ಟೆಹ್ರಾನ್: ಅಮೆರಿಕ (America) ಮತ್ತು ಇಸ್ರೇಲ್ (Israel) ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಖಮೇನಿ ಪತ್ನಿ ಇಂದು ಮನ್ಸೌರೆ ಖೋಜಸ್ತೆಹ್ (Mansoureh Khojasteh) (ಮಾ.2) ಸಾವನ್ನಪ್ಪಿದ್ದಾರೆ.
ಎರಡು ದಿನಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಖಮೇನಿ ಸೇರಿದಂತೆ ಅವರ ಮಗಳು, ಅಳಿಯ ಮತ್ತು ಮೊಮ್ಮಗಳು ಸೇರಿದಂತೆ ಅವರ ಕುಟುಂಬದ ಹಲವಾರು ಸದಸ್ಯರು ಬಲಿಯಾಗಿದ್ದರು. ಇದೀಗ ದಾಳಿಯಲ್ಲಿ ಗಾಯಗೊಂಡಿದ್ದ ಖಮೇನಿ ಪತ್ನಿ ಮನ್ಸೌರೆ ಖೋಜಸ್ತೆಹ್ (78) ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ. ಇದನ್ನೂ ಓದಿ:ಚೀನಾದ ಶಸ್ತ್ರಾಸ್ತ ನಂಬಿ ಪ್ರಾಣ ಕಳೆದುಕೊಂಡ ಖಮೇನಿ!
ಟೆಹ್ರಾನ್ ಮತ್ತು ಸುತ್ತಮುತ್ತಲಿನ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಪ್ರಾಣಕಳೆದುಕೊಂಡಿದ್ದರು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಮೇನಿ ಸಾವನ್ನು ಸಾರ್ವಜನಿಕವಾಗಿ ಘೋಷಿಸಿದ ಗಂಟೆಗಳ ನಂತರ ಇರಾನ್ ಮಾಧ್ಯಮದ ಸಾವನ್ನಪ್ಪಿರುವುದಾಗಿ ಧೃಡಪಡಿಸಿತು.
ಭವಿಷ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ತನ್ನ ಮೇಲೆ ದಾಳಿ ನಡೆಸಬಹುದು ಎಂದು ಮೊದಲೇ ಊಹಿಸಿದ್ದ ಇರಾನ್ ಚೀನಾದಿಂದ HQ-9B ಏರ್ ಡಿಫೆನ್ಸ್ ಸಿಸ್ಟಂ ಖರೀದಿಸಿತ್ತು. ಆದರೆ ಈ ವಾಯು ರಕ್ಷಣಾ ವ್ಯವಸ್ಥೆ ಯುದ್ಧ ವಿಮಾನಗಳನ್ನು ಗುರುತಿಸಲು ವಿಫಲವಾಗಿದ್ದು ಇರಾನ್ ಸರ್ವೋಚ್ಛ ನಾಯಕ ಖಮೇನಿಯೇ ಸೇರಿದಂತೆ ಟಾಪ್ ಕಮಾಂಡರ್ಗಳು ಇಸ್ರೇಲ್, ಅಮೆರಿಕ ದಾಳಿಗೆ ಹತರಾದರು. ಇದನ್ನೂ ಓದಿ:ಪವಾಡವೇ ನಡೆದಿತ್ತು… ಬಾಂಬ್ ದಾಳಿಯಲ್ಲೂ ಬದುಕುಳಿದಿದ್ದ ಖಮೇನಿ – ಜೀವನದ ಪ್ರಮುಖ ಘಟ್ಟಗಳು ಹೇಗಿತ್ತು?

