ದೇಶದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಬೇಕು: ಮನವಿ ಮಾಡಿ ಕಣ್ಣೀರಿಟ್ಟ ಕಿಮ್‌ ಜಾಂಗ್‌ ಉನ್‌

Public TV
2 Min Read

ಪ್ಯೊಂಗ್ಯಾಂಗ್: ದೇಶದ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಮನವಿ ಮಾಡಿ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್‌ ಉನ್‌ (Kim Jong Un) ಕಣ್ಣೀರಿಟ್ಟಿದ್ದಾರೆ.

ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ಕಿಮ್‌ ಜಾಂಗ್‌ ಉನ್‌ ಕಣ್ಣೀರಿಟ್ಟಿದ್ದಾರೆ. ಉತ್ತರ ಕೊರಿಯಾದಲ್ಲಿ (North Korea) ಜನನ ಪ್ರಮಾಣ ಕ್ಷೀಣಿಸುತ್ತಿದೆ. ರಾಷ್ಟ್ರೀಯ ಶಕ್ತಿಯನ್ನು ಬಲಪಡಿಸಲು ದೇಶದ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಮನವಿ ಮಾಡಿದ್ದಾರೆ. ಇದನ್ನೂ ಓದಿ: BSF ಯೋಧರನ್ನು ಬಲಿ ಪಡೆದಿದ್ದ ಉಗ್ರ ಪಾಕ್‌ನಲ್ಲಿ ಗುಂಡಿನ ದಾಳಿಗೆ ಬಲಿ- 2015ರಲ್ಲಿ ನಡೆದಿದ್ದೇನು?

ಪ್ಯೋಂಗ್ಯಾಂಗ್‌ನಲ್ಲಿ ತಾಯಂದಿರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಮನವಿ ಮಾಡುವಾಗ ಬಿಳಿ ಕರವಸ್ತ್ರದಿಂದ ತನ್ನ ಕಣ್ಣುಗಳನ್ನು ಒರೆಸಿಕೊಂಡ ದೃಶ್ಯ ಕಂಡುಬಂದಿದೆ. ಜನನ ಪ್ರಮಾಣ ಕುಸಿತವಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಉತ್ತಮ ಆರೈಕೆ ಮತ್ತು ಅವರಿಗೆ ಶಿಕ್ಷಣ ಒದಗಿಸುವುದು ನಮ್ಮ ಕುಟುಂಬದ ಆದ್ಯ ಕರ್ತವ್ಯ. ನಾವು ನಮ್ಮ ತಾಯಂದಿರೊಂದಿಗೆ ಒಟ್ಟಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಜನನದಲ್ಲಿ ವಿಸ್ತೃತ ಕುಸಿತದ ನಡುವೆ 2023 ರ ಹೊತ್ತಿಗೆ ಉತ್ತರ ಕೊರಿಯಾದಲ್ಲಿ ಜನಿಸಿದ ಮಕ್ಕಳ ಸರಾಸರಿ ಸಂಖ್ಯೆ 1.8 ರಷ್ಟಿದೆ. ಇದನ್ನೂ ಓದಿ: ನೈಜೀರಿಯಾದಲ್ಲಿ ಗುರಿ ತಪ್ಪಿದ ಸೇನಾ ಡ್ರೋನ್‌ ದಾಳಿ – 85 ಮಂದಿ ನಾಗರಿಕರು ಬಲಿ

ಕಡಿಮೆ ಜನನ ದರವನ್ನು ನಿಭಾಯಿಸುವ ಪ್ರಯತ್ನದಲ್ಲಿ ಉತ್ತರ ಕೊರಿಯಾವು ಮೂರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಆದ್ಯತೆಯ ಉಚಿತ ವಸತಿ ವ್ಯವಸ್ಥೆ, ರಾಜ್ಯ ಸಬ್ಸಿಡಿಗಳು, ಉಚಿತ ಆಹಾರ, ಔಷಧ ಮತ್ತು ಗೃಹೋಪಯೋಗಿ ವಸ್ತುಗಳು, ಮಕ್ಕಳಿಗೆ ಶೈಕ್ಷಣಿಕ ಸವಲತ್ತು ಸೇರಿ ಅನೇಕ ಕೊಡುಗೆಗಳನ್ನು ಘೋಷಿಸಿದೆ.

ದಕ್ಷಿಣ ಕೊರಿಯಾದ ಫಲವಂತಿಕೆ ದರವು ಜಗತ್ತಿನಲ್ಲಿ ಅತ್ಯಂತ ಕಡಿಮೆಯಾಗಿದೆ. ಸ್ಪರ್ಧಾತ್ಮಕ ಶಾಲಾ ಮಾರುಕಟ್ಟೆ, ದುರ್ಬಲ ಮಕ್ಕಳ ಆರೈಕೆ, ಪುರುಷ ಕೇಂದ್ರಿತ ಕಾರ್ಪೊರೇಟ್ ಸಂಸ್ಕೃತಿ ಇದಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಉತ್ತರ ಕೊರಿಯಾದಲ್ಲಿ 2034 ರಿಂದ ಜನಸಂಖ್ಯೆ ತಗ್ಗುವ ಸಾಧ್ಯತೆ ಇದೆ. 2070 ರ ವೇಳೆಗೆ ದೇಶದ ಜನಸಂಖ್ಯೆಯು 2.3 ಕೋಟಿಗೆ ಇಳಿಯಲಿದೆ ಎಂದು ಯುಕೆ ದೈನಿಕ್‌ ವರದಿ ಮಾಡಿದೆ.

Share This Article