ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಕಿಚ್ಚ

Public TV
1 Min Read

ಬೆಂಗಳೂರು: ನಟಿ ವಿಜಯಲಕ್ಷ್ಮಿಯವರು ಅನಾರೋಗ್ಯದ ವಿಷಯ ತಿಳಿದು ನಟ ಕಿಚ್ಚ ಸುದೀಪ್ ಅವರು 1 ಲಕ್ಷ ರೂಪಾಯಿಗಳನ್ನು ನೀಡಿ ಸಹಾಯ ಹಸ್ತ ಚಾಚಿದ್ದಾರೆ.

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿಗಳಾದ ಬಾ.ಮ.ಹರೀಶ್ ಅವರು ಮಾಹಿತಿ ನೀಡಿದ್ದು, ವಿಜಯ ಲಕ್ಷ್ಮಿ ಅವರಿಗೆ ಸಹಾಯ ಮಾಡಿದ ಸುದೀಪ್ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.

ವಿಜಯಲಕ್ಷ್ಮಿ ಅವರು ತೀವ್ರ ಜ್ವರ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯ ಖರ್ಚು ಬರಿಸುವ ಹಣವಿಲ್ಲದೆ ವಿಜಯಲಕ್ಷ್ಮಿ ಅವರ ಸಹೋದರಿ ಚಿತ್ರರಂಗದ ಸಹಾಯ ಕೋರಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯಿಂದ ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಆಗಮಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು.

ವಿಜಯಲಕ್ಷ್ಮಿಯವರ ಆರೋಗ್ಯ ಸಹಾಯವಲ್ಲದೇ ಚೇತರಿಸಿಕೊಂಡ ಬಳಿಕ ಮತ್ತೆ ಬಣ್ಣ ಹಚ್ಚಬೇಕೆಂಬ ಅವರ ಆಸೆಯನ್ನ ಈಡೇರಿಸಲು ಫಿಲ್ಮ್ ಚೇಂಬರ್ ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ನೀಡಿದ್ದರು. ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದ ವಿಜಯಲಕ್ಷ್ಮಿ ಅವರು ಸಾಹಸಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೇರಿದಂತೆ ಅನೇಕ ನಟರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

Share This Article
Leave a Comment

Leave a Reply

Your email address will not be published. Required fields are marked *