ಹತ್ತು ಅಡಿ ಜಾಗಕ್ಕಾಗಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

Public TV
1 Min Read

ಕಲಬುರಗಿ: ಹತ್ತು ಅಡಿ ಜಾಗಕ್ಕಾಗಿ ವ್ಯಕಿಯೊಬ್ಬನ ಬರ್ಬರ ಹತ್ಯೆ ಮಾಡಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಜಾದಪುರದಲ್ಲಿ ನಡೆದಿದೆ.

ಚಂದ್ರಕಾಂತ್ ಜಮಾದರ್ ಕೊಲೆಯಾದ ದುರ್ದೈವಿ. ಚಂದ್ರಕಾಂತ್ ಮನೆ ಹಿತ್ತಲಿನಲ್ಲಿ ಹತ್ತು ಅಡಿ ಜಾಗ ಇತ್ತು. ಪಕ್ಕದ ಮನೆ ನಿವಾಸಿ ಮೌನೇಶ್ ಗುತ್ತೆದಾರ್ ಚಂದ್ರಕಾಂತ್ ಜೊತೆ ಆ ಜಾಗ ತಮಗೆ ಸೇರಬೇಕು ಎನ್ನುತ್ತಿದ್ದ. ಚಂದ್ರಕಾಂತ್ ಆ ಜಾಗ ತಮಗೆ ಸೇರಬೇಕು ಎಂದು ಹೇಳಿದ್ದ. ಹೀಗೆ ಜಾಗದ ವಿಚಾರವಾಗಿ ಇಬ್ಬರ ಮಧ್ಯೆ ಕಿರಿಕ್ ಆಗಿ ಜಗಳ ವಿಕೋಪಕಕ್ಕೆ ಹೋಗಿದ್ದು, ಚಂದ್ರಕಾಂತ್‌ನನ್ನು ಮೌನೇಶ್ ಗುತ್ತೆದಾರ್ ಹಾಗೂ ಕುಟುಂಬದವರು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ – ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೆ ಸಾಕ್ಷಿ ಮಲಿಕ್‌ ಆರೋಪ

ಕಲಬುರಗಿ ವಿ.ವಿ.ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು ಮಳೆಯ ಸಮಸ್ಯೆಗೆ ಪರಿಹಾರ ಕೊಡದ ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ: ಸುರೇಶ್ ಬಾಬು

Share This Article