ಸಲ್ಮಾನ್ ಖಾನ್ ಜೊತೆ ಕುಸ್ತಿ ಆಡಿದ ಕಿಚ್ಚ ಸುದೀಪ್

Public TV
1 Min Read

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರ ಜೊತೆ ಕುಸ್ತಿ ಆಡಿದ್ದಾರೆ.

ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ಸಲ್ಮಾನ್ ಖಾನ್ ಅವರ ಜೊತೆ ಕುಸ್ತಿ ಆಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸುಲ್ತಾನ್ v/s ಪೈಲ್ವಾನ್ ಎಂದು ಬರೆಯಲಾಗಿದೆ. ಅಲ್ಲದೆ, “ಇದು ಮತ್ತೊಂದು ಪೋಸ್ಟರ್ ಅಲ್ಲ. ಸಲ್ಮಾನ್ ಒಮ್ಮೆ ಒಬ್ಬರನ್ನು ಇಷ್ಟಪಟ್ಟರೆ ಅವರ ಜೊತೆಗಿನ ಭಾಂದವ್ಯ ಹೀಗೆ ಇರುತ್ತದೆ. ನಿಮ್ಮ ಜೀವನದಲ್ಲಿ ನನಗೊಂದು ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಲ್ಮಾನ್ ಸರ್.” ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಸುದೀಪ್ ಪ್ರಭುದೇವ ಹಾಗೂ ಸಲ್ಮಾನ್ ಖಾನ್ ಜೊತೆ ಡ್ಯಾನ್ಸ್ ಮಾಡಿದ್ದ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಪ್ರಭುದೇವ ನಿರ್ದೇಶನದ `ದಬಾಂಗ್-3′ ಚಿತ್ರದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಸಲ್ಮಾನ್ ಖಾನ್, ನಿರ್ಮಾಪಕ ಸಾಜಿದ್ ನದಿಯಾವಾಲಾ ಹಾಗೂ ನಿರ್ದೇಶಕ ಪ್ರಭುದೇವ ಜೊತೆ ಸೂಪರ್ ಹಿಟ್ `ಊರ್ವಶಿ’ ಹಾಡಿಗೆ ಡ್ಯಾನ್ಸ್ ಕಲಿತ ವಿಡಿಯೋವನ್ನು ಹಂಚಿಕೊಂಡಿದ್ದರು.

ಸುದೀಪ್ ದಬಾಂಗ್- 3 ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರ ಹೀರೋ ಪಾತ್ರಕ್ಕೆ ಇರುವಷ್ಟೇ ಸಮಾನ ಪ್ರಾಮುಖ್ಯತೆಯನ್ನು ಹೊಂದಿದೆ. ಚಿತ್ರದಲ್ಲಿ ಗೂಂಡಾ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 20ರಂದು ಕನ್ನಡ, ಹಿಂದೆ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

 

View this post on Instagram

 

The master Prabhu sir himslef …. .. What a moment.

A post shared by kicchasudeep (@kichchasudeepa) on

Share This Article
Leave a Comment

Leave a Reply

Your email address will not be published. Required fields are marked *