Kiccha 46: ಅಚ್ಚರಿ ಎನ್ನುವಂತೆ ಹೊಸ ನಿರ್ದೇಶಕನಿಗೆ ಮಣೆ ಹಾಕಿದ ಸುದೀಪ್

By
2 Min Read

ಸುದೀಪ್ (Sudeep) ಅವರ 46ನೇ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಹಲವು ಚಿತ್ರರಂಗದ ಸ್ಟಾರ್ ನಿರ್ದೇಶಕರ ಹೆಸರು ಕೇಳಿ ಬಂದಿತ್ತು. ಜೊತೆಗೆ ಕನ್ನಡದ ಅನೂಪ್ ಭಂಡಾರಿ, ನಂದಕಿಶೋರ್ ಹೆಸರು ಕೂಡ ಅದರಲ್ಲಿ ಇತ್ತು. ಆದರೆ, ಎಲ್ಲ ಹೆಸರನ್ನು ಅಳಿಸಿ ಹಾಕಿ, ತಮ್ಮ ಹೊಸ ಸಿನಿಮಾಗೆ ಹೊಸ ನಿರ್ದೇಶಕರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಕಿಚ್ಚ ಸುದೀಪ್.

ನಿನ್ನೆಯಷ್ಟೇ ಸುದೀಪ್ ಅವರ 46ನೇ (Kiccha 46) ಸಿನಿಮಾದ ಟೀಸರ್ ಲಾಂಚ್ ಕುರಿತಾದ ಪೋಸ್ಟರ್ ವೊಂದು ಬಿಡುಗಡೆ ಆಗಿದ್ದು, ಆ ಪೋಸ್ಟರ್ ನಲ್ಲಿ ಹೊಸ ನಿರ್ದೇಶಕರ ಹೆಸರು ಕೂಡ ಇದೆ. ಈ ಸಿನಿಮಾವನ್ನು ತಮಿಳಿನ ಹೊಸ ಹುಡುಗ ವಿಜಯ್ ಕಾರ್ತಿಕೇಯ (Vijay Karthikeya) ಎನ್ನುವವರು ನಿರ್ದೇಶನ ಮಾಡಿದ್ದಾರೆ. ಇದು ವಿಜಯ್ ಅವರ ಎರಡನೇ ಸಿನಿಮಾವಾಗಿದ್ದರೂ, ಮೊದಲ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ ಎನ್ನುವ ಮಾಹಿತಿ ಇದೆ. ಹಾಗಾಗಿ ಇದು ವಿಜಯ್ ಅವರ ಫಸ್ಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ : ಬಾಲಿವುಡ್ ನಟನಿಗೆ ಭದ್ರತೆ ಹೇಗಿದೆ?

ನಿನ್ನೆ ಸಂಜೆಯಷ್ಟೇ ಈ ಹೊಸ ಸಿನಿಮಾ ಬಗ್ಗೆ ಬಿಗ್ ಅಪ್ ಡೇಟ್ ಹಂಚಿಕೊಂಡಿದೆ ಚಿತ್ರತಂಡ. ಜುಲೈ 2ರಂದು ಬೆಳಗ್ಗೆ 11.46ಕ್ಕೆ ‘ಕಿಚ್ಚ 46’ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್​ ಅವರು ಮೂರು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಆ ಪೈಕಿ ‘ವಿ ಕ್ರಿಯೇಷನ್ಸ್​’ನ ಕಲೈಪುಲಿ ಎಸ್​. ಧಾನು (Kalaipuli S. Dhanu) ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ಅವರು ಪ್ರೋಮೋ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು ಸುದೀಪ್.

ಕಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್​’ ಜೊತೆ ಕಿಚ್ಚ ಸುದೀಪ್ ​ ಅವರು ಕೈ ಜೋಡಿಸಿದ್ದು, ಅದ್ದೂರಿ ಬಜೆಟ್​ನಲ್ಲಿ ‘ಕಿಚ್ಚ 46’ ಚಿತ್ರ ನಿರ್ಮಾಣ ಆಗುತ್ತಿದೆ. ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಎಸ್​. ಧಾನು ಅವರಿಗೆ ಇದೆ.

ಒಂದು ವರ್ಷಗಳ ಕಾಯುವಿಕೆಯ ಬಳಿಕ ಸುದೀಪ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಹೊಸ ಅಪ್‌ಡೇಟ್‌ನ ಪ್ರಕಾರ, ಕಿಚ್ಚ-46 ನ ಮೊದಲ ಟೀಸರ್‌ ಇದೇ ಜುಲೈ 2 ರಂದು ಬೆಳಗ್ಗೆ 11.46ಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟವಾಗಲಿದೆ. ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್, ಕಾಂತಾರ ನಟಿ ಸಪ್ತಮಿ ಗೌಡ, ವಾಸುಕಿ ವೈಭವ್, ಅನುಪ್ ಭಂಡಾರಿ, ವಿನಯ್ ರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಮುಂತಾದ ಕನ್ನಡದ ಪ್ರಮುಖ ಕಲಾವಿದರನ್ನು ಒಳಗೊಂಡ ವಿಶೇಷ ವೀಡಿಯೊದೊಂದಿಗೆ ಚಿತ್ರ ನಿರ್ಮಾಪಕರು ಈ ಘೋಷಣೆ ಮಾಡಿದ್ದಾರೆ.

 

ಒಂದ್ ಕಡೆ ಮನೆ ಮಗ ಸಂಚಿತ್ ಸಂಜೀವ್ ಚೊಚ್ಚಲ ನಿರ್ದೇಶನ, ನಟನೆಯ ಜಿಮ್ಮಿ ಸಿನಿಮಾಗೆ ಸುದೀಪ್ ಸಾಥ್ ನೀಡ್ತಿದ್ದಾರೆ. ತಮ್ಮ ಸಲಹೆಗಳ ಮೂಲಕ ಬೆಂಬಲಿಸುತ್ತಿದ್ದಾರೆ‌. ಇನ್ನೊಂದ್ ಕಡೆ ತಮ್ಮ Kiccha 46 ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡಲು ಸುದೀಪ್ ರೆಡಿಯಾಗಿದ್ದಾರೆ. ಅಭಿಮಾನಿಗಳು ಕೂಡ ಕಿಚ್ಚನ ಅವತಾರ ನೋಡಲು ಕಾತರದಿಂದ ಕಾಯ್ತಿದ್ದಾರೆ.

Share This Article
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌ ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್‌ ಲುಕ್‌ ಬೆಡಗಿ ಸಾನ್ಯಾ ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..! ಹಾಟ್ ಅವತಾರದಲ್ಲಿ ಮಾನ್ವಿತಾ