ಕಿಚ್ಚ ಸುದೀಪ್ ಹೊಸ ಚಿತ್ರಕ್ಕೆ ಚೆನ್ನೈನಲ್ಲಿ ಮುಹೂರ್ತ

Public TV
2 Min Read

ಕಿಚ್ಚ ಸುದೀಪ್ (Kiccha Sudeep) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಭಿನಯ ಚಕ್ರವರ್ತಿ ಇದೀಗ ಮತ್ತೊಮ್ಮೆ ಮ್ಯಾಕ್ಸ್ ಚಿತ್ರ ಮಾಂತ್ರಿಕ ವಿಜಯ್ ಕಾರ್ತಿಕೇಯ ಜೊತೆ ಕೈ ಜೋಡಿಸಿದ್ದಾರೆ. ಮ್ಯಾಕ್ಸ್ ಸೂಪರ್ ಹಿಟ್ ಬಳಿಕ ಮತ್ತೊಮ್ಮೆ ಈ ಜೋಡಿ ಮ್ಯಾಕ್ಸ್ 2ಗಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದ್ರೆ ಸುದೀಪ್ ಹಾಗೂ ವಿಜಯ್ ಮ್ಯಾಕ್ಸ್ 2 ಪಕ್ಕಕ್ಕಿಟ್ಟು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇಂದು ಆ ಚಿತ್ರಕ್ಕೆ ಚೆನ್ನೈನಲ್ಲಿ (Chennai) ಮುಹೂರ್ತವಾಗಿದೆ.

ಸಿನಿಮಾದ ಮೊದಲ ಸನ್ನಿವೇಶಕ್ಕೆ ಸುದೀಪ್ ಅವರ ಪತ್ನಿ ಪ್ರಿಯಾ ಕ್ಲ್ಯಾಪ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಇಂದಿನಿಂದ ಚೆನ್ನೈನಲ್ಲಿ ಚಿತ್ರದ ಮುಹೂರ್ತ ಮುಗಿಸಿಕೊಂಡು ಶೂಟಿಂಗ್ ಕೂಡ ಶುರುವಾಗಿದೆ. ಕನ್ನಡ ಮತ್ತು ತಮಿಳು ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಹೇಳಿದ್ರೆ ಅದು ನಿಜ ಆಗೋಲ್ಲ – ನಿಧಿ ಸುಬ್ಬಯ್ಯ ಕೌಂಟರ್

ಮೊನ್ನೆಯಷ್ಟೇ ಸುದೀಪ್ ಅವರ 47ನೇ ಸಿನಿಮಾ ಇಂದು ಅನೌನ್ಸ್ ಆಗಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ 47 ನೇ ಸಿನಿಮಾ ರಿವೀಲ್ ಮಾಡಲಾಗಿತ್ತು. ಜುಲೈ 7 ರಿಂದ ಸಿನಿಮಾ ಶೂಟಿಂಗ್ ಪ್ಲಾನ್ ಮಾಡಿರುವ ಚಿತ್ರತಂಡ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಸುದೀಪ್ 47ನೇ ಚಿತ್ರವನ್ನು ತಮಿಳಿನ ಬಿಗ್ ಪ್ರೊಡಕ್ಷನ್ ಹೌಸ್ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಜೊತೆ ಸತ್ಯಜ್ಯೋತಿ ಚಿತ್ರ ನಿರ್ಮಾಣ ಮಾಡಿದ್ದ ಸತ್ಯಜ್ಯೋತಿ ಫಿಲಂಸ್ ಈಗ 39 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರನಿರ್ಮಾಣಕ್ಕೆ ಕೈ ಹಾಕಿದೆ. ಇದನ್ನೂ ಓದಿ: ಕ್ವೀನ್ ಪ್ರಿಮಿಯರ್ ಲೀಗ್‌ಗೆ ರಮ್ಯಾ ಅಂಬಾಸಿಡರ್ : ಲೋಗೋ ಲಾಂಚ್ ಮಾಡಿದ ಸ್ಯಾಂಡಲ್ವುಡ್ ಕ್ವೀನ್

ಚಿತ್ರದ ಕುರಿತು ಮಾತನಾಡಿದ ಸುದೀಪ್, ಮ್ಯಾಕ್ಸ್ ನಂತರ ನಾವು ಮತ್ತೆ ಒಂದಾಗಿದ್ದೇವೆ. ಸದ್ಯಕ್ಕೆ ಮ್ಯಾಕ್ಸ್ 2 ಸಿನಿಮಾ ಕೈ ಬಿಟ್ಟಿದ್ದೀವಿ. ಈ ವರ್ಷ ಎರಡು ಸಿನಿಮಾ ಮಾಡುತ್ತೇವೆ. ಬಿಲ್ಲರಂಗ ಬಾಷ ಸಿನಿಮಾ ಈ ವರ್ಷ ರಿಲೀಸ್ ಆಗಲ್ಲ. ಆದರೆ ಈ ಸಿನಿಮಾ ಇದೇ ವರ್ಷ ಡಿಸೆಂಬರ್ 25 ಕ್ಕೆ ರಿಲೀಸ್ ಮಾಡುತ್ತೇವೆ. ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರು ಆಗುತ್ತೆ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಇದನ್ನೂ ಓದಿ: ʻಕಿಲ್ಲರ್‌ʼ ಚಿತ್ರಕ್ಕೆ ರೆಹಮಾನ್‌ ಮ್ಯೂಸಿಕ್‌ – ಗನ್‌ ಮಾದರಿಯ ಗಿಟಾರ್‌ ಹಿಡಿದು ಪೋಸ್‌ ಕೊಟ್ಟ ಸಂಗೀತ ದಿಗ್ಗಜ!

Share This Article