ತುಕಾಲಿ ಸಂತುಗೆ ಮಾತಲ್ಲೇ ಚಾಟಿಯೇಟು ಬೀಸಿದ ಕಿಚ್ಚ ಸುದೀಪ್

Public TV
2 Min Read

ದೊಡ್ಮನೆಯಲ್ಲಿ ಕಂಟೆಸ್ಟೆಂಟ್ ಪೈಕಿ, ಪಕ್ಕಾ ಎಂಟರ್‌ಟೈನರ್ ಅಂದರೆ, ಅದು ತುಕಾಲಿ ಸಂತು. ಇಡೀ ಮನೆಯನ್ನು ಲವಲವಿಕೆಯಲ್ಲಿ ಇಟ್ಟ ಹೆಗ್ಗಳಿಕೆ ಸಂತು ಅವರದ್ದು. ತಮಾಷೆ ಮಾಡ್ತಾ, ಡೈಲಾಗ್ ಹೇಳ್ತಾ, ಮಿಮಿಕ್ರಿ ಮಾಡ್ತಾ ನೋಡುಗರಿಗೆ ಸಖತ್ ಮನರಂಜನೆ ನೀಡುತ್ತಿದ್ದಾರೆ. ಈ ನಡೆಯೇ ಅವರಿಗೆ ಮುಳುವಾಗಿದೆ. ಇಂದು ನಡೆದ ಕಿಚ್ಚನ ಪಂಚಾಯತಿಯಲ್ಲಿ, ಸುದೀಪ್ ಅವರು ಸಂತು ಮೇಲೆ ಹರಿಹಾಯ್ದಿದ್ದಾರೆ. ಒಬ್ಬರ ವ್ಯಕ್ತಿತ್ವವನ್ನು ಕೊಲ್ಲೋಕೆ ನಿಮಗೆ ಅಧಿಕಾರ ಕೊಟ್ಟೋರು ಯಾರು? ಎಂದು ನೇರವಾಗಿಯೇ ಸಂತುಗೆ ಸುದೀಪ್ (Kichcha Sudeep) ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ನಮ್ರತಾ ಜೊತೆ ‘ರಾಜಾ ಶಿವರಾಜ’ ಹಾಡಿಗೆ ಸ್ಟೆಪ್ ಹಾಕಿದ ತುಕಾಲಿ ಸಂತು

ಬಿಗ್ ಬಾಸ್ (Bigg Boss Kannada) ಶುರುವಾಗಿ ಇಂದಿಗೆ ಸರಿಯಾಗಿ ಒಂದು ವಾರ ಕಳೆದಿದೆ. ಮೊದಲ ಕಿಚ್ಚನ ಪಂಚಾಯತಿ ಕೂಡ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಮತ್ತು ಪಂಚಾಯತಿಯಲ್ಲಿ ಹೆಚ್ಚು ಚರ್ಚೆಗೆ ಕಾರಣರಾಗಿದ್ದು ಡ್ರೋನ್ ಪ್ರತಾಪ್. ವಾರವೀಡಿ ಬಿಗ್ ಬಾಸ್ ಮನೆಗೆ ಬಹುತೇಕ ಸದಸ್ಯರು ಡ್ರೋನ್ ಪ್ರತಾಪ್ ಅವರ ಮೇಲೆ ಮುಗಿಬಿದ್ದಿದ್ದರು. ಅವರ ಡ್ರೋನ್ ಸಾಧನೆಯನ್ನು ಅನುಮಾನದಿಂದ ನೋಡಿದ್ದರು. ಕ್ಷಣ ಕ್ಷಣಕ್ಕೂ ಅಪಮಾನ ಮಾಡಿದ್ದರು. ಪ್ರತಾಪ್ (Drone Prathap) ತಿರುಗಿ ಬೀಳಲಿಲ್ಲ ಅನ್ನುವ ಕಾರಣಕ್ಕಾಗಿ ಅದು ನಿರಂತರವಾಗಿ ನಡೆದಿತ್ತು. ಅದಕ್ಕೆ ಸುದೀಪ್ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

ವಿನಯ್ ಗೌಡ, ತುಕಾಲಿ ಸಂತು (Tukali Santhosh) ಅಂಡ್ ಗ್ಯಾಂಗ್ ಪದೇ ಪದೇ ಡ್ರೋನ್ ಪ್ರತಾಪ್ ಅವರನ್ನು ಕೆಣಕಿದೆ. ಕೀಳು ಮಟ್ಟದಲ್ಲಿ ಜರಿದಿದೆ. ಆ ಹುಡುಗನ ಸಾಧನೆಯನ್ನು ಕೆಳಮಟ್ಟದಲ್ಲಿ ನೋಡಿದೆ. ವೈಯಕ್ತಿಕ ನಿಂದನೆ ಮಾಡಿದೆ. ಖಾಸಗಿ ವಿಚಾರವನ್ನು ಆಡಿಕೊಂಡಿದೆ. ಇದೆಲ್ಲವನ್ನೂ ಸುದೀಪ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹಾಗಾಗಿಯೇ ಒಬ್ಬರ ನೋವು ಇನ್ನೊಬ್ಬರಿಗೆ ತಮಾಷೆ ಆಗತ್ತಾ ಎಂದು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿಯ ಚಾರಿತ್ರ‍್ಯವಧೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ತುಕಾಲಿ ಸಂತುಗೆ ನೇರವಾಗಿಯೇ ಜಡಿಸಿದ್ದಾರೆ ಸುದೀಪ್. ಇದನ್ನೂ ಓದಿ:ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

ನನ್ನ ಮಾತಿಗೆ ಮನೆಯರವಲ್ಲ ನಗುತ್ತಿದ್ದರು, ತಮಾಷೆಯಾಗಿಯೇ ಎಲ್ಲರೂ ಸ್ವೀಕರಿಸಿದ್ದರು. ಹಾಗಾಗಿ ನಾನು ಮಾತನಾಡಿದೆ ಎಂದು ಸಂತು ಸಮಜಾಯಿಸಿ ಕೊಡೋಕೆ ಬಂದರೂ, ಸುದೀಪ್ ಅದನ್ನು ಒಪ್ಪಲಿಲ್ಲ. ಒಬ್ಬರು ಸಾವು ಮತ್ತೊಬ್ಬರಿಗೆ ತಮಾಷೆ ಆಗಬಾರದು ಎಂದು ಖಡಕ್ಕಾಗಿಯೇ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸಂತು & ಗ್ಯಾಂಗ್‌ಗೆ ಚಳಿ ಬಿಡಿಸಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ ಬಗ್ಗೆ ಸಿಂಪತಿ ಕ್ರಿಯೇಟ್ ಮಾಡುವಂತಹ ಕೆಲಸವನ್ನು ಸುದೀಪ್ ಮಾಡಿದ್ದಾರೆ. ಬಳಿಕ ಸಂತೂ, ಡ್ರೋನ್ ಪ್ರತಾಪ್‌ಗೆ ಕ್ಷಮೆ ಕೇಳಿದ್ದಾರೆ. ಸುದೀಪ್ ಮಾತು, ಸಾಥ್ ನೀಡಿರುವ ರೀತಿಗೆ ಡ್ರೋನ್ ಪ್ರತಾಪ್‌ಗೆ ಭಾವುಕರನ್ನಾಗಿಸಿದೆ. ಮುಂದಿನ ದಿನಗಳಲ್ಲಿ ಮನೆಯರು ಡ್ರೋನ್ ಪ್ರತಾಪ್ ಅವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ಮೂಲಗಳ ಪ್ರಕಾರ, ದೊಡ್ಮನೆಯಿಂದ ಮೊದಲ ವಾರ ಸ್ನೇಕ್ ಶ್ಯಾಮ್ (Snake Shyam) ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್