BBK 11: ‘ಬಿಗ್‌ ಬಾಸ್‌’ ಫಿನಾಲೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಕಿಚ್ಚ

Public TV
1 Min Read

ನ್ನಡದ ‘ಬಿಗ್‌ ಬಾಸ್ ಸೀಸನ್ 11’ಕ್ಕೆ (Bigg Boss Kannada 11) ಗ್ರ‍್ಯಾಂಡ್ ಫಿನಾಲೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಸುದೀಪ್ ಅವರ ಕೊನೆ ಸೀಸನ್‌ನಲ್ಲಿ ಏನೇನು ಹೇಳಲಿದ್ದಾರೆ ಎನ್ನುವುದನ್ನು ನೋಡಲು ಫ್ಯಾನ್ಸ್‌ ಕಾತರದಿಂದ ಎದುರು ನೋಡುತ್ತಿದ್ದಾರೆ. ಗ್ರ‍್ಯಾಂಡ್ ಫಿನಾಲೆಗೆ ಭರ್ಜರಿಯಾಗಿ ರೆಡಿಯಾಗಿರುವ ವೇದಿಕೆ ಮೇಲೆ ಸುದೀಪ್ (Sudeep) ಅವರು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಕಿಚ್ಚನ ಎಂಟ್ರಿಯ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ದರ್ಶನ್‌ಗೆ ಕಡಿಮೆಯಾದ ಬೆನ್ನು ನೋವು – ಸದ್ಯಕ್ಕಿಲ್ಲ ಆಪರೇಷನ್

ಸುದೀಪ್ ಅವರ ‘ಬಿಗ್ ಬಾಸ್ ಸೀಸನ್‌ 11’ರ ನಿರೂಪಣೆಯು ಕೊನೆಯ ಸೀಸನ್ ಆಗಿದೆ. ಈ ಹೊತ್ತಿನಲ್ಲಿ ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಒಬ್ಬರಿಗೆ ಅತಿ ಹೆಚ್ಚು ಮತಗಳು ಬಂದಿವೆ. ಆದರೆ ನಿಖರವಾಗಿ ಯಾರಿಗೆ ಎಂದು ತಿಳಿದಿಲ್ಲ. ಸೀಸನ್ 11ರ ವಿನ್ನರ್ ಯಾರೆಂಬುದು ಸಾಕಷ್ಟು ಚರ್ಚೆಗಳು ಪ್ರೇಕ್ಷಕರಲ್ಲಿ ನಡೆಯುತ್ತಿವೆ. ಇದನ್ನೂ ಓದಿ:ದರ್ಶನ್‌ಗೆ ಕಡಿಮೆಯಾದ ಬೆನ್ನು ನೋವು – ಸದ್ಯಕ್ಕಿಲ್ಲ ಆಪರೇಷನ್

ಕಲರ್‌ಫುಲ್‌ ವೇದಿಕೆಯಲ್ಲಿ ಸುದೀಪ್ ಸಖತ್ ಆಗಿಯೇ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡ ‘ಮ್ಯಾಕ್ಸ್’ ಸಿನಿಮಾದ ಸಾಂಗ್‌ಗೆ ನಟ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ್ದಾರೆ. ಅಷ್ಟು ಸುಲಭವಾಗಿ ಎಲ್ಲಿಯೂ ಸುದೀಪ್ ಅವರು ವೇದಿಕೆ ಮೇಲೆ ಡ್ಯಾನ್ಸ್ ಮಾಡಲ್ಲ. ಆದರೆ ಈ ಬಾರಿ ಸುದೀಪ್ ಒಂದೆರಡು ಹೆಜ್ಜೆಗಳನ್ನು ಹಾಕಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಒಟ್ಟು 6 ಜನರಲ್ಲಿ ಒಬ್ಬರು ಮಾತ್ರ ಫೈನಲ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ. ಸದ್ಯ ಉಗ್ರಂ ಮಂಜು, ಮೋಕ್ಷಿತಾ ಪೈ, ರಜತ್‌, ಭವ್ಯಾ, ತ್ರಿವಿಕ್ರಮ್‌, ಹನುಂತ ಫಿನಾಲೆಯಲ್ಲಿದ್ದಾರೆ. ಇವರಲ್ಲಿ ಯಾರು ಬಿಗ್‌ ಬಾಸ್‌ ಪಟ್ಟ ಗೆದ್ದು ಬೀಗಲಿದ್ದಾರೆ ಎಂದು ಕಾಯಬೇಕಿದೆ. ಜ.25 ಮತ್ತು ಜ.26ರಂದು ಗ್ರ್ಯಾಂಡ್‌ ಫಿನಾಲೆ ನಡೆಯಲಿದ್ದು, ಸಂಜೆ 6ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದೆ.

Share This Article