ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ (Bihar) ಉದ್ಘಾಟನೆಯಾದ ಡಬಲ್ ಡೆಕ್ಕರ್ ಫ್ಲೈವರ್‌ನ (Double Decker Flyover) ನಟ್ ಬೋಲ್ಟ್‌ಗಳನ್ನು ಮಕ್ಕಳು (Kids) ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೂನ್ 11 ರಂದು ಉದ್ಘಾಟನೆ ಮಾಡಿದ್ದರು. ಉದ್ಘಾಟನೆಯಾದ ಎರಡನೇ ದಿನದಲ್ಲಿ 422 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಫ್ಲೈ ಓವರ್‌ನ ಬೋಲ್ಟ್‌ಗಳನ್ನು ಮಕ್ಕಳು ತೆಗೆದಿದ್ದಾರೆ.
ಹಗಲು ಹೊತ್ತಿನಲ್ಲೇ ಮಕ್ಕಳು ಬೋಲ್ಟ್‌ಗಳನ್ನು ತೆಗೆಯುತ್ತಿರುವುದನ್ನು ಒಬ್ಬರು ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡಿ ಪ್ರಶ್ನಿಸುತ್ತಿದ್ದಂತೆ ಮಕ್ಕಳು ಸ್ಥಳದಿಂದ ಓಡಿ ಹೋಗಿದ್ದಾರೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ
🚨 Patna’s double-decker flyover was opened on June 11, and these kids are seen removing its nuts and bolts. A Serious Safety Hazard!
They don’t appear local, possibly Bangladeshi! pic.twitter.com/Hk0j3LTacm
— Gems (@gemsofbabus_) June 13, 2025
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಮೂಲಸೌಕರ್ಯ ಸುರಕ್ಷತೆಯ ಬಗ್ಗೆ ಗಂಭೀರ ಆತಂಕವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಮಾನ ಪತನದ ವೀಡಿಯೋ ಶೂಟ್ ಮಾಡಿದ ಹುಡುಗ ಇವನೇ ನೋಡಿ
ಮಕ್ಕಳಿಗೆ ಸಾರ್ವಜನಿಕ ಆಸ್ತಿ ಪಾಸ್ತಿಗಳ ಬಗ್ಗೆ ಪಾಠ ಬೋಧಿಸುವುದು ಉತ್ತಮ ಎಂಬ ಸಲಹೆ ವ್ಯಕ್ತವಾಗಿದೆ. ಬಿಹಾರದಲ್ಲಿ ಆಗಾಗ ನಿರ್ಮಾಣ ಹಂತದ ಸೇತುವೆಗಳು, ಕಟ್ಟಡಗಳು ಉರುಳಿ ಬೀಳುವ ಸುದ್ದಿಯಾಗುತ್ತಿರುತ್ತದೆ. ಈ ರೀತಿ ಕುಸಿದು ಬೀಳಲು ಕಬ್ಬಿಣ ಇತ್ಯಾದಿ ವಸ್ತುಗಳ ಕಳ್ಳತನವೂ ಕಾರಣ ಆಗಿರಬಹುದು ಎಂಬ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.