‘ಖಟ್ಟಾ ಮಿಟ್ಟಾ’ ಸಿನಿಮಾ ಕೆಟ್ಟ ಕನಸು: ನಟಿ ತ್ರಿಷಾ

Public TV
1 Min Read

ಕ್ಷಿಣದ ಸ್ಟಾರ್ ನಟಿ, ಹೆಸರಾಂತ ತಾರೆ ತ್ರಿಷಾ (Trisha) 2010ರಲ್ಲಿ ಖಟ್ಟಾ ಮಿಟ್ಟಾ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದರು. ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ ತ್ರಿಷಾಗೆ ಬಾಲಿವುಡ್ ನಲ್ಲಿ ದೊಡ್ಡದೊಂದು ಬ್ರೇಕ್ ನೀಡಲಿದೆ ಎಂದೇ ಹೇಳಲಾಗಿತ್ತು. ಆದರೆ, ತ್ರಿಷಾಗೆ ಆ ಸಿನಿಮಾ ಕೆಟ್ಟ ಕನಸಾಗಿದೆ.

ಹೌದು, ಈ ಮಾತನ್ನು ಅವರೇ ಹೇಳಿಕೊಂಡಿದ್ದಾರೆ. 2010ರ ನಂತರ ನೀವು ಯಾವುದೇ ಬಾಲಿವುಡ್ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ ಯಾಕೆ? ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವನ್ನೇ ಅವರು ನೀಡಿದ್ದಾರೆ. ಖಟ್ಟಾ ಮಿಟ್ಟಾ (Khatta Meetha) ಸಿನಿಮಾ ನನಗೆ ದೊಡ್ಡ ಹೆಸರು ತಂದು ಕೊಡುತ್ತದೆ ಎಂದು ನಂಬಿದ್ದೆ. ಅದು ಸುಳ್ಳಾಯಿತು. ಆ ಸಿನಿಮಾ ಸೋತಿತು. ಬಾಲಿವುಡ್ ಪ್ರೇಕ್ಷಕರು ನನ್ನ ಒಪ್ಪಲಿಲ್ಲ. ಹಾಗಾಗಿ ಮತ್ತೆ ಬಾಲಿವುಡ್ ಗೆ ಹೋಗಲಿಲ್ಲ ಎಂದಿದ್ದಾರೆ.

ಖಟ್ಟಾ ಮಿಟ್ಟಾ ಸಿನಿಮಾ ತ್ರಿಷಾ ಪಾಲಿಗೆ ಮುಳುವಾಯಿತು ಎನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ದಕ್ಷಿಣದಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟರೂ, ಹೆಸರಾಂತ ನಟರೊಂದಿಗೆ ತೆರೆ ಹಂಚಿಕೊಂಡರು. ಇವರ ಸಿನಿಮಾಗಳು ಹಿಂದೆಗೆ ಡಬ್ ಆದರೂ, ಅವರು ಮಾತ್ರ ಬಾಲಿವುಡ್ ಕಡೆ ಮುಖ ಕೂಡ ಹಾಕಿಲ್ಲವಂತೆ.

 

ತ್ರಿಷಾ ಬಹುಭಾಷಾ ನಟಿಯಾಗಿದ್ದರೂ, ಕನ್ನಡವೂ ಸೇರಿದಂತೆ ಹಲವಾರು ಭಾಷಾ ಚಿತ್ರಗಳನ್ನು ಒಪ್ಪಿಕೊಂಡರೂ, ಈವರೆಗೂ ಒಂದೇ ಒಂದು ಬಾಲಿವುಡ್ ಸ್ಕ್ರಿಪ್ಟ್ ಕೇಳಿಲ್ಲವಂತೆ ಅದೃಷ್ಟವಂತ ನಟಿ. ಅಷ್ಟರ ಮಟ್ಟಿಗೆ ಖಟ್ಟಾ ಮಿಟ್ಟಾ ಅವರ ಮನಸ್ಸನ್ನು ಘಾಷಿಗೊಳಿಸಿದೆ.

Share This Article