World Cup 2023: ಮತ್ತೆ ಶತಕ ಮಿಸ್‌ – ಕ್ಯಾಬಿನ್‌ನಲ್ಲಿ ಕುಳಿತು ಕಣ್ಣೀರಿಟ್ಟ ಕೊಹ್ಲಿ

Public TV
2 Min Read

ಮುಂಬೈ: ಶ್ರೀಲಂಕಾ (Sri Lanka) ವಿರುದ್ಧ ಗುರುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ 49ನೇ ಶತಕ ಸಿಡಿಸಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (Sachin Tendulkar) ದಾಖಲೆ ಸರಿಗಟ್ಟುವ ಸನಿಹದಲ್ಲಿದ್ದ ಕಿಂಗ್‌ ಕೊಹ್ಲಿ (Virat Kohli) ಮತ್ತೆ ಎಡವಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಆದ್ರೂ ಕೂಡ ಕ್ರಿಕೆಟ್‌ ದೇವರ ಹೆಸರಿನಲ್ಲಿದ್ದ ಮಹತ್ತರ ದಾಖಲೆಯೊಂದನ್ನು ಮುರಿದು ಗಮನ ಸೆಳೆದಿದ್ದಾರೆ.

ಶ್ರೀಲಂಕಾ ವಿರುದ್ಧ 88 ರನ್‌ ಬಾರಿಸಿದ್ದ ಕೊಹ್ಲಿ 32ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ರು. ಶತಕ ಸಿಡಿಸಿ ದಾಖಲೆ ಬರೆಯುವ ಸನಿಹದಲ್ಲಿದ್ದ ಕೊಹ್ಲಿ ಔಟಾಗುತ್ತಿದ್ದಂತೆ ಹತಾಷಾ ಭಾವದಿಂದ ಹೊರನಡೆದ್ರು. ಈ ವೇಳೆ ಅಭಿಮಾನಿಗಳೂ ಕೊಹ್ಲಿ (Kohli Fans) ಬೇಸರದಿಂದ ನಡೆದು ಹೋಗುತ್ತಿದ್ದ ದೃಶ್ಯವನ್ನ ಮೊಬೈಲ್‌ಗಳಲ್ಲಿ ಸೆರೆಹಿಡಿದ್ರು. ನಂತರ ಕ್ಯಾಬಿನ್‌ನಲ್ಲಿ ಕುಳಿತ ಕೊಹ್ಲಿ ಕಣ್ಣಲ್ಲಿ ಇದ್ದಕ್ಕಿದ್ದಂತೆ ನೀರು ಕಚ್ಚಿತು. ಅಭಿಮಾನಿಗಳನ್ನು ಕಂಡಾಗ ನಗುಮುಖದಿಂದಲೇ ಕೈಸನ್ನೆ ಮಾಡಿದ ಕೊಹ್ಲಿ ಬಳಿಕ ಕ್ಯಾಬಿನ್‌ನಲ್ಲಿ ಕುಳಿತು ಬಿಕ್ಕಿ-ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಭಿಮಾನಿಗಳಿಗೂ ಬೇಸರವುಂಟುಮಾಡಿದೆ. ಇದನ್ನೂ ಓದಿ: 48 ವರ್ಷಗಳಲ್ಲೇ ಮೊದಲು! ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ

ಗುರುವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್‌ ಆರಂಭದ 2ನೇ ಎಸೆತದಲ್ಲೇ ವಿಕೆಟ್‌ ಕೈಚೆಲ್ಲಿದರು. ಆದ್ರೆ 2ನೇ ವಿಕೆಟ್‌ಗೆ ಶುಭಮನ್ ಗಿಲ್, ಜೊತೆಗೂಡಿದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ಶ್ರೀಲಂಕಾ ಬೌಲರ್‌ಗಳನ್ನ ಬೆಂಡೆತ್ತಿದರು. 2ನೇ ವಿಕೆಟ್‌ಗೆ ಈ ಜೋಡಿ 179 ಎಸೆತಗಳಲ್ಲಿ 189 ರನ್‌ ಬಾರಿಸಿತ್ತು. ಇದನ್ನೂ ಓದಿ: ಶಮಿ ದಾಳಿಗೆ ಲಂಕಾ ಭಸ್ಮ – 302 ರನ್‌ಗಳ ಭರ್ಜರಿ ಜಯ, ಸೆಮಿಗೆ ಟೀಂ ಇಂಡಿಯಾ

ಪಂದ್ಯದ ಆರಂಭದಲ್ಲೇ ಶ್ರೀಲಂಕಾದ ಕ್ಷೇತ್ರ ರಕ್ಷಕರು ತೋರಿದ ಕಳಪೆ ಪ್ರದರ್ಶನದಿಂದ ಹಲವು ಬಾರಿ ಜೀವದಾನ ಪಡೆದಿದ್ದ ವಿರಾಟ್ ಕೊಹ್ಲಿ, ನಂತರ ಸಿಡಿಲಬ್ಬರದ ಆಟಕ್ಕೆ ಮುಂದಾಗಿದ್ದರು. ಒಂದೂ ಸಿಕ್ಸರ್‌ ಸಿಡಿಸದಿದ್ದರೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟುವ ಭರವಸೆ ಮೂಡಿಸಿದ್ದರು. ಆದ್ರೆ ಶ್ರೀಲಂಕಾದ ದಿಲ್ಷಾನ್ ಮಧುಶಂಕ ಬೌಲಿಂಗ್ ನಲ್ಲಿ ನಿಸ್ಸಾಂಕಗೆ ಕ್ಯಾಚ್ ನೀಡಿ ಮೈದಾನ ತೊರೆದರು.‌ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ ಏಷ್ಯನ್ ಕಂಡೀಷನ್ಸ್ ಗಳಲ್ಲಿ ಆಡಿದ್ದ 188 ಇನಿಂಗ್ಸ್‌ನಲ್ಲಿ 8 ಸಾವಿರ ರನ್ ಗಡಿ ಮುಟ್ಟಿದ್ದರೆ, ವಿರಾಟ್ ಕೊಹ್ಲಿ 159 ಇನಿಂಗ್ಸ್ ನಲ್ಲೇ ಆ ದಾಖಲೆ ಮುರಿದಿದ್ದಾರೆ. ಇಷ್ಟಾದರೂ ಕೊಹ್ಲಿಗೆ ಸಮಾಧಾನ ತರಿಸದೇ ಕ್ಯಾಬಿನ್‌ನಲ್ಲಿ ಕಣ್ಣೀರಿಟ್ಟರು.

ಒಟ್ಟಿನಲ್ಲಿ ಇನ್ನೆರಡು ಲೀಗ್‌ ಪಂದ್ಯಗಳಿದ್ದು, ಉಳಿದ ಪಂದ್ಯಗಳಲ್ಲಾದರೂ ಕೊಹ್ಲಿ ಶತಕ ಪೂರೈಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.  ಇದನ್ನೂ ಓದಿ: ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಆಫ್ರಿದಿ – ಟಾಪ್ 10 ರಲ್ಲಿ ಇಬ್ಬರು ಟೀಂ ಇಂಡಿಯಾ ಆಟಗಾರರು

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್