ಕಪಿಲ್‌ ಶರ್ಮಾ ಕೆಫೆ ಮೇಲೆ ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿ

Public TV
1 Min Read

ಒಟ್ಟಾವಾ: ಕೆನಡಾದಲ್ಲಿ (Canada) ಹಾಸ್ಯನಟ ಕಪಿಲ್ ಶರ್ಮಾ (Kapil Sharma) ಅವರ ಕೆಫೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಅದರ ಮೇಲೆ ಖಲಿಸ್ತಾನ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.

ಖಲಿಸ್ತಾನಿ ಭಯೋತ್ಪಾದಕ (Khalistani Terrorists) ಹರ್ಜೀತ್ ಸಿಂಗ್ ಲಡ್ಡಿ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಇದರಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೆಫೆ ಮೇಲೆ ಕನಿಷ್ಠ ಒಂಬತ್ತು ಗುಂಡುಗಳನ್ನು ಹಾರಿಸಲಾಗಿದೆ. ಇದನ್ನೂ ಓದಿ: ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

ಕ್ಯಾಪ್ಸ್ ಕೆಫೆ ಎಂದು ಕರೆಯಲ್ಪಡುವ ಈ ಕೆಫೆ, ರೆಸ್ಟೋರೆಂಟ್ ಉದ್ಯಮದಲ್ಲಿ ಶರ್ಮಾ ಅವರ ಮೊದಲ ಪ್ರಯತ್ನವಾಗಿದೆ. ಅವರ ಪತ್ನಿ ಗಿನ್ನಿ ಚತ್ರತ್ ಕೂಡ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಈ ಕೆಫೆಯನ್ನು ಕೆಲವು ದಿನಗಳ ಹಿಂದಷ್ಟೇ ಉದ್ಘಾಟಿಸಲಾಗಿತ್ತು.

ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಕೆಫೆಯ ಕಿಟಕಿಯ ಮೇಲೆ ಕನಿಷ್ಠ ಒಂಬತ್ತು ಗುಂಡುಗಳನ್ನು ಹಾರಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ. ಲಡ್ಡಿ ಭಯೋತ್ಪಾದನಾ ವಿರೋಧಿ ಸಂಸ್ಥೆ NIA ಯ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ. ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಸ್ಯನಟನ ಹೇಳಿಕೆಯಿಂದ ಮನನೊಂದಿದ್ದರಿಂದ ಅವನು ಗುಂಡಿನ ದಾಳಿಗೆ ಆದೇಶಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

ಗುಂಡಿನ ದಾಳಿಯ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ನಾಯಕ ವಿಕಾಸ್ ಪ್ರಭಾಕರ್ ಅಲಿಯಾಸ್ ವಿಕಾಸ್ ಬಗ್ಗಾ ಹತ್ಯೆಗೆ ಸಂಬಂಧಿಸಿದಂತೆ ಹರ್ಜೀತ್ ಸಿಂಗ್ ಲಡ್ಡಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬೇಕಾಗಿದ್ದಾರೆ. ವಿಹೆಚ್‌ಪಿ ನಾಯಕನನ್ನು 2024 ರ ಏಪ್ರಿಲ್‌ನಲ್ಲಿ ಪಂಜಾಬ್‌ನ ರೂಪನಗರ ಜಿಲ್ಲೆಯ ಅವರ ಅಂಗಡಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Share This Article