KGF ಸಹ-ನಿರ್ದೇಶಕ ಕೀರ್ತನ್ ನಾಡಗೌಡರ 4 ವರ್ಷದ ಮಗು ಲಿಫ್ಟ್‌ ಅಪಘಾತದಲ್ಲಿ ಸಾವು

1 Min Read

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ‘ಕೆಜಿಎಫ್‌’ (KGF) ಸಿನಿಮಾದ ಸಹ ನಿರ್ದೇಶಕ ಕೀರ್ತನ್‌ ನಾಡಗೌಡ (Kirtan Nadagouda) ಅವರ 4 ವರ್ಷದ ಮಗು ಲಿಫ್ಟ್‌ ಅಪಘಾತದಲ್ಲಿ ಮೃತಪಟ್ಟಿದೆ.

ಕೀರ್ತನ್ ನಾಡಗೌಡ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ದಂಪತಿ ಪುತ್ರ ಚಿರಂಜೀವಿ ಸೋನಾರ್ಶ್ ಕೆ.ನಾಡಗೌಡ ದುರಂತ ಸಾವು ಕಂಡಿದ್ದಾನೆ. ಮಗು ಲಿಫ್ಟ್‌ನಲ್ಲಿ ಸಿಲುಕಿಕೊಂಡು ಸಾವಿಗೀಡಾಗಿದೆ. ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಗೆ ಕ್ರೇಜಿಸ್ಟಾರ್‌ ಎಂಟ್ರಿ – ತನ್ನ ಹೃದಯ ಕದ್ದ ಚೆಲುವೆ ಬಗ್ಗೆ ಮಾತಾಡಿದ ರವಿಚಂದ್ರನ್‌

ನಟ, ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಕೀರ್ತನ್ ನಾಡಗೌಡರ ಮಗನ ದುರಂತ ಸಾವು ಹೃದಯವಿದ್ರಾವಕ. ತೆಲುಗು ಮತ್ತು ಕನ್ನಡದಲ್ಲಿ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿರುವ ಕೀರ್ತನ್ ನಾಡಗೌಡರ ಕುಟುಂಬಕ್ಕೆ ಸಂಭವಿಸಿದ ದುರಂತ ನನ್ನನ್ನು ತುಂಬಾ ದುಃಖಿತನನ್ನಾಗಿ ಮಾಡಿದೆ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕೀರ್ತನ್ ನಾಡಗೌಡ ಒಬ್ಬ ಚಲನಚಿತ್ರ ನಿರ್ದೇಶಕ. ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಜಿಎಫ್, ಕೆಜಿಎಫ್-2, ಮತ್ತು ಪ್ರಭಾಸ್ ಅವರ ಸಲಾರ್‌ನಂತಹ ಚಿತ್ರಗಳಲ್ಲಿ ತೊಡಗಿಸಿಕೊಂಡು ಹೆಸರುವಾಸಿಯಾಗಿದ್ದಾರೆ. ಇದನ್ನೂ ಓದಿ: Video Viral | ಸೆಲ್ಫಿಗಾಗಿ ಮೈಮೇಲೆ ಮುಗಿಬಿದ್ದ ಫ್ಯಾನ್ಸ್ – ನಟಿ ನಿಧಿ ಅಗರ್ವಾಲ್‌ಗೆ ಭಾರೀ ಕಸಿವಿಸಿ

ಪ್ರಶಾಂತ್ ನೀಲ್ ಅವರ ಜೊತೆ ಸಹ ನಿರ್ದೇಶಕರಾಗಿ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಯಶ್ ಅಭಿನಯದ ಚಿತ್ರಗಳಿಗೆ ನೀಡಿದ ಕೊಡುಗೆಗಳ ನಂತರ ನಾಡಗೌಡ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದಾರೆ.

Share This Article