ಖೇಲಾ ಸಿನಿಮಾದ ಶೂಟಿಂಗ್ ಮುಗಿಸಿದ ವಿಹಾನ್

Public TV
1 Min Read

ರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಖೇಲಾ ಚಿತ್ರದ (Khela Kannada Movie) ಚಿತ್ರೀಕರಣ ಮುಕ್ತಾಯವಾಗಿದೆ.

ಬೆಂಗಳೂರು, ಮೈಸೂರು ಹಾಗೂ ಉತ್ತರಕಾಂಡದಲ್ಲಿ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಹಿರಿಯ ನಿರ್ದೇಶಕ ವಿಷ್ಣುಕಾಂತ್ ಅವರ ಪುತ್ರ ಭರತ್ ವಿ.ಜೆ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರ ಪ್ರೇಮ ಕಥಾಹಂದರ ಹೊಂದಿದೆ. ಇದು ಮಾಮೂಲಿ ತರಹದ ಪ್ರೇಮಕಥೆಯಲ್ಲ. ವಿಭಿನ್ನ ಲವ್ ಸ್ಟೋರಿ! ಇದನ್ನೂ ಓದಿ: BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

ಈ ಚಿತ್ರದ ಮೂಲಕ ಜನಪ್ರಿಯ ಧಾರಾವಾಹಿಗಳಾದ ಶ್ರಾವಣಿ ಸುಬ್ರಹ್ಮಣ್ಯ ಹಾಗೂ ಮೈನಾದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಹಾನ್ ಪ್ರಭಂಜನ್ ನಾಯಕನಾಗಿ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಆಶಿಕಾ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಮುಖಪಾತ್ರದಲ್ಲಿ ಯುವರಾಜ್ ಗೌಡ, ಸ್ವಾತಿ ಮುಂತಾದವರಿದ್ದಾರೆ. ವಿಶೇಷಪಾತ್ರದಲ್ಲಿ ನಟಿ ಸಂಗೀತಾ ಭಟ್ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಖೇಲಾ ಚಿತ್ರಕ್ಕೆ ಎಂ.ಎಸ್ ತ್ಯಾಗರಾಜ್ ಸಂಗೀತ ನಿರ್ದೇಶನ, ಸ್ವಾಮಿ ಮೈಸೂರು ಛಾಯಾಗ್ರಹಣ ಹಾಗೂ ಅಮಿತ್ ಜವಳ್ಕರ್ ಸಂಕಲನವಿದೆ. ಸಂಭಾಷಣೆಯನ್ನು ಆರ್ ಪ್ರಮೋದ್ ಜೋಯಿಸ್ ಬರೆದಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್‌ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್‌ ಸಿಂಹ

Share This Article