ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದು ಸಾಕು – ಕೆಣಕಿದ್ರೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಿ; ಗುಡುಗಿದ ಕಿಚ್ಚ

1 Min Read

ಕಿಚ್ಚ ಸುದೀಪ್ (Kichcha Sudeep) ಅಭಿನಯದ ಮಾರ್ಕ್ ಸಿನಿಮಾದ (Mark Movie) ಪ್ರಿ-ರಿಲೀಸ್ ಇವೆಂಟ್ ಇದೇ ಡಿಸೆಂಬರ್ 20ರಂದು ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ. ಸಿನಿಮಾದ ಇವೆಂಟ್‍ನಲ್ಲಿ ಕಿಚ್ಚ ಸುದೀಪ್ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಗಂಡುಮೆಟ್ಟಿದ ನಾಡಿನಲ್ಲಿ ನಿಂತು ಕಿಚ್ಚ ಖಡಕ್ ಮಾತುಗಳನ್ನ ಆಡಿದ್ದಾರೆ. ವಿವಾದ ಸೃಷ್ಟಿಸಿಲು ಸಿದ್ಧವಾಗಿರುವರಿಗೆ ವಿರೋಧಿಗಳಿಗೆ ಕಿಚ್ಚ ವಾರ್ನಿಂಗ್ ಕೊಟ್ಟಿದ್ದಾರೆ. ಕಿಚ್ಚ ಆಡಿದ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ.

`ಯಾರೋ ನಿಮ್ಮನ್ನು ಕೆಣಕಿದ್ರೆ ನೀವು ಅವರ ಭಾಷೆಯಲ್ಲಿ ಉತ್ತರ ಕೊಡಿ. ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದು ಸಾಕು’. ಹುಬ್ಬಳ್ಳಿ (Hubballi) ನೆಹರು ಮೈದಾನದಲ್ಲಿ ನಿಂತು ನಟ ಕಿಚ್ಚ ಸುದೀಪ್ ಅಬ್ಬರದ ಭಾಷಣ ಮಾಡಿದ್ದಾರೆ. ಮಾರ್ಕ್ ಚಿತ್ರ ಪ್ರಿ-ರಿಲೀಸ್ ಇವೆಂಟ್‍ನಲ್ಲಿ ಸುದೀಪ್ ಖಡಕ್ ಮಾತುಗಳನ್ನ ಆಡಿದ್ದಾರೆ. ಪರೋಕ್ಷವಾಗಿ ತನ್ನ ವಿರೋಧಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಸುದೀಪ್. ಈ ತಿಂಗಳು ಡಿ.25ರಂದು ಮಾರ್ಕ್ ಚಿತ್ರ ಬಿಡುಗಡೆ ಆಗಲಿದೆ. ಆದರೆ ಕೆಲವರು ಈ ಸಮಯಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಈ ಮೂಲಕ ಹೇಳೋದು ಇಷ್ಟೇ ಯುದ್ಧಕ್ಕೆ ಸಿದ್ಧ ಎಂದು ಸುದೀಪ್ ರಗಡ್ ಆಗಿ ಮಾತಾಡಿದ್ದಾರೆ. ಇದನ್ನೂ ಓದಿ: ಸಾವು ರಪ್ಪನೆ ಕಣ್ಮುಂದೆ ಬಂದು ಹೋಯ್ತು – ಕಾರು ಅಪಘಾತದ ಬಳಿಕ ನೋರಾ ಫತೇಹಿ ರಿಯಾಕ್ಷನ್‌

ಹುಬ್ಬಳ್ಳಿಯಲ್ಲಿ ನಿಂತು ಸುದೀಪ್ ತಮ್ಮ ಅಭಿಮಾನಿಗಳಿಗೆ ಹಲವು ಸಂದೇಶಗಳನ್ನ ರವಾನೆ ಮಾಡಿದ್ದಾರೆ. `ನಮ್ಮ ಅಭಿಮಾನಿಗಳು ನೀವು ಸುಮ್ಮನೆ ಇರಬೇಡಿ, ಈ ಕಾರ್ಯಕ್ರಮ ಯಾಕೆ ಹುಬ್ಬಳ್ಳಿಯಲ್ಲಿ ಮಾಡಿದ್ದೀವಿ ಅಂದ್ರೆ ಇಲ್ಲಿಂದ ಮಾತನಾಡಿದ್ರೆ ಕೆಲವೊಬ್ಬರಿಗೆ ತಟ್ಟುತ್ತೆ. ಅದಕ್ಕೆ ಇಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ’ ಎಂದಿದ್ದಾರೆ ಕಿಚ್ಚ. ಒಂದು ಕಡೆ ಪೈರಸಿ ಸ್ಯಾಂಡಲ್‍ವುಡ್‍ಗೆ ಮಾರಕವಾಗಿ ಕಾಡುತ್ತಿದೆ. ಮತ್ತೊಂದು ಕಡೆ ತಮ್ಮ ಸಿನಿಮಾದ ಬಗ್ಗೆ ನಕಾರಾತ್ಮಕವಾಗಿ ಗುಲ್ಲೆಬ್ಬಿಸಲು ತಯಾರಾಗಿದೆ ಒಂದು ಪಡೆ ಎನ್ನುವ ಅರ್ಥದಲ್ಲಿ ಸುದೀಪ್ ಮಾತಾಡಿದ್ದಾರೆ. ಒಟ್ಟಿನಲ್ಲಿ ಸುದೀಪ್ ಹುಬ್ಬಳ್ಳಿಯಲ್ಲಿ ಮಾತಾಡಿರುವ ಈ ಮಾತುಗಳು ಭಾರಿ ಚರ್ಚೆಯನ್ನ ಹುಟ್ಟುಹಾಕಿವೆ. ಇದನ್ನೂ ಓದಿ: ನೋರಾ ಫತೇಹಿ ಕಾರಿಗೆ ಡಿಕ್ಕಿ – ಅಪಾಯದಿಂದ ನಟಿ ಪಾರು

Share This Article