ಸಿಬಿಐ ಪಂಜರದ ಗಿಳಿಯಲ್ಲ: ಕಿರಣ್ ರಿಜಿಜು

Public TV
1 Min Read

ನವದೆಹಲಿ: ಸಿಬಿಐ ಪಂಜರದ ಗಿಳಿಯಲ್ಲ. ಸಿಬಿಐ ತನ್ನ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಹಿಂದೆ ಕೆಲವು ಅಧಿಕಾರಿಗಳು ಎದುರಿಸಿದ ಸವಾಲುಗಳು ಈಗ ಅಸ್ತಿತ್ವದಲ್ಲಿಲ್ಲ. ಕೆಲವು ಪ್ರಕರಣಗಳಲ್ಲಿ ಸಿಬಿಐನ ಕ್ರಮಗಳಿಂದ ಆರೋಪಗಳು ಕೇಳಿ ಬಂದಿತ್ತು. ಆದರೆ ಕಾಲನಂತರದಲ್ಲಿ ಸಿಬಿಐನ ವಿಶ್ವಾಸರ್ಹತೆ ಗಳಿಸಿದೆ ಎಂದರು.

ಟ್ವೀಟ್‍ನಲ್ಲಿ ಏನಿದೆ?: ಸಿಬಿಐ ಇನ್ನು ಪಂಜರದ ಗಿಳಿ ಅಲ್ಲ. ಭಾರತದ ಉನ್ನತ ಅಪರಾಧ ತನಿಖಾ ಸಂಸ್ಥೆಯಾಗಿ ನಿಜವಾಗಿಯೂ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಒಂದು ಕಾಲವಿತ್ತು, ಸರ್ಕಾರದಲ್ಲಿರುವ ಜನರು ಕೆಲವೊಮ್ಮೆ ತನಿಖೆಗೆ ತೊಂದರೆಯಾಗಿ ಪರಿಣಮಿಸುತ್ತಿದ್ದರು. ಅದಿನ್ನು ನನಗೆ ಚೆನ್ನಾಗಿ ನೆನಪಿದೆ. ಆದರೆ ಇಂದು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪ್ರಧಾನಿ ಇದ್ದಾರೆ. ಇದನ್ನೂ ಓದಿ: ಧ್ವನಿವರ್ಧಕ ಬ್ಯಾನ್ ಮಾಡೋದಾದ್ರೆ, ಚರ್ಚ್, ದೇವಾಲಯಗಳಲ್ಲೂ ಬ್ಯಾನ್ ಮಾಡಿ: ಉಮರ್ ಷರೀಫ್

ಅಧಿಕಾರದಲ್ಲಿರುವ ಜನರು ಭ್ರಷ್ಟಾಚಾರದಲ್ಲಿ ತೊಡಗಿದಾಗ ಉಂಟಾಗುವ ತೊಂದರೆಗಳೇನು ಎಂಬುದು ನನಗೆ ಗೊತ್ತು. ಇದು ಸಿಬಿಐಗೆ ಕೂಡ ಕಷ್ಟ. ಈ ಸಂಬಂಧ ನ್ಯಾಯಾಂಗದಿಂದಲೂ ನಾವು ಹಿಂದೆ ಟೀಕೆಗಳನ್ನು ಎದುರಿಸಿದ್ದೇವೆ. ಇದೀಗ ಈ ಎಲ್ಲಾ ಅಡೆತಡೆಗಳನ್ನು ದಾಟಿ ನಿಂತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ಪಿಯಸಿ ಎಕ್ಸಾಂ ಕೆಲಸ ಮಾಡೋ ಶಿಕ್ಷಕರಿಗೆ ಹಿಜಬ್ ನಿಷೇಧ

ಸಿಬಿಐನ ತನಿಖಾ ಅಧಿಕಾರಿಗಳ ಮೊದಲ ಸಮ್ಮೇಳನದ ತಮ್ಮ ಭಾಷಣದ ಕಿರು ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. 2013ರ ಕಲ್ಲಿದ್ದಲು ಹಂಚಿಕೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಸಿಬಿಐ ಪಂಜರದ ಗಿಳಿ ಎಂದು ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *