ಈ ಹೊಸ ಹೆಜ್ಜೆ ನಿಮಗೆ ಅದೃಷ್ಟ ತರಲಿ – ಯಶ್‍ಗೆ ಕಿಚ್ಚನ ಹಾರೈಕೆ

1 Min Read

ಟಾಕ್ಸಿಕ್ (Toxic) ಚಿತ್ರ ಟೀಸರ್ ರಿಲೀಸ್ ಆಗಿದ್ದು, ಭಾರತೀಯ ಸಿನಿಮಾ ಮಡಿವಂತಿಕೆ ಕೊಂಡಿಯನ್ನೇ ಬ್ರೇಕ್ ಮಾಡಿದೆ. ಟೀಸರ್‌ನಲ್ಲಿ ಇಣುಕಿದ ಹಸಿಬಿಸಿ ದೃಶ್ಯಗಳು ಸಿನಿಮೋದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ಜೊತೆಗೆ ಚರ್ಚೆಗೀಡು ಮಾಡಿದೆ. ಕೆಲವರು ಚಿಯರ್ಸ್ ಎಂದಿದ್ದಾರೆ. ಇನ್ನ್ ಕೆಲವರು ಛೀ ಛೀ ಎಂದಿದ್ದಾರೆ.

ಯಶ್ (Rocking Star Yash) ಸಿದ್ಧಸೂತ್ರವನ್ನಂತೂ ಬ್ರೇಕ್ ಮಾಡಿದ್ದಾರೆ. ಹೀಗೆ ಟಾಕ್ಸಿಕ್ ವಿಚಾರವಾಗಿ ಈಗಾಗ್ಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಸಿನಿಮಾ ಕ್ಷೇತ್ರದ ಗಣ್ಯರು ಯಶ್ ಕೆಲಸವನ್ನ ಮೆಚ್ಚಿದ್ದಾರೆ. ನಟ ಕಿಚ್ಚ ಸುದೀಪ್ (Kichcha Sudeep) ಕೂಡ ಟಾಕ್ಸಿಕ್ ಮೆಚ್ಚಿ ಹಾಡಿ ಹೊಗಳಿದ್ದಾರೆ. ಎಕ್ಸ್ ಖಾತೆಯಲ್ಲಿ ಯಶ್‍ಗೆ ಶುಭ ಹಾರೈಸಿದ ಕಿಚ್ಚ, ಟಾಕ್ಸಿಕ್ ಟೀಸರ್ ಕುರಿತು ತಮ್ಮ ಅಭಿಪ್ರಾಯವನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟಾಕ್ಸಿಕ್ ಟೀಸರ್ ನೋಡಿ ಆರ್‌ಜಿವಿ ಹೇಳಿದ್ದೇನು ಗೊತ್ತಾ..?

ಯಶ್‍ಗೆ ವಿಶ್ ಮಾಡಿರುವ ಕಿಚ್ಚ ಟಾಕ್ಸಿಕ್ ಟೀಸರ್ ಸೃಷ್ಟಿಸಿದ ಪರಿಣಾಮವನ್ನು ಅವಲೋಕಿಸಿದ್ದಾರೆ. ಹೀಗಾಗಿ “ಯಾವಾಗ್ಲೂ ಅಲೆಯ ವಿರುದ್ಧ ಹೋಗಲು ಬಹಳಷ್ಟು ಸಮಯ ಬೇಕಾಗುತ್ತದೆ”. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಹತ್ತಿರಕ್ಕೆ ಕೊಂಡೊಯ್ಯಲಿ. ನೀವು ನಿಮ್ಮ ಕಣ್ಣುಗಳನ್ನು ಹೊಸ ಹೆಜ್ಜೆಯತ್ತ ಇಟ್ಟಿದ್ದೀರಿ. ಚಿಯರ್ಸ್” ಎಂದಿದ್ದಾರೆ. ಈ ಮೂಲಕ ಯಶ್ ನಯಾ ಕೆಲಸವನ್ನ ಸುದೀಪ್ ಪ್ರೋತ್ಸಾಹಿಸಿದ್ದಾರೆ.

ರಿಷಬ್ ಶೆಟ್ಟಿ, ಸಂದೀಪ್ ರೆಡ್ಡಿ ವಂಗಾ, ರಾಮ್ ಗೋಪಾಲ್ ವರ್ಮಾ, ರಿತೇಶ್ ದೇಶಮುಖ್ ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ಟೀಸರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟಾಕ್ಸಿಕ್ ರಾಯ ಹೆಸರಿನ ಗುಟ್ಟು ಇದೇನಾ..?

Share This Article