`ತಿಪ್ಪರ್‌ಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡʼ – ದರ್ಶನ್‌ಗೆ ಸುದೀಪ್‌ ಹೀಗಂದಿದ್ಯಾಕೆ?

Public TV
2 Min Read

ಅಭಿನಯ ಚಕ್ರವರ್ತಿ ಎಂದೇ ಫೇಮಸ್ ಆದವರು ಕಿಚ್ಚ ಸುದೀಪ್. ಯಾವುದೇ ಪಾತ್ರ ಕೊಟ್ಟರೂ ಜೀವ ತುಂಬುವ ಕಲಾವಿದ ಇವರು. ಆದರೆ ಕಿಚ್ಚ ಸುದೀಪ್ ಪೌರಾಣಿಕ ಪಾತ್ರಗಳಲ್ಲಿ ಕಾಣಿಸ್ಕೊಳ್ಳುವುದಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಅಸಲಿ ಕಾರಣ ಇದೀಗ ಬಿಚ್ಚಿಟ್ಟಿದ್ದಾರೆ ಸುದೀಪ್. ಹುಟ್ಟುಹಬ್ಬದ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಮನಬಿಚ್ಚಿ ಮಾತನಾಡಿದ್ದಾರೆ.

ಪೌರಾಣಿಕ ಪಾತ್ರಗಳಲ್ಲಿ ಸುದೀಪ್ ಯಾಕೆ ಅಭಿನಯಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುದುರೆ ಸವಾರಿ ಮಾಡಬೇಕಾದ ಕಾರಣಕ್ಕೆ ನನಗೆ ಪೌರಾಣಿಕ ಪಾತ್ರವೇ ಇಷ್ಟವಿಲ್ಲ. ಒಂದು ಬಾರಿ ಆದ ಅನುಭವದಿಂದ ನನಗೆ ಕುದುರೆ ಸವಾರಿ ಇಷ್ಟವಿಲ್ಲ ಎಂದಿದ್ದಾರೆ. ದರ್ಶನ್ ಫಾರ್ಮ್ಹೌಸ್‌ನಲ್ಲಿ ಓಡಿಸಿದ್ದೇ ಕೊನೆ ಮತ್ಯಾವತ್ತೂ ಕುದುರೆ ಸವಾರಿ ಮಾಡಿಯೇ ಇಲ್ಲ ಎಂದಿದ್ದಾರೆ ಸುದೀಪ್.ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್‌

ದರ್ಶನ್ ಒತ್ತಾಯ ಮಾಡಿದ್ದಕ್ಕೆ ಕುದುರೆ ಹತ್ತಿದ್ದರಂತೆ ಸುದೀಪ್ !

ನಾವು ಒಮ್ಮೆ ದರ್ಶನ್ ತೋಟಕ್ಕೆ ಹೋಗಿದ್ವಿ, ಅಲ್ಲಿ ದರ್ಶನ್ ಕುದುರೆ ಹತ್ತು ಹತ್ತು ಅಂತ ತುಂಬಾ ಫೋರ್ಸ್ ಮಾಡ್ದ , ನೀನ್ ತಿಪ್ಪರಲಾಗ ಹೊಡೆದ್ರೂ ನೀನು ಬೇಡ ನಿನ್ನ ಕುದುರೆ ಸಹವಾಸನೂ ಬೇಡ ಅಂತ ಹೇಳ್ದೆ. ಆದ್ರೂ ಕುದುರೆ ಹತ್ತಿಸಿದ್ರು. ಸರಿ ಅಂತ ನಾನು ಮೆತ್ತಗೆ ಇದನ್ನ ಯಾರಾದ್ರೂ ಹಿಡ್ಕೊಳ್ರಪ್ಪ ನೀವೇ ಅಂತ ಹೇಳಿ ಹೋಗ್ತಾ ಇದ್ದೆ. ಕುದುರೆ ಹೋಗ್ತಾ ಇತ್ತು. ಮುಂದೆ ದರ್ಶನ್ ಕುದುರೆ ಟಕ್‌ ಟಕ್‌ ಹೋಗ್ತಾ ಇತ್ತು. ಹೋಗ್ತಾ ಹೋಗ್ತಾ ಆ ಕುದುರೆ ಲಾಡಿ ಬಿಚ್ಕೊಂಡ್ಬಿಡ್ತು. ಆಗ ದರ್ಶನ್ ಕೆಳಗೆ ಬಿದ್ದ. ಅದನ್ನ ನೋಡಿದ್ ತಕ್ಷಣನೇ ನಿಲ್ಸಪ್ಪ ಫಸ್ಟು ಅಂದೆ. ಆವತ್ತು ಇಳಿದವನು ಇವತ್ತಿನವರೆಗೂ ಕುದುರೆ ಹತ್ತಿಲ್ಲ.

ಕುದುರೆ ಸವಾರಿಯ ಕೆಟ್ಟ ಅನುಭವ ಬಿಚ್ಚಿಟ್ಟ ಸುದೀಪ್ ?

ನನಗೆ ಕುದುರೆ ಓಡ್ಸೋದು ಒಂದ ಆಗಲ್ಲ, ಯಾಕಂದ್ರೆ ಒಂದ್ ಅನುಭವ ಆಗಿದೆ, ನನಗೇನೇ ಪೌರಾಣಿಕ ಪಾತ್ರ ಬಂದಿತ್ತು ಆ ಟೈಮಲ್ಲಿ. ಅವರು ಹೇಳಿದ್ರು ಅಂತ ತುಂಬಾ ಪ್ರಾಕ್ಟೀಸ್ ಮಾಡಿದ್ದೆ. ನಾನ್ ಸೀರಿಯಸ್ ಆಗಿ ಒಂದಷ್ಟು ದಿನ ಹೋಗಿ ಕುದುರೆ ಓಡಿಸುವುದನ್ನು ಕಲಿತೆ. ಒಂದು ದಿನ ಸುಮ್ನೆ ನಿಂತಿದ್ದ ಕುದುರೆ ಯಾಕೆ ಎಗರ್ತು ಅಂತ ಗೊತ್ತಾಗ್ಲಿಲ್ಲ. 20 ಮೀಟರ್ ದೂರ ಎಳಕೊಂಡು ಹೋಗ್ಬಿಟ್ಟಿತ್ತು. ಆವಾಗ ಆಗಿರೋ ಭಯ ಇದ್ಯಲ್ಲ ಪ್ರಪಂಚನೆ ನೋಡಿಬಿಟ್ಟೆ ನಾನು. ಅದಾದ್ಮೇಲೆ ಅರ್ಥ ಆಯ್ತು ಒಂದು ವಿಚಾರ. ಯಾವುದರ ಮೇಲೆ ಹತ್ತಿದ್ರೂ ಅದರ ಬ್ರೇಕ್, ಹ್ಯಾಂಡಲ್ ಎಲ್ಲಿದೆ ಅಂತ ಗೊತ್ತಿರಬೇಕು. ಕುದುರೆಯಲ್ಲಿ ಎಲ್ಲಿದೆ ಅಂತ ನನಗೆ ಗೊತ್ತಿಲ್ಲ.ಇದನ್ನೂ ಓದಿ: ಡಿಸೆಂಬರ್‌ಗೆ ಕಿಚ್ಚನ ಡಿಚ್ಚಿ: ಕೆ-47 ರಿಲೀಸ್ ಡೇಟ್ ಫಿಕ್ಸ್

Share This Article