ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿದವರು ಸ್ವಾತಂತ್ರ್ಯ ಹೋರಾಟಗಾರರೆಂದ ಏಕನಾಥ್‌ ಶಿಂಧೆ ವಿರುದ್ಧ ಕನ್ನಡಿಗರ ಆಕ್ರೋಶ

Public TV
2 Min Read

ಬೆಳಗಾವಿ: ಗಡಿ ಹೋರಾಟದಲ್ಲಿ (Border Dispute) ಗಲಭೆ ಸೃಷ್ಟಿಸಿದವರನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ (Freedom Fighters) ಹೋಲಿಸಿದ ಮಹಾರಾಷ್ಟ್ರ (Maharashtra) ಸಿಎಂ ಏಕನಾಥ್‌ ಶಿಂಧೆ (Eknath Shinde)  ವಿರುದ್ಧ ಕನ್ನಡಪರ ಹೋರಾಟಗಾರರಾದ ಅಶೋಕ್ ಚಂದರಗಿ ಆಕ್ರೋಶ ವ್ಯಕ್ತಪಡಿಸಿದರು.

ಗಡಿ ಹೋರಾಟದಲ್ಲಿ ಮೃತಪಟ್ಟ ಮರಾಠಿಗರಿಗೆ ಸ್ವಾತಂತ್ರ್ಯ ಹೋರಾಟಗಾರರ ರೀತಿ ಪಿಂಚಣಿ ನೀಡುವುದಾಗಿ ಏಕನಾಥ ಶಿಂಧೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಏಕನಾಥ್‌ ಶಿಂಧೆ ಹೇಳಿಕೆ ಪ್ರಚೋದನಾತ್ಮಕವಾಗಿದೆ. ಬೆಳಗಾವಿಯಲ್ಲಿ (Belagavi) ಏನು ನಡೆದಿತ್ತು ಎಂದು ಇಡೀ ಜಗತ್ತಿಗೆ ಗೊತ್ತಿದೆ. 1956 ರಿಂದ 1986ರವರೆಗೆ ಕನ್ನಡಿಗರ ವಿರುದ್ಧ ಹಿಂಸಾಚಾರ ಮಾಡಿ ಗೋಲಿಬಾರ್‌ನಲ್ಲಿ ಸತ್ತಿದ್ದಾರೆ. ಗೂಂಡಾಗಳ ಕುಟುಂಬಗಳಿಗೆ ನೀವು ಪೆನ್ಷನ್ ಕೊಡುತ್ತಿದ್ದೀರಿ. ಮತ್ತೊಂದು ರಾಜ್ಯದ ವಿರುದ್ಧ ಚಳವಳಿ ಮಾಡೋರಿಗೆ ಪ್ರಚೋದನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇದನ್ನು ಕರ್ನಾಟಕ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕರ್ನಾಟಕದ ಉದ್ಯಮಿಗಳು ಪುದುಚೇರಿಯಲ್ಲಿ ಉದ್ಯಮ ಮಾಡಲು ಸಕಲ ನೆರವು: ಪುದುಚೇರಿ ಗೃಹಸಚಿವ

1986ರಲ್ಲಿ ಶರದ್ ಪವಾರ್ ಚಳವಳಿ ಮಾಡಿದಾಗ ಛಗನ್ ಭುಜಬಲ್ ಸಹ ಬಂದಿದ್ರು. ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದ ಶಿವಸೇನೆಯವರು ಎಂಇಎಸ್ ಜೊತೆಗೂಡಿ ಗಲಭೆ ಮಾಡಿದ್ದರು. ಗೂಂಡಾಗಿರಿ ಮಾಡಿ ಕನ್ನಡ ಪತ್ರಿಕಾಲಯಗಳಿಗೆ ಬೆಂಕಿ ಹಚ್ಚಿದ್ರು. ಬೆಳಗಾವಿ ನಗರಕ್ಕೆ ನೀರು ಪೂರೈಸುವ ಘಟಕಕ್ಕೆ ವಿಷ ಹಾಕಲು ಯತ್ನಿಸಿದರು. ಬೆಳಗಾವಿ ನಗರಕ್ಕೆ ನೀರು ಪೂರೈಸುವ ಹಿಂಡಲಗಾ ಬಳಿಯ ಪಂಪಿಂಗ್ ಸ್ಟೇಷನ್ ಸುಡಲು ಯತ್ನಿಸಿದ್ರು. ಅಂದಿನ ಬೆಳಗಾವಿ SP ಕೆ.ನಾರಾಯಣ್ ಗೋಲಿಬಾರ್‌ಗೆ ಆದೇಶಿಸಿದಾಗ 9 ಜನ ಮೃತಪಟ್ಟಿದ್ದರು. ಇಂತಹ ಅನೇಕ ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳು ಬೆಳಗಾವಿಯಲ್ಲಿವೆ. ಅವರೇನೂ ಸ್ವಾತಂತ್ರ್ಯ ಚಳವಳಿ ಮಾಡಿದವರಲ್ಲ. ಸ್ವಾತಂತ್ರ್ಯ ಚಳವಳಿ ಮಾಡಿದ ಕುಟುಂಬಗಳಲ್ಲ. ಹಿಂಸಾಚಾರ, ಗೂಂಡಾಗಿರಿ ಮಾಡಿ ಗೋಲಿಬಾರ್‌ನಲ್ಲಿ ಸತ್ತವರ ಕುಟುಂಬಕ್ಕೆ ಪೆನ್ಷನ್ ಕೊಡ್ತಿದ್ದಾರೆ. ಇದು ಮತ್ತೊಂದು ರಾಜ್ಯದ ವಿರುದ್ಧ ಪ್ರಚೋದನೆ, ಸಿಎಂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಿಎಂ ಏಕನಾಥ್‌ ಶಿಂಧೆ ಹೇಳಿಕೆಯನ್ನು ವಿರೋಧಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಅಶೋಕ್‌ ಚಂದರಗಿ ಒತ್ತಾಯಿಸಿದರು. ಇದನ್ನೂ ಓದಿ: ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಆರಂಭಕ್ಕೆ ಡಿಸೆಂಬರ್ ಡೆಡ್‌ಲೈನ್: ಪ್ರಭು ಚೌಹಾಣ್

ನಿನ್ನೆ ಮಹಾರಾಷ್ಟ್ರದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಅವರನ್ನು ನಾಡದ್ರೋಹಿ ಬೆಳಗಾವಿಯ ಎಂಇಎಸ್ ನಾಯಕರ ನಿಯೋಗ ಭೇಟಿಯಾಗಿದ್ದರು. ಈ ವೇಳೆ ಗಡಿ ಹೋರಾಟ ವೇಳೆ ಗಲಭೆ ಸೃಷ್ಟಿಸಿ ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮಾದರಿಯಲ್ಲಿ 20 ಸಾವಿರ ಪಿಂಚಣಿ ನೀಡುವುದಾಗಿ ಮಹಾರಾಷ್ಟ್ರ ಸಿಎಂ ಹೇಳಿಕೆ ನೀಡಿದ್ದರು. ರಾಜ್ಯ ಸರ್ಕಾರದ ವತಿಯಿಂದ ಗಡಿಭಾಗದ ಮರಾಠಿಗರಿಗೆ ಸರ್ಕಾರಿ ಯೋಜನೆಯ ಲಾಭ ಒದಗಿಸುವ ಭರವಸೆ ವ್ಯಕ್ತಪಡಿಸಿದರು. ಗಡಿ ಹೋರಾಟದಲ್ಲಿ ಮಡಿದ ಕುಟುಂಬಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮಾದರಿಯಲ್ಲಿ ಪಿಂಚಣಿ. ಗಡಿಭಾಗದ ಮರಾಠಿಗರಿಗೆ ಮಹಾತ್ಮ ಜ್ಯೋತಿಬಾ ಫುಲೆ ಆರೋಗ್ಯ ವಿಮೆ ಕಾರ್ಡ್ ನೀಡುವುದಾಗಿ ಏಕನಾಥ್‌ ಶಿಂಧೆ ಹೇಳಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *