ದಾವಣಗೆರೆ: ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಮುಗಿದು ನಾಲ್ಕು ದಿನ ಕಳೆದರೂ ಅಭಿಮಾನಿಗಳ ಮಾತ್ರ ಸುದೀಪ್ ಅವರ ಹುಟ್ಟುಹಬ್ಬ ಮಾಡುವುದನ್ನು ಬಿಟ್ಟಿಲ್ಲ.
ದಾವಣಗೆರೆ ಜಿಲ್ಲಾ ಕಿಚ್ಚ ಸುದೀಪ್ ಅಭಿಮಾನಿ ಬಳಗ ಇಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಣೆ ಮಾಡಿದರು. ನಗರದ ಅಂಗವಿಕಲ ಆಶಾ ಕಿರಣ ಟ್ರಸ್ಟ್ ಗೆ ತೆರಳಿ ವಿಶೇಷ ಚೇತನ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿದರು.
ವಿಶೇಷ ಚೇತನ ಮಕ್ಕಳಿಂದ ಕೇಕ್ ಕಟ್ ಮಾಡಿಸಿ ಮಕ್ಕಳಿಗೆ ಹೋಳಿಗೆ ಊಟವಿಟ್ಟು ಹುಟ್ಟುಹಬ್ಬ ಆಚರಣೆ ಮಾಡಿದರು. ಈ ವೇಳೆ ಯಾರಿಂದಲೂ ಹಣ ಪಡೆಯದೆ ಅಭಿಮಾನಿಗಳೇ ಹಣ ಸಂಗ್ರಹಿಸಿ ಆಡಂಬರಕ್ಕೆ ಬಳಸದೆ ಒಳ್ಳೆ ಕೆಲಸಕ್ಕೆ ಬಳಸಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.
ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚೆಗೆ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಜೆಪಿ ನಗರದ ನಿವಾಸದ ಬಳಿ ಸಾವಿರಾರು ಅಭಿಮಾನಿಗಳ ಹರ್ಷೋದ್ಗಾರ ಕೂಗಿದ್ದರು. ಜೆ.ಪಿ ನಗರ ಮನೆಯಲ್ಲಿ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಾರೆ ಎಂದು ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ಭಾವಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv