ಡಿಸೆಂಬರ್‌ಗೆ ಕಿಚ್ಚನ ಡಿಚ್ಚಿ: ಕೆ-47 ರಿಲೀಸ್ ಡೇಟ್ ಫಿಕ್ಸ್

By
2 Min Read

ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರೋ ಸ್ಟಾರ್ ಸಿನಿಮಾಗಳಿಗೆ ಕಿಚ್ಚ ಸುದೀಪ್ ಠಕ್ಕರ್ ಕೊಡುತ್ತಾರೆ ಅಂತ ಹೇಳಲಾಗಿತ್ತು. ಅದೀಗ ನಿಜವಾಗಿದೆ. ಕಿಚ್ಚ ಸುದೀಪ್ ಈ ವರ್ಷ ತಾವು ಅಂದುಕೊಂಡಂತೆ ಒಂದು ಸಿನಿಮಾವನ್ನ ತಮ್ಮ ಅಭಿಮಾನಿಗಳಿಗೆ ದರ್ಶನ ಮಾಡಿಸಲು ಶಪಥ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 25ರಂದು ತೆರೆಕಂಡ ಮ್ಯಾಕ್ಸ್ ಸಿನಿಮಾ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ಹೀಗಾಗಿ ಸುದೀಪ್ ಈ ವರ್ಷವೂ ಡಿಸೆಂಬರ್‌ಗೆ ಅದ್ರಲ್ಲೂ ಕ್ರಿಸ್‌ಮಸ್‌ಗೆ ತಮ್ಮ ಕೆ-47 ಸಿನಿಮಾವನ್ನ ತೆರೆಗೆ ತರುವ ಪ್ಲ್ಯಾನ್‌ನಲ್ಲಿದ್ದಾರೆ. ಈ ಬಗ್ಗೆ ಕಿಚ್ಚ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್ ಬಿಗ್ ಅಪ್‌ಡೇಟ್ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಬಿಗ್ ಅಪ್‌ಡೇಟ್‌ಗೆ ಫ್ಯಾನ್ಸ್ ಖುಷಿಯಿಂದ ಕುಣಿದಾಡುತ್ತಿದ್ದಾರೆ. ಒಂದು ಕಡೆ ಸುದೀಪ್ ಬರ್ತ್ಡೇ ಸಂಭ್ರಮ ಮತ್ತೊಂದೆಡೆ ಕೆ-47 ಸಿನಿಮಾದ ಟೀಸರ್ ಹಾಗೂ ಟೈಟಲ್ ರಿವೀಲ್ ಜೊತೆಗೆ ಸಿನಿಮಾ ಡಿಸೆಂಬರ್‌ಗೆ ಬರೋದು ಪಕ್ಕಾ ಆಗಿದೆ. ಕಿಚ್ಚ ತಮ್ಮ ಫ್ಯಾನ್ಸ್‌ಗೆ ಒಂದರ ಮೇಲೆ ಒಂದು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಆದ್ರೆ ಕಿಚ್ಚ ಸುದೀಪ್ ಸಿನಿಮಾ ರಿಲೀಸ್ ಡಿಸೆಂಬರ್ ಅನ್ನೇ ಗುರಿಯಾಗಿಸಿರೋದು ಮಾತ್ರ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್‌ಗೆ ಕಾರಣವಾಗುತ್ತಾ ಅನ್ನೋ ಅಭಿಪ್ರಾಯಗಳು ಶುರುವಾಗಿವೆ.

ಅಂದಹಾಗೆ ಡಿಸೆಂಬರ್ 12ಕ್ಕೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಿಲೀಸ್ ಆಗಲಿದ್ದು, ಈಗಾಗ್ಲೇ ಚಿತ್ರತಂಡ ಸಾಂಗ್ ಜೊತೆಗೆ ಸಿನಿಮಾದ ಡೇಟ್ ಅನೌನ್ಸ್ ಮಾಡಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಸಾಂಗ್ ರಿಲೀಸ್ ಆಗಿದೆ. ಸಿನಿಮಾ ಕೂಡಾ ತೆರೆಗೆ ಬರಲಿದೆ. ಒಂದು ಕಡೆ ದರ್ಶನ್ ಫ್ಯಾನ್ಸ್ ಈಗಿನಿಂದಲೇ ಸಿನಿಮಾವನ್ನ ಭರ್ಜರಿಯಾಗಿ ಪ್ರಚಾರ ಮಾಡ್ತಿದ್ದಾರೆ. ದರ್ಶನ್ ನಟನೆಯ ಡೆವಿಲ್ ಸಿನಿಮಾ ತೆರೆಕಂಡು ಎರಡು ವಾರಗಳ ನಂತರ ಕೆ-47 ಸಿನಿಮಾ ತೆರೆಗೆ ಬರಲಿದೆ. ಜೊತೆಗೆ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರುವ 45 ಸಿನಿಮಾ ಕೂಡಾ ಕ್ರಿಸ್‌ಮಸ್‌ಗೆ ರಿಲೀಸ್ ಆಗಲಿವೆ.

ಇದಷ್ಟೇ ಅಲ್ಲದೇ ಕ್ರಿಸ್‌ಮಸ್ ಹಬ್ಬಕ್ಕೆ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಹೀಗಿರುವಾಗ ಕಿಚ್ಚನ ಕೆ-47 ಸಿನಿಮಾ ಕೂಡಾ ಕ್ರಿಸ್‌ಮಸ್‌ಗೆ ಬರೋದಾಗಿ ಅನೌನ್ಸ್ ಮಾಡಿದೆ. ಇದು ಸ್ಟಾರ್ಸ್ ಸಿನಿಮಾಗಳ ಡೇಟ್‌ಕ್ಲ್ಯಾಶ್ ಆಗೋದಂತೂ ಪಕ್ಕಾ. ಒಂದೇ ತಿಂಗಳಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡೋಕೆ ಮುಹೂರ್ತ ಇಟ್ಟುಕೊಂಡು ಕಾಯುತ್ತಿವೆ.

52ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ತಮ್ಮ ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್ ಕೊಟ್ಟಿದ್ದಾರೆ. ಡಿಸೆಂಬರ್ ತಿಂಗಳು ಕನ್ನಡ ಸಿನಿಮಾಗಳ ಕ್ರಾಂತಿಯಾಗಲು ಸಜ್ಜಾಗಿದೆ. ಸ್ಟಾರ್ಸ್ ಸಿನಿಮಾಗಳಿಲ್ಲದೇ ಮಂಕಾಗಿದ್ದ ಥಿಯೇಟರ್‌ಗಳು ಮದುವಣಗಿತ್ತಿಯಂತೆ ತಯಾರಾಗಲು ಡಿಸೆಂಬರ್ ತಿಂಗಳನ್ನ ಎದುರು ನೋಡುತ್ತಿವೆ. ಡಿಸೆಂಬರ್‌ನಲ್ಲಿ ಬರುವ ಸಾಲು ಸಾಲು ಸಿನಿಮಾಗಳನ್ನ ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಲು ಸಿನಿಮಾ ಪ್ರೇಮಿಗಳು ಸಹ ಅಷ್ಟೇ ಕಾತುರದಿಂದ ಕಾಯುತ್ತಿದ್ದಾರೆ. ಸ್ಟಾರ್‌ವಾರ್ ಅಲ್ಲಿಗೆ ಪಕ್ಕಾ ಆದಂತಾಗಿದೆ.

Share This Article