ಅಂಬಾನಿ ಮಗನ ಮದುವೆಯಲ್ಲಿ ರಾಕಿ ಭಾಯ್- ಯಶ್‌ ಗೆಟಪ್‌ಗೆ ಫ್ಯಾನ್ಸ್‌ ಫಿದಾ

Public TV
1 Min Read

‘ಕೆಜಿಎಫ್’ (KGF) ಚಿತ್ರದ ಸಕ್ಸಸ್ ಬಳಿಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರುವ ಯಶ್ ಅವರ ಮುಂದಿನ ಚಿತ್ರದ ‘ಟಾಕ್ಸಿಕ್’ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಇದರ ನಡುವೆ ಹೊಸ ಲುಕ್‌ನಲ್ಲಿ ರಾಕಿ ಭಾಯ್ ಈಗ ಪ್ರತ್ಯಕ್ಷವಾಗಿದ್ದಾರೆ. ಮುಂಬೈನಲ್ಲಿ ಯಶ್ ರೌಂಡ್ಸ್ ಹಾಕುತ್ತಿದ್ದಾರೆ. ರಾಕಿ ಭಾಯ್ ಹೇರ್ ಸ್ಟೈಲ್ ಬದಲಾಗಿದೆ. ನಟನ ನಯಾ ಲುಕ್ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ ಯಶ್ (Yash) ಮುಂಬೈನಲ್ಲಿ ರೌಂಡ್ ಹೊಡೆಯುತ್ತಿದ್ದಾರೆ. ಯಶ್ ಹೊಸ ಲುಕ್ ನೋಡಿ ‘ರಾಮಾಯಣ’ (Ramayana) ಸಿನಿಮಾಗಾ? ‘ಟಾಕ್ಸಿಕ್’ (Toxic Film) ಚಿತ್ರಕ್ಕಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ನ್ಯಾಷನಲ್ ಸ್ಟಾರ್ ಯಶ್ ಹೊಸ ಲುಕ್ ನೋಡಿ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಂಬಾನಿ ಮಗನ ಮದುವೆಗೆ ಹಾಜರಿ ಹಾಕಲು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಪಂಚಭೂತಗಳಲ್ಲಿ ಲೀನರಾದ ನಿರೂಪಕಿ ಅಪರ್ಣಾ

 

View this post on Instagram

 

A post shared by Viral Bhayani (@viralbhayani)

ಸದ್ಯ ಅಂಬಾನಿ ಮನೆ ಮಗ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಯಶ್ ದಂಪತಿಗೆ ಆಮಂತ್ರಣವಿದೆ. ಹಾಗಾಗಿ ಮುಂಬೈಗೆ ಈ ಜೋಡಿ ಎಂಟ್ರಿ ಕೊಟ್ಟಿದೆ.

‘ಕೆಜಿಎಫ್ 2’ ಸಕ್ಸಸ್ ನಂತರ ಒಂದೂವರೆ ವರ್ಷದ ಬಳಿಕ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಘೋಷಣೆಯಾಗಿದೆ. ಮಲೆಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಯಶ್ ಹೊಸ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಆಡ್ವಾಣಿ, ಹುಮಾ ಖುರೇಷಿ ಮತ್ತು ಶ್ರುತಿ ಹಾಸನ್ ಕೂಡ ಇದ್ದಾರೆ. ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.

Share This Article