ಕಿಚ್ಚ ಸುದೀಪ್ (Kichcha Sudeep) ಅಕ್ಕನ ಮಗ ಸಂಚಿತ್ ಸಂಜೀವ್ (Sanchith Sanjeev) ಸ್ಯಾಂಡಲ್‌ವುಡ್ ಅಖಾಡಕ್ಕೆ ಇಳಿದಾಗಿದ್ದಾರೆ. ‘ಮ್ಯಾಂಗೋ ಪಚ್ಚ’ ಸಿನಿಮಾದ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈಗಾಗಲೇ ಈ ಚಿತ್ರದ ಆಡಿಯೋ ಹಕ್ಕುಗಳು ಸರೆಗಮ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಇದೀಗ ಮ್ಯಾಂಗೋ ಪಚ್ಚ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.
ಕಿಚ್ಚ ಸುದೀಪ್ ಅವರು ಸಂಚಿತ್ ಮೊದಲ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಅಕ್ಕನ ಮಗನ ಚಿತ್ರಕ್ಕೆ ಶುಭ ಹಾರೈಸಿದ ಮ್ಯಾಂಗೋ ಪಚ್ಚ (Mango Pachcha) ರಿಲೀಸ್ ದಿನಾಂಕ ಪ್ರಕಟಿಸಿದ್ದಾರೆ. ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು (2026ರ ಜ.15) ರಂದು ಚಿತ್ರ ಬಿಡುಗಡೆಯಾಗುತ್ತದೆ. ಇಡೀ ತಂಡಕ್ಕೆ ಶುಭಾಶಯಗಳು ಎಂದು ಸುದೀಪ್ ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಇದನ್ನೂ ಓದಿ: ಕಪ್ಪು ಉಡುಗೆಯಲ್ಲಿ ಕಂಗೊಳಿಸಿದ ಮೋಹಕತಾರೆ
ಅಂದಹಾಗೆ ಈ ಸಿನಿಮಾವನ್ನು ವಿವೇಕ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದ ಜೀವಾಳ. ‘ಮ್ಯಾಂಗೋ ಪಚ್ಚ’ ಚಿತ್ರಕ್ಕೆ ಕೆಆರ್‌ಜಿ ಹಾಗೂ ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.
ಇನ್ನು ಸಂಚಿತ್ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟ ಮಯೂರ್ ಪಟೇಲ್, ಮ್ಯಾಕ್ಸ್ ಮಂಜು, ಹರಿಣಿ ಶ್ರೀಕಾಂತ್, ಭಾವನ, ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ನಟಿ ಹಂಸಾ, ಪ್ರಶಾಂತ್ ಹೀರೆಮಠ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಈ ಸಿನಿಮಾದ ಮತ್ತೊಂದು ಅಟ್ರ್ಯಾಕ್ಷನ್ ಅಂದರೆ, ಚರಣ್ ರಾಜ್ ಸಂಗೀತ ಹಾಗೂ ಶೇಖರ್ ಚಂದ್ರ ಅವರ ಕ್ಯಾಮೆರಾವರ್ಕ್. ವಿಶ್ವಾಸ್ ಈ ಚಿತ್ರಕ್ಕೆ ಆರ್ಟ್ ವರ್ಕ್ ಮಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಔಟ್

