ಚಾಲೆಂಜಿಂಗ್ ಸ್ಟಾರ್ ಗೆ ಕುಂಭಕರ್ಣ ಎಂದ ಕಿಚ್ಚ!

Public TV
2 Min Read

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ದರ್ಶನ್ ಜೊತೆ ಕಳೆದ ಕೆಲವು ದಿನಗಳನ್ನು ಮೆಲುಕು ಹಾಕಿದ್ದಾರೆ.

ಖಾಸಗಿ ಪತ್ರಿಕೆಗೆ ಸಂದರ್ಶನ ನೀಡುತ್ತಾ, ದರ್ಶನ್ ಜತೆಗಿನ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಂದು ಕಾಲದಲ್ಲಿ ನಾನು ದರ್ಶನ್ ಎಲ್ಲಾ ಕಡೆ ಬೈಕ್‍ನಲ್ಲಿ ಸುತ್ತಾಡುತ್ತಿದ್ದೆವು. ಆಗ ನಮ್ಮನ್ನು ನೋಡಿದ ಎಲ್ಲರೂ ಇವರು ಹೀರೋಗಳ ಎಂದುಕೊಳ್ಳುತ್ತಿದ್ದರು. ಅದೊಂದು ಒಳ್ಳೆಯ ಫೀಲಿಂಗ್ ಚೆನ್ನಾಗಿತ್ತು. ಆ ದಿನಗಳು ಅವನ ಜತೆಗಿನ ಸ್ನೇಹ ಮಧುರ ಎಂದು ಸುದೀಪ್ ಹೇಳಿದ್ದಾರೆ.

ದರ್ಶನ್‍ಗೆ ತನ್ನ ಮೇಲೆ ಪೊಸೆಸೀವ್, ದರ್ಶನ್ ಯಾವತ್ತಿದ್ದರೂ ನನ್ನ ಗೆಳೆಯನೇ ಅವನ ತಲೆಗೆ ಯಾರೋ ಏನೋ ತುಂಬಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾನು ಅವನನ್ನು ನೋಡಿದ್ದೇನೆ. ಆಗಿನಿಂದಲೂ ನನ್ನ ಕಂಡರೆ ಅವನಿಗೆ ತುಂಬಾ ಪ್ರೀತಿ ಎಂದು ಸುದೀಪ್ ತಿಳಿಸಿದರು.

 

ಇನ್ನು ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ಗೆ `ದರ್ಶನ್ ಕುಂಭಕರ್ಣ’ ಎಂದಿದ್ದಾರೆ. ಸುದೀಪ್ ಹೀಗೆ ಹೇಳೋಕೆ ಕಾರಣವಿದೆ. ದರ್ಶನ್‍ಗೆ ನಿದ್ದೆ ಜಾಸ್ತಿ. ಒಮ್ಮೆ ಮಲಗಿದರೆ ಸಾಕು ಎದ್ದೇಳುತ್ತಿರಲಿಲ್ಲ. ಎಷ್ಟೋ ಭಾರಿ ದರ್ಶನ್ ಜೊತೆ ಹೊರಗೆ ಹೋಗಬೇಕು ಎಂದು ಹೊರಟಾಗ ಆತ ಮಲಗಿರುವ ಸುದ್ದಿ ಕೇಳಿ ಪಾರ್ಟಿ ಕ್ಯಾನ್ಸಲ್ ಕೂಡ ಮಾಡಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.

ದರ್ಶನ್ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡ ನಂತರ ಕಿಚ್ಚ ಸಂದರ್ಶನವೊಂದರಲ್ಲಿ ದರ್ಶನ್ ಅವರ ಬಗ್ಗೆ ಓಪನ್ ಆಗಿ ಮಾತನಾಡಿದ್ದರು. ನನಗೆ ಯಾವ ಬೇಸರನೂ ಇಲ್ಲ. ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ. ಹಾಗಾಗಿ ಆತ ಕೋಪ ಮಾಡಿಕೊಂಡಿದ್ದಾನೆ. ನನ್ನ ಪ್ರಕಾರ ಒನ್ ಸೈಡ್ ಹಿಮ್ ಈಸ್ ವೆರಿ ಸ್ವೀಟ್. ನಾನು ಸಣ್ಣ ವಯಸ್ಸಿನಿಂದಲೂ ಆತನನ್ನು ನೋಡಿದ್ದೀನಿ. ನನ್ನ ಬಗ್ಗೆ ಆತ ತುಂಬ ಪೊಸೆಸಿವ್ ಎಂದು ಹೇಳಿದ್ದರು.

 

ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ದರ್ಶನ್‍ಗೆ ಬೇಸರ ಆಗಿರಬಹುದು. ಆದರೆ ಅದೆಲ್ಲಾ ಅದಾಗಿ ಅದೇ ಆಗಿದ್ದು. ಆ ರೀತಿ ನೋಡಿದ್ದರೆ ಯಾರ ಮೇಲಾದರೂ ದ್ವೇಷ ಸಾಧಿಸುವುದು ಏಕೆ? ಇಲ್ಲಿ ಎಲ್ಲರೂ ಸಾಧಕರೇ. ಇಂದು ಶಿವಣ್ಣ ಹಾಗೂ ನಾನು ಚೆನ್ನಾಗಿ ಇದ್ದೀವಿ ಎಂದರೆ ಅದು ನನಗೆ ಅವರ ಮೇಲೆ ಮೊದಲಿನಿಂದಲೂ ಪ್ರೀತಿಯಿತ್ತು. ಮಧ್ಯದಲ್ಲಿ ಸ್ವಲ್ಪ ಹಾಳಾಗಿತ್ತು. ಅದು ಕೂಡ ಸತ್ಯ ಹಾಗೂ ಅದಕ್ಕೂ ಕಾರಣವಿತ್ತು ಎಂದು ಸುದೀಪ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *