ಏ.22ರಿಂದ ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್ ಸಿನಿಮಾದ ಶೂಟಿಂಗ್ ಶುರು

Public TV
1 Min Read

‘ದೇವರ’ (Devara) ಸಿನಿಮಾ ಬಳಿಕ ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ (Prashanth Neel) ಜೊತೆ ಜ್ಯೂ.ಎನ್‌ಟಿಆರ್ (Jr.Ntr) ಕೈಜೋಡಿಸಿದ್ದಾರೆ. ಇಬ್ಬರ ಕ್ರೇಜಿ ಕಾಂಬಿನೇಷನ್ ಸಿನಿಮಾದ ಶೂಟಿಂಗ್ ಶುರುವಾಗೋದು ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ನಿರ್ಮಾಣ ಸಂಸ್ಥೆ ಈ ಕುರಿತು ಅಧಿಕೃತವಾಗಿ ಘೋಷಿಸಿದೆ. ಇದನ್ನೂ ಓದಿ:ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು

ಕೆಲ ತಿಂಗಳುಗಳ ಹಿಂದೆ ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಆದರೆ ಚಿತ್ರದ ಶೂಟಿಂಗ್ ಪ್ರಾರಂಭ ಆಗೋದು ಯಾವಾಗ ಎಂದು ತಿಳಿಸಿರಲಿಲ್ಲ. ಈಗ ಅಫಿಷಿಯಲ್ ಅನೌನ್ಸ್‌ಮೆಂಟ್ ಹೊರಬಿದ್ದಿದೆ. ಏ.22ರಿಂದ ಜ್ಯೂ.ಎನ್‌ಟಿಆರ್ ಹೊಸ ಸಿನಿಮಾದ ಚಿತ್ರೀಕರಣ ಶುರು ಆಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ:ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

ಸದ್ಯ ಜ್ಯೂ.ಎನ್‌ಟಿಆರ್ ಬಾಲಿವುಡ್‌ನ ‘ವಾರ್ 2’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಒಪ್ಪಿಕೊಂಡಿರೋ ಕಮಿಟ್‌ಮೆಂಟ್ ಮುಗಿಸಿ ಏ.22ರಂದು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾತಂಡವನ್ನು ಅವರು ಸೇರಿಕೊಳ್ಳಲಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಚಿತ್ರದ ಟೈಟಲ್ ಹಾಗೂ ನಾಯಕಿಯ ಆಯ್ಕೆ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ. ಈ ಸಿನಿಮಾದ ಮುಂದಿನ ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ.

Share This Article