Canada | ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಖಲಿಸ್ತಾನಿ ಗುಂಪು ಅಟ್ಯಾಕ್‌ – ಜಸ್ಟಿನ್‌ ಟ್ರುಡೋ ಖಂಡನೆ

Public TV
2 Min Read

ಒಟ್ಟಾವಾ: ಭಾರತ-ಕೆನಡಾ ರಾಜಕೀಯ ಬಿಕ್ಕಟ್ಟಿನ ನಡುವೆ ಹಿಂದೂಗಳ ಮೇಲೆ ಹಿಂಸಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದಲ್ಲಿ (Hindu Temple) ಭಕ್ತರ ಮೇಲೆ ಖಲಿಸ್ತಾನಿ ಉಗ್ರರು (Khalistani supporters) ಎನ್ನಲಾದ ಗುಂಪೊಂದು ದಾಳಿ ನಡೆಸಿದೆ.

ಖಲಿಸ್ತಾನಿ ಧ್ವಜ (Khalistani Flag) ಹಿಡಿದ ಉಗ್ರರು ಎನ್ನಲಾದ ಗುಂಪು ದೇವಸ್ಥಾನಕ್ಕೆ ಲಗ್ಗೆಯಿಟ್ಟು ಭಕ್ತರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದೆ. ಈ ಕುರಿತ ವೀಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ವೀಡಿಯೋನಲ್ಲಿ ಖಲಿಸ್ತಾನಿ ಧ್ವಜ ಹಿಡಿದ ಗುಂಪು ದೊಣ್ಣೆ ಹಿಡಿದು ಜನರನ್ನು ಥಳಿಸುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

ಹಿಂಸಾಚಾರದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಹಿಂಸಾಚಾರ ಕೃತ್ಯಗಳು ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬ ಕೆನಡಿಯನ್ನರು ತಮ್ಮ ನಂಬಿಕೆಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕನ್ನು ಹೊಂದಿದ್ದಾರೆ ಎಂದರಲ್ಲದೇ, ಸಮುದಾಯವನ್ನು ರಕ್ಷಿಸಲು ತತ್ವರಿತವಾಗಿ ಸ್ಪಂಧಿಸಿದ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ನಡೆಯುವ ಮೊದಲು 1984ರ ಸಿಖ್ ವಿರೋಧಿ ದಂಗೆಯನ್ನು ಸ್ಮರಿಸಲು ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಭಕ್ತರ ಮೇಲೆ ಹಲ್ಲೆ ನಡೆಸಿದೆ. ಇದನ್ನೂ ಓದಿ: ಮತ್ತೆ ಕ್ಯಾತೆ – ಭಾರತವನ್ನು ಸೈಬರ್‌ ಬೆದರಿಕೆ ಪಟ್ಟಿಗೆ ಸೇರಿಸಿದ ಕೆನಡಾ

ಇನ್ನೂ ಇತ್ತೀಚೆಗೆ ಕೆನಡಾದ ರಾಷ್ಟ್ರೀಯ ಸೈಬರ್ ಬೆದರಿಕೆ ಮೌಲ್ಯಮಾಪನ (NCTA) 2025-26 ವರದಿ ಬಿಡುಗಡೆಯಾಗಿತ್ತು. ಕೆನಡಾದ ಸೈಬರ್ ಭದ್ರತೆಯ ತಾಂತ್ರಿಕ ಪ್ರಾಧಿಕಾರ ʻಸೈಬರ್ ಸೆಕ್ಯುರಿಟಿ ಕೇಂದ್ರʼ ಅಕ್ಟೋಬರ್ 30 ರಂದು ಈ ವರದಿ ಬಿಡುಗಡೆ ಮಾಡಿತು. ಈ ವರದಿಯಲ್ಲಿ ಭಾರತವನ್ನು ಸೈಬರ್‌ ದಾಳಿಯ ಪಟ್ಟಿಗೆ ಕೆನಡಾ ಸರ್ಕಾರ ಸೇರಿಸಿರುವುದಾಗಿ ಉಲ್ಲೇಖವಾಗಿತ್ತು.

Share This Article