ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ

Public TV
1 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಮತ್ತು ‘ಛಾವಾ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಸದ್ಯ ರಶ್ಮಿಕಾ ಮುಂಬರುವ ಸಿನಿಮಾ ಬಗ್ಗೆ ಕ್ರೇಜಿ ಅಪ್‌ಡೇಟ್‌ವೊಂದು ಸಿಕ್ಕಿದೆ. ರಶ್ಮಿಕಾ ನಟಿಸಲಿರುವ ಹೊಸ ಸಿನಿಮಾಗಾಗಿ ಕರ್ನಾಟಕದ ಹಂಪಿಗೆ (Hampi) ಬರಲಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿ ನಟಿ ಭಾಗಿಯಾಗಲಿದ್ದಾರೆ.

ಕನ್ನಡತಿ ರಶ್ಮಿಕಾ ಮಂದಣ್ಣ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹಾಗಂತ ಕನ್ನಡ ಸಿನಿಮಾಗಾಗಿ ಅಲ್ಲ, ಬಾಲಿವುಡ್‌ನ ‘ವ್ಯಾಂಪೈರ್ಸ್ ಆಫ್‌ ವಿಜಯನಗರ’ ಸಿನಿಮಾಗಾಗಿ ಬರುತ್ತಿದ್ದಾರೆ. ಈ ಸಿನಿಮಾದ ಕತೆ ಕರ್ನಾಟಕದಲ್ಲಿ ಶುರುವಾಗಲಿದೆ. ಅಕ್ಟೋಬರ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ಹಂಪಿಯಲ್ಲಿ ನಡೆಯಲಿದೆ. 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎನ್ನಲಾಗಿದೆ.‌ ಇದನ್ನೂ ಓದಿ:ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಈ ರೀತಿಯ ಜಾನರ್ ಸಿನಿಮಾದಲ್ಲಿ ರಶ್ಮಿಕಾ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ನಟ ಆಯುಷ್ಮಾನ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ. ‘ಮುಂಜ್ಯಾ’ ಡೈರೆಕ್ಟರ್ ಆದಿತ್ಯಾ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

ಪ್ರಸ್ತುತ ಪುಷ್ಪ 2, ಛಾವಾ, ಸಿಖಂದರ್, ಕುಬೇರ, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿವೆ.

Share This Article