ಕೇಸ್‌ ದಾಖಲಾಗುವ ಮೊದಲೇ A2 ಆರೋಪಿಯನ್ನು ಬಂಧಿಸಿದ್ದು ಅನುಮಾನಾಸ್ಪದ – ರೇವಣ್ಣ ಜಾಮೀನು ಆದೇಶದಲ್ಲಿ ಏನಿದೆ?

Public TV
2 Min Read

ಬೆಂಗಳೂರು: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (Kidnap Case) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD Revanna) ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೋರ್ಟ್‌ ಜಾಮೀನು ಮಂಜೂರು (Bail) ಮಾಡುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಎನ್ನುವುದನ್ನು ಕೋರ್ಟ್‌ ತನ್ನ ಆದೇಶದಲ್ಲಿ ಹಲವು ಕಾರಣಗಳನ್ನು ನೀಡಿದೆ.

ಕೋರ್ಟ್‌ ಆದೇಶದಲ್ಲಿ ಏನಿದೆ?
ಮಹಿಳೆಗೆ ಆರೋಪಿಯಿಂದ ತೊಂದರೆಯಿದೆ, ಜೀವ ಭಯ ಇದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳು ಇಲ್ಲ. ಪ್ರಕರಣ ದಾಖಲಾಗುವ ಮೊದಲೇ ಎ2 ಆರೋಪಿ ಸತೀಶ್ ಬಾಬುವನ್ನು ವಶಕ್ಕೆ ಪಡೆದಿದ್ದು ಅನುಮಾನಸ್ಪದವಾಗಿದೆ. ಐಪಿಸಿ ಸೆಕ್ಷನ್‌ 364 ಎ (ಬೆದರಿಸಿ ಅಪಹರಣ) ಅನ್ವಯವಾಗುವ ಪೂರಕವಾದ ಯಾವುದೇ ಸಾಕ್ಷಿಗಳು ಇಲ್ಲ.

 

ಸಂತ್ರಸ್ತೆಯ 164 ಹೇಳಿಕೆಯನ್ನು (ನ್ಯಾಯಾಧೀಶರ ಮುಂದೆ ನೀಡುವ ಹೇಳಿಕೆ) ಪಡೆಯಬೇಕಿದೆ ಎಂದು ಆರೋಪಿಯ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ 161 ಹೇಳಿಕೆಯನ್ನು (ತನಿಖಾಧಿಕಾರಿ ಮುಂದೆ ಹೇಳಿಕೆ) ಯಾವಾಗ ದಾಖಲು ಮಾಡಿದ್ದಾರೆ ಎಂದು ಉಲ್ಲೇಖ ಮಾಡಿಲ್ಲ

ಸಂತ್ರಸ್ತೆಯ ಹೇಳಿಕೆ ನೀಡಿದ್ದ ಪೊಲೀಸರ ವರದಿ ಪ್ರಕಾರ ಆರೋಪಿಯ (ರೇವಣ್ಣ) ಮಗನ ವಿರುದ್ಧ ಅತ್ಯಾಚಾರದ ಆರೋಪಗಳು ಮಾತ್ರ ನಮೂದಾಗಿದೆ. ಆದರೆ ರೇವಣ್ಣ ಅಪಹರಣ ಮಾಡಿದ್ದಕ್ಕೆ ಹೇಳಿಕೆ ಉಲ್ಲೇಖ ಮಾಡಿಲ್ಲ.  ಇದನ್ನೂ ಓದಿ: 380ರ ಪೈಕಿ ಈಗಾಗಲೇ ಮೋದಿ 270 ಗೆದ್ದಿದ್ದಾರೆ : ಅಮಿತ್‌ ಶಾ ವಿಶ್ವಾಸ

 

ಸಂತ್ರಸ್ತೆಯ 164 ಹೇಳಿಕೆ ದಾಖಲು ಮಾಡಲು ತಡವಾಗಿದ್ದು ಯಾಕೆ ಎಂಬುದನ್ನು ತಿಳಿಸಲು ಎಸ್‌ಐಟಿ (SIT) ಸಫಲವಾಗಿಲ್ಲ. ಸಂತ್ರಸ್ತ ಮಹಿಳೆಗೆ ಜೀವ ಬೆದರಿಕೆ ಅಥವಾ ಯಾವುದೇ ಬೇಡಿಕೆ ಕೇಳಿರುವುದಕ್ಕೆ ಪೂರಕ ಸಾಕ್ಷ್ಯಗಳು ಇಲ್ಲ

ಇಡೀ ಪ್ರಕರಣದಲ್ಲಿ 364 ಎ ಅಳವಡಿಕೆಗೆ ಪೂರಕವಾದ ಸಾಕ್ಷ್ಯಗಳು ಇಲ್ಲ. ಮಗನನ್ನು ರಕ್ಷಣೆ ಮಾಡಿದ್ದಾರೆ. ಅದಕ್ಕೆ ಈ ಕೃತ್ಯವನ್ನು ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳನ್ನು ಎಸ್‌ಐಟಿ ಒದಗಿಸಿಲ್ಲ.

2019 ರ ಚುನಾವಣಾ ಅಕ್ರಮದ ಬಗ್ಗೆ ಇಲ್ಲಿ ಉಲ್ಲೇಖಸಿದ್ದಾರೆ. ಆದರೆ ಆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ಇದೆ ಹೀಗಾಗಿ ಆ ವಿಚಾರ ಮಾನ್ಯ ಮಾಡಲು ಸಾಧ್ಯವಿಲ್ಲ. ಇಲ್ಲಿ ಗಂಭೀರವಾದ ಆರೋಪ ಇರುವುದು ಪ್ರಜ್ವಲ್ ರೇವಣ್ಣ ಮೇಲೆ ಹೊರತು ರೇವಣ್ಣ ಮೇಲೆ ಅಲ್ಲ.

 

Share This Article