ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ

Public TV
2 Min Read

ಕೆಜಿಎಫ್ (KGF) ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳ ನಟ ಹರೀಶ್ ರಾಯ್ (Harish Rai) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಅನ್ನೋ ಮಹಾಮಾರಿ ಅವರನ್ನ ಕಿತ್ತು ತಿನ್ನುತ್ತಿದೆ. ಕೆಜಿಎಫ್ ಸಿನಿಮಾದ ಶೂಟಿಂಗ್ ವೇಳೆ ಕಾಣಿಸಿಕೊಂಡ ಕ್ಯಾನ್ಸರ್ ಮಹಾಮಾರಿ ಹರೀಶ್ ರಾಯ್ ಕಲಾ ಬದುಕಿಗೆ ಕುತ್ತು ತಂದಿದೆ. ಒಂದುಕಡೆ ಸಿನಿಮಾಗಳಿಲ್ಲದೇ ಮನೆಯ ಜವಾಬ್ದಾರಿ ನಿಭಾಯಿಸಲಾಗುತ್ತಿಲ್ಲ. ಮತ್ತೊಂದೆಡೆ ದುಬಾರಿ ಚಿಕಿತ್ಸೆಗಾಗಿ ವೈದ್ಯರು ಹೈಟ್ರಿಟ್ಮೆಂಟ್‌ಗಾಗಿ ಸಲಹೆ ನೀಡಿದ್ದಾರೆ. ಮುಂದಿನ ಹಂತದ ಚಿಕಿತ್ಸೆಗಾಗಿ ಹರೀಶ್ ರಾಯ್‌ಗೆ 70-80 ಲಕ್ಷ ರೂಪಾಯಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹರೀಶ್ ರಾಯ್ `ಪಬ್ಲಿಕ್ ಟಿವಿ’ ಮೂಲಕ ಕನ್ನಡ ಚಿತ್ರರಂಗದ ಕಲಾವಿದರಿಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಹಾಗೂ ಸಮಸ್ತ ಕರುನಾಡಿನ ಜನರನ್ನ ಕೈಮುಗಿದು ಕೇಳಿಕೊಂಡಿದ್ದಾರೆ. ಹರೀಶ್ ರಾಯ್ ಅವರಿಗೆ ವೈದ್ಯರು ಸಲಹೆ ನೀಡಿರುವ ಪ್ರಕಾರ ಒಂದು ಇಂಜೆಕ್ಷನ್‌ಗೆ 3.55 ಲಕ್ಷ ರೂ. ವೆಚ್ಚ ತಗುಲಲಿದೆಯಂತೆ. ಈ ಚಿಕಿತ್ಸೆ ಶುರು ಮಾಡಿದ ಮೇಲೆ 21 ದಿನಗಳಿಗೊಂದರಂತೆ ಇಂಜೆಕ್ಷನ್ ನೀಡಬೇಕಾಗುತ್ತೆ. 63 ದಿನಗಳಲ್ಲಿ ಮೂರು ಇಂಜೆಕ್ಷನ್ ನೀಡಬೇಕು. ಅಲ್ಲಿಗೆ ಒಂದು ಸೈಕಲ್ ಕಂಪ್ಲೀಟ್ ಆಗುತ್ತಂತೆ. ಅಂದರೆ ಅಲ್ಲಿಗೆ 10.65,000 ರೂ. ಹಣ ಬೇಕಾಗುತ್ತೆ. ಹೀಗೆ 6 ರಿಂದ 7 ಸೈಕಲ್ ಕಂಪ್ಲೀಟ್ ಮಾಡ್ಬೇಕು. ಅಂದರೆ ಅಲ್ಲಿಗೆ 70-80 ಲಕ್ಷ ಹಣ ಕೇವಲ ಇಂಜೆಕ್ಷನ್‌ಗೆ ಬೇಕಾಗುತ್ತದೆಯಂತೆ. ಸಹಾಯ ಹಸ್ತ ಚಾಚುವರಿಗೆ ಇಲ್ಲಿ ಬ್ಯಾಂಕ್ ಡಿಟೇಲ್ಸ್ ನೀಡಲಾಗಿದೆ.ಇದನ್ನೂ ಓದಿ: ಕೊಪ್ಪಳದಲ್ಲಿ ಗಮನ ಸೆಳೆಯುತ್ತಿದೆ ಜೋಕಾಲಿ ಗಣೇಶ

ಅಕೌಂಟ್ ಡಿಟೇಲ್ಸ್ :
ನೇಮ್ : ಹರೀಶ್ ರಾಯ್
ಅಕೌಂಟ್ ನಂಬರ್: 38510865963
ಐಎಫ್‌ಎಸ್‌ಸಿ :  SBIN0004408

ಫೋನ್ ಪೇ & ಗೂಗಲ್ ಪೇ
7760035557
9606960656

ಈ ಇಂಜೆಕ್ಷನ್ ತುಂಬಾ ದುಬಾರಿಯಾಗಿದ್ದು, ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣಬೇಕು ಹೀಗಾಗಿ ಹರೀಶ್ ರಾಯ್ ಸಹಾಯ ಹಸ್ತ ಚಾಚಿದ್ದಾರೆ. ಬಾಲಿವುಡ್‌ನ ನಟ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಬಂದ ವೇಳೆ ಅವರಿಗೂ ಈ ಇಂಜೆಕ್ಷನ್ ಕೊಡಲಾಗಿತ್ತು, ಅವರು ಗುಣಮುಖರಾಗಿದ್ದಾರೆ. ಅದೇ ಹೋಪ್ ನನ್ನಲ್ಲೂ ಇದೆ. ಇದಕ್ಕೆ ನಮ್ಮ ಚಿತ್ರರಂಗ, ಕಲಾವಿದರು, ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರು, ಫಿಲ್ಮ್ ಚೇಂಬರ್ ಹಾಗೂ ಸಮಸ್ತ ಕರುನಾಡಿನ ಸಿನಿಮಾ ಅಭಿಮಾನಿಗಳು ಮನಸ್ಸು ಮಾಡಬೇಕು. ಈ ಕಾಯಿಲೆಯನ್ನ ಮೆಟ್ಟಿ ನಿಲ್ಲಲು ನನಗೆ ಧೈರ್ಯವಿದೆ ಆದ್ರೆ ಹಣವಿಲ್ಲ. ಹೀಗಾಗಿ ತಾವೆಲ್ಲರೂ ಸಹಾಯ ಮಾಡಿದ್ರೆ ನಾನು ಮತ್ತೆ ಮೊದಲಿನಂತೆ ಆಗುತ್ತೇನೆ ಎಂದು ʻಪಬ್ಲಿಕ್ ಟಿವಿʼ ಮೂಲಕ ಹರೀಶ್ ರಾಯ್ ಕೇಳಿಕೊಂಡಿದ್ದಾರೆ.

ಮತ್ತೆ ಮೊದಲಿನಂತೆ ಆರೋಗ್ಯವಾಗಿ ಮರಳಿ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಳ್ಳಬೇಕು. ನನಗೆ ಸಿನಿಮಾ ಇಂಡಸ್ಟ್ರಿನೇ ಎಲ್ಲಾ. ಅದು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ನಾನಿನ್ನು ಕಲಾ ಸರಸ್ವತಿಯ ಸೇವೆ ಮಾಡಬೇಕು. ಅದಕ್ಕಾಗಿ ಗುಣಮುಖರಾಗಿ ಬಂದ ಬಳಿಕ ನಿರ್ದೇಶಕರುಗಳ ಮನೆ ಬಾಗಿಲಿಗೆ ಹೋಗಿ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ನಟರನ್ನ ಭೇಟಿ ಮಾಡಿ ಅವಕಾಶಗಳನ್ನ ಕೊಡುವಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಮೂರುಗಳ ಹಿಂದೆ ಕ್ಯಾನ್ಸರ್ ಟ್ರೀಟ್ಮೆಂಟ್‌ಗಾಗಿ ನಟ ಯಶ್, ದರ್ಶನ್ ಹಾಗು ದುನಿಯಾ ವಿಜಯ್ ಸಹಾಯ ಮಾಡಿರುವ ಬಗ್ಗೆ ನೆನೆದಿದ್ದಾರೆ.ಇದನ್ನೂ ಓದಿ: ರಾಹುಲ್‌ ರ‍್ಯಾಲಿಯಲ್ಲಿ ಮೋದಿಯನ್ನು ನಿಂದಿಸಿದವ ಅರೆಸ್ಟ್‌

Share This Article