ತನ್ನ ಬಗ್ಗೆ ಮಹಿಳೆಯರಿಗಿರೋ ಅಭಿಪ್ರಾಯ ಕೇಳಿ ವಿನಯ್ ಗೌಡ ಶಾಕ್

Public TV
1 Min Read

ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ವಿಚಾರ ಅಂದರೆ ಬಳೆ ಮ್ಯಾಟರ್. ಸಂಗೀತಾ ಮತ್ತು ವಿನಯ್ ಜಗಳ ದೊಡ್ಡ ಮಟ್ಟದಲ್ಲಿ ಅಂದು ಸದ್ದು ಮಾಡಿತ್ತು. ಅಂದು ವಿನಯ್‌ ನಡೆ ಬಗ್ಗೆ ನೆಗೆಟಿವ್‌ ಆಗಿಯೇ ಮಹಿಳೆಯರಿಗೆ ಅಭಿಪ್ರಾಯ ಇತ್ತು. ಆದರೆ ಇದೀಗ ಮಹಿಳೆಯರು ವಿನಯ್ ಬಗ್ಗೆ ಯಾವ ರೀತಿ ಯೋಚಿಸುತ್ತಾರೆ ಎಂಬುದನ್ನು ಸುದೀಪ್ ರಿವೀಲ್ ಮಾಡಿದ್ದಾರೆ.‌ ಇದನ್ನೂ ಓದಿ:Bigg Boss: ಸಂತು ಹಿಂದೆ ಪಂತು ಕೂಡ ಔಟ್- ವರ್ತೂರು ಸಂತೋಷ್ ಎಲಿಮಿನೇಟ್?

ದೊಡ್ಮನೆಯ ಸ್ಟ್ರಾಂಗ್ ವಿನಯ್‌ಗೆ ಅಪಾರ ಅಭಿಮಾನಿಗಳ ಬಳಗವಿದೆ. ಅಂದು ಬಳೆ ಮ್ಯಾಟರ್‌ನಲ್ಲಿ ವಿನಯ್‌ನ ದ್ವೇಷಿಸುತ್ತಿರುವವರು ಇಂದು ಜೈಕಾರ ಹಾಕುತ್ತಿದ್ದಾರೆ. ಇಂದು ಹುಡುಗಿಯರು, ಹೆಂಗಸರ ಮಧ್ಯೆ ‘ಜೆಂಟಲ್‌ಮ್ಯಾನ್’ ಇದ್ದರೆ ವಿನಯ್ ಗೌಡ ಅವರ ಥರ ಇರಬೇಕು ಎಂದು ಹಾಡಿ ಹೊಗಳುತ್ತಿದ್ದಾರೆ. ಇದರ ಬಗ್ಗೆ ನಿನ್ನೆ (ಜ.27) ಫಿನಾಲೆ ವೇದಿಕೆಯಲ್ಲಿ ಚರ್ಚೆಯಾಗಿದೆ.

ಬಳೆ ವಿಚಾರದಲ್ಲಿ ಒಂದು ವಿಷಯ ಆಗತ್ತೆ. ಮುಂದೆ ಹೇಗೆ ಏನು ಅಂತ ಭಯ ಆಗತ್ತೆ. ಆದರೆ ಇಂದು ಹುಡುಗಿಯರು, ಹೆಂಗಸರ ಮಧ್ಯೆ ‘ಜೆಂಟಲ್‌ಮ್ಯಾನ್’ ಇದ್ದರೆ ವಿನಯ್ ಗೌಡ ಅವರ ಥರ ಇರಬೇಕು ಎಂದು ಹೇಳುತ್ತಿದ್ದಾರೆ. ಇಂದು ವಿನಯ್ ಗೆಲ್ಲಲಿ ಅಂತ ಮಹಿಳೆಯರು, ಹುಡುಗಿಯರು ಮತ ಹಾಕಿದ್ದಾರೆ ಅಂತ ಗೊತ್ತಾ? ಅಂದು ನಡೆದ ಘಟನೆಗಳು, ಕೀಳರಿಮೆ ಜನರ ದೃಷ್ಟಿಕೋನ ಬದಲಾಯಿಸಿದೆ. ಎಲ್ಲಾ ಕಾಲಾಯ ತಸ್ಮೈ ನಮಃ ಎಂದು ಸುದೀಪ್ ಹೇಳಿದ್ದಾರೆ. ವಿನಯ್ ಗೌಡ ಅವರು ನನ್ನ ತಪ್ಪನ್ನು ಕ್ಷಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ಸದ್ಯ ಇಂದು (ಜ.28) ಬಿಗ್ ಬಾಸ್ ಸೀಸನ್ 10ರ ವಿನ್ನರ್ ಯಾರು ಎಂಬ ಅಧಿಕೃತ ಘೋಷಣೆ ಆಗಲಿದೆ. ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂದು ಕಾದುನೋಡಬೇಕಿದೆ.

Share This Article