ನನ್ನ ಸಿನಿಮಾ ರಿಲೀಸ್ ಟೈಮಲ್ಲೇ ಕಟೌಟ್‍ನಿಂದ ಬಿದ್ದು ದುರಂತ ಆಗಿತ್ತು: ಸುದೀಪ್

Public TV
1 Min Read

– ಅಲ್ಲು ಅರ್ಜುನ್ ಬಂಧನ ಬಿಡುಗಡೆಗೆ ಕಿಚ್ಚನ ರಿಯಾಕ್ಷನ್

ಬೆಂಗಳೂರು: ನನ್ನ ಸಿನಿಮಾ ರಿಲೀಸ್ ಟೈಮಲ್ಲೇ ಕಟೌಟ್‍ನಿಂದ ಬಿದ್ದು ದುರಂತ ಆಗಿತ್ತು. ಇದೆಲ್ಲ ಕೈ ಮೀರಿ ನಡೆಯವ ಸಂದರ್ಭಗಳು ಎಂದು ನಟ ಸುದೀಪ್ (Sudeep) ಹೇಳಿದ್ದಾರೆ.

ಹೈದ್ರಾಬಾದ್‍ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಅಲ್ಲು ಅರ್ಜುನ್ (Allu Arjun) ಅಭಿಮಾನಿ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ, ಫ್ಯಾನ್ಸ್‍ಗೆ ಯಾವ ಸ್ಟಾರ್ ಕೂಡ ಹೀಗೆ ಮಾಡಿ ಹಾಗೆ ಮಾಡಿ ಎಂದು ಹೇಳಿರಲ್ಲ. ಅವರು ಏನೇ ಮಾಡಿದ್ರೂ ಅವರವರ ಪ್ರೀತಿ. ಎಲ್ಲರ ಮನೆಗಳಲ್ಲೂ ಹುಷಾರು ಜೋಪಾನ ಎಂದು ಹೇಳುತ್ತಿರುತ್ತೇವೆ. ಆದರೂ ಕೈ ಮೀರಿ ಇಂತಹ ದುರಂತಗಳು ನಡೆಯುತ್ತವೆ ಎಂದಿದ್ದಾರೆ.

ಇದರಲ್ಲಿ ಯಾರ ತಪ್ಪೂ ಇರೋದಿಲ್ಲ, ನಡೆದಿರುವ ಪರಿಸ್ಥಿತಿಯ ತಪ್ಪು. ನಾವು ಫ್ಯಾನ್ಸ್ ಬಳಿ ಹುಷಾರಾಗಿರಿ ಎಂದು ಹೇಳ್ತೀವಿ. ಕೆಲವೊಂದು ಸಿನಿಮಾ ನಮ್ಮ ಯೋಚನೆ ಮೀರಿ ಜನಜಂಗುಳಿ ಸೇರುತ್ತೆ. ಪುಷ್ಪ ಚಿತ್ರ ಗ್ಲೋಬಲಿ ಭಾರೀ ಸೌಂಡ್ ಮಾಡಿತ್ತು. ರಂಪ ಎಲ್ಲಾ ಕಡೆ ಇತ್ತು. ಕೆಲವು ಘಟನೆಗಳು ನಡೆದಾಗ ಹೀಗಾಗಬಾರದಿತ್ತು ಎಂದು ಖಂಡಿತ ಎನಿಸುತ್ತದೆ ಎಂದಿದ್ದಾರೆ.

ಇಂತಹ ಘಟನೆಗಳಿಗೆ ಅಲ್ಲಿದ್ದವರು ಬೇಕಂತ ಮಾಡಿದ್ದಾರೆ ಎನ್ನುವುದು ಬರಲ್ಲ. ಪ್ರತಿಯೊಬ್ಬರು ಮನೆಯಿಂದ ಹೊರಡುವಾಗ ಒಬ್ಬರು, ಇಬ್ಬರು ಅಂತಾನೇ ಹೋಗೋದು. ಅಲ್ಲಿ ಹೋದ್ಮೇಲೆ ಗೊತ್ತಾಗುತ್ತೆ ಸಾವಿರಾರು ಜನ ಇದ್ದಾರೆ ಎಂದು ಅಲ್ವಾ? ಏನ್ ಮಾಡೋದು, ಕೆಲವೊಮ್ಮೆ ನಡೆಯುತ್ತೆ. ಕೆಲವೊಂದು ಆಗಬಾರದಿರೋದು ಆಗ್ಬಿಡುತ್ತೆ. ಅದಕ್ಕೆ ಯಾರನ್ನ ಹೊಣೆ ಮಾಡೋದು? ಹೀಗಾಗಬಾರದು ಎಂದು ಪ್ರಾರ್ಥಿಸಬಹುದು ಅಷ್ಟೇ ಎಂದಿದ್ದಾರೆ.

Share This Article