ಮತ್ತೆ ನಿರ್ದೇಶನಕ್ಕಿಳಿದ ಸುದೀಪ್- ಕಿಚ್ಚನ ಜೊತೆ ಕೈಜೋಡಿಸಿದ KRG Studios

By
1 Min Read

ಸ್ಯಾಂಡಲ್‌ವುಡ್ (Sandalwood) ಹೀರೋ ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಿಚ್ಚನ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಅವರ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಸುದೀಪ್ ಮುಂದಿನ ಚಿತ್ರಕ್ಕೆ ಕೆಆರ್‌ಜಿ ನಿರ್ಮಾಣ ಸಂಸ್ಥೆ ಕೈಜೋಡಿಸಿದ್ದಾರೆ.

ಸುದೀಪ್ ಅವರು ಬೆಸ್ಟ್ ನಟ ಮಾತ್ರವಲ್ಲ, ದಿ ಬೆಸ್ಟ್ ಡೈರೆಕ್ಟರ್ ಅನ್ನೋದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಕೆಂಪೇಗೌಡ, ಮಾಣಿಕ್ಯ, ಮೈ ಆಟೋಗ್ರಾಫ್ ಸೇರಿದಂತೆ ಹಲವು ಸಿನಿಮಾಗಳ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ನಟ ವಿಜಯ ರಾಘವೇಂದ್ರ ಮನೆಗೆ ಸುದೀಪ್ ದಂಪತಿ ಭೇಟಿ

 

View this post on Instagram

 

A post shared by KRG Connects (@krg_connects)

ಹೌದು.. ಕೆಲ ತಿಂಗಳುಗಳ ಹಿಂದೆ ನಿರ್ಮಾಪಕ ಕಾರ್ತಿಕ್ ಗೌಡ ಜೊತೆಗಿನ ಭೇಟಿಯ ಫೋಟೋ ನೋಡಿ ಒಟ್ಟಿಗೆ ಸಿನಿಮಾ ಮಾಡ್ತಾರೆ ಎಂದು ಸಖತ್ ಸುದ್ದಿಯಾಗಿತ್ತು. ನಿನ್ನೆಯಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡೋದಾಗಿ ಕೆಆರ್‌ಜಿ ಸಂಸ್ಥೆ (Krg Studios) ಘೋಷಣೆ ಮಾಡಿತ್ತು. ಅದರಂತೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ.

ಸುದೀಪ್ ಅವರು ಭಿನ್ನವಾಗಿರುವ ಕಥೆಯೊಂದನ್ನ ಹೆಣೆದಿದ್ದಾರೆ. ತಮ್ಮ ಹೊಸ ಕಥೆಗೆ ಕಿಚ್ಚ ನಿರ್ದೇಶನ ಮಾಡ್ತಿದ್ದಾರೆ. ಸದ್ಯ ಸಣ್ಣ ತುಣುಕೊಂದು ರಿವೀಲ್ ಮಾಡಿದೆ. ಆರಡಿ ಕಟೌಟ್ ಕಿಚ್ಚನ ನೆರಳಿರುವ ಪೋಸ್ಟರ್ ರಿಲೀಸ್ ಕೂಡ ಮಾಡಿದೆ. Kk ಎಂದು ಟೈಟಲ್‌ ಇಡಲಾಗಿದೆ. ಸುದೀಪ್ ಸಿನಿಮಾಗೆ ಕಾರ್ತಿಕ್ ಗೌಡ- ಯೋಗಿ ಜಿ ರಾಜ್ ನಿರ್ಮಾಣ ಮಾಡ್ತಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್