ದಿಗ್ಗಜರು- 2 ಸಿನಿಮಾಗಾಗಿ ಮತ್ತೆ ಜೊತೆಯಾಗ್ತಾರಾ ಸುದೀಪ್-‌ ದರ್ಶನ್?‌

Public TV
1 Min Read

ಸ್ಯಾಂಡಲ್‌ವುಡ್ (Sandalwood) ಕುಚಿಕು ಜೋಡಿ ಕಿಚ್ಚ ಸುದೀಪ್ – ದರ್ಶನ್ (Darshan) ಆರು ವರ್ಷಗಳ ನಂತರ ಮತ್ತೆ ಮುಖಾಮುಖಿ ಆಗಿದ್ದಾರೆ. ಸುಮಲತಾ (Sumalatha) ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರ ರಾಜಿ ಸಂಧಾನದ ಸುದ್ದಿ ನಡುವೆ ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಸುದೀಪ್ – ದರ್ಶನ್ ಇಬ್ಬರಿಗೂ ಆಪ್ತರಾಗಿರೋ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh) ಸಾರಥ್ಯದಲ್ಲಿ ದಿಗ್ಗಜರು 2 ಸಿನಿಮಾ ಬರುತ್ತಾ? ಇಬ್ಬರನ್ನೂ ಜೊತೆಯಾಗಿಸಿ ಸಿನಿಮಾ ಮಾಡ್ತಾರಾ? ಎಂಬ ಕೌತುಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ. ಇದನ್ನೂ ಓದಿ:6 ವರ್ಷದ ಬಳಿಕ ಕಿಚ್ಚ, ದಚ್ಚು ಮುಖಾಮುಖಿ- ಮನಸ್ತಾಪಕ್ಕೆ ತೆರೆ ಎಳೆದ್ರಾ ಸುಮಲತಾ?

ಜ್ಯೂ.ಅಂಬರೀಶ್ – ಜ್ಯೂ.ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದರ್ಶನ್- ಸುದೀಪ್ (Sudeep) ಮತ್ತೆ ಒಂದೇ ವೇದಿಕೆಯಲ್ಲಿ ಜೊತೆಯಾಗಿರೋದು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಈ ಹಿಂದೆ ಅಂಬರೀಶ್ 60ನೇ ವರ್ಷದ ಬರ್ತ್‌ಡೇ ಕಾರ್ಯಕ್ರಮದಲ್ಲಿ ಕುಚಿಕು ಕುಚಿಕು ಡ್ಯಾನ್ಸ್ ಮಾಡಿ ಕಿಚ್ಚ-ದಚ್ಚು ಗಮನ ಸೆಳೆದಿದ್ದರು.

2012ರಲ್ಲಿ ದರ್ಶನ್ ನಟನೆಯ ‘ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕೆ ಸಂಪೂರ್ಣ ಸಹಕರಿಸಿದ್ದ ಕಿಚ್ಚ. ದರ್ಶನ್ ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದರು. ಮುಂದೆ ಒಂದೊಳ್ಳೆ ಘಳಿಗೆ ಬಂದರೆ ಒಟ್ಟಿಗೆ ಆಕ್ಟ್ ಮಾಡೋದಾಗಿ ಇಬ್ಬರು ಹೇಳಿದ್ರು. ಅಂಬಿ ಇದ್ದಿದ್ರೆ ಇಷ್ಟೊತ್ತಿಗಾಗ್ಲೇ ಸುದೀಪ್-‌ ದರ್ಶನ್ ಒಂದಾಗುತ್ತಿದ್ದರು.

ಆಗಸ್ಟ್ 27ರಂದು ತಡರಾತ್ರಿ ಸುಮಲತಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್-ಸುದೀಪ್ ಮುನಿಸಿಗೆ ಸುಮಲತಾ ತೆರೆ ಎಳೆದಿದ್ದಾರೆ ಎನ್ನಲಾಗುತ್ತಿದೆ. 6 ವರ್ಷಗಳ ನಂತರ ಈ ವೇದಿಕೆಯ ಮೂಲಕ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅದರಂತೆಯೇ ದಿಗ್ಗಜರು -2 (Diggajaru 2) ಸಿನಿಮಾದಲ್ಲಿ ಈ ಸೂಪರ್ ಸ್ಟಾರ್ಸ್ ಸಮ್ಮೀಲನ ಆಗುತ್ತಾ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್