ ಸದರಿ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವುದಿಲ್ಲ ಎಂದು ಮಾಧ್ಯಮ ಪ್ರಕಟಣೆ ನೀಡಿದ ಮರುದಿನವೇ ತರಾತುರಿಯಲ್ಲಿ, ಎಸ್‌ಐಟಿ ರಚಿಸಿದ ಹಿಂದಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಕಾರ್ಡ್ ಪರಿಷ್ಕರಣೆ: ಮುನಿಯಪ್ಪ
ಇದರಿಂದ ನಮಗೆ ಸ್ಪಷ್ಟವಾಗುವುದೇನೆಂದರೆ ಸರ್ಕಾರ ಹಿಂದೂ ವಿರೋಧಿ ಎಡಪಂಥೀಯರ ಒತ್ತಡಕ್ಕೆ ಮಣಿದಿರುವುದು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರ ಮಾಧ್ಯಮ ಹೇಳಿಕೆಯೂ ಕೂಡ ದೃಢೀಕರಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳವು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ರಾಜ್ಯದ ಸರ್ವಧರ್ಮೀಯರಿಗೂ ಆರೋಗ್ಯ ಮತ್ತು ಗ್ರಾಮಿಣಾಭಿವೃದ್ಧಿಯಲ್ಲಿ ಉನ್ನತ ಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ರಾಜ್ಯದ ಅಸಂಖ್ಯ ಕುಟುಂಬಗಳನ್ನು ಸಧೃಡಗೊಳಿಸುವ ಸೇವೆ ನೀಡಿ ಮಾದರಿಯಾಗಿದೆ ಎಂದು ವಿವರಿಸಿದ್ದಾರೆ.
ನಮ್ಮ ಶ್ರದ್ಧಾ ಕೇಂದ್ರವನ್ನು ರಕ್ಷಿಸಲು ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ದೂರುದಾರನಿಗೆ ಮಂಪರು ಪರೀಕ್ಷೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.