ಕೆಜಿಎಫ್ ಮೂಲಕ ವಿಶ್ವ ಮಟ್ಟದಲ್ಲಿ ಶುರುವಾಗಲಿದೆಯಾ ಯಶ್ ಹವಾ?

Public TV
1 Min Read

ಬೆಂಗಳೂರು: ಅಖಂಡ ಎರಡು ವರ್ಷಗಳ ನಿರಂತರ ಶ್ರಮವೊಂದು ಸಾರ್ಥಕಗೊಂಡಿದೆ. ಈ ಅವಧಿಯಲ್ಲಿ ಈ ಸಿನಿಮಾವನ್ನೇ ಉಸಿರಾಡಿದ್ದ ಕೆಜಿಎಫ್ ಚಿತ್ರತಂಡದ ಮುಖದಲ್ಲೀಗ ತೃಪ್ತಿಯ ಮಂದಹಾಸ ಮೂಡಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ಮೊನ್ನೆಯಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಗೆ ಎಲ್ಲ ಭಾಷೆಗಳಲ್ಲಿಯೂ ಸಿಗುತ್ತಿರೋ ಅಭೂತಪೂರ್ವ ಪ್ರತಿಕ್ರಿಯೆ!

ಯಶ್ ಅಭಿನಯದ ಈ ಚಿತ್ರ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರಕ್ಕೆದುರಾಗಿ ಬಿಡುಗಡೆಯಾಗಲಿದೆ. ಈ ವಿಚಾರ ತಿಳಿಯುತ್ತಲೇ ಅನೇಕರು ಲೇವಡಿಯಾಡಿದ್ದೂ ಇದೆ. ಆದರೆ ಇದೀಗ ಕೆಜಿಎಫ್ ಟ್ರೇಲರ್ ಬಾಲಿವುಡ್ ಮಟ್ಟದಲ್ಲಿಯೂ ಸಂಚಲನ ಸೃಷ್ಟಿಸಿದೆ. ಇದುವೇ ಈ ಚಿತ್ರದ ಗೆಲುವಿನ ಭವಿಷ್ಯವನ್ನೂ ಹೇಳುತ್ತಿದೆ.

ಟ್ರೇಲರ್ ಹವಾ ಮೂಲಕವೇ ಸ್ಯಾಂಡಲ್‍ವುಡ್‍ಗೆ ಸೀಮಿತವಾಗಿದ್ದ ಯಶ್ ಬಾಲಿವುಡ್ ಅನ್ನೂ ಮೀರಿ ವಿಶ್ವ ಮಟ್ಟದಲ್ಲಿಯೂ ಹೆಸರು ಮಾಡಲಿದ್ದಾರೆಂಬ ಮಾತುಗಳೂ ವ್ಯಾಪಕವಾಗಿಯೇ ಕೇಳಿ ಬರಲಾರಂಭಿಸಿವೆ. ಇಂಥಾ ಸಂದರ್ಭದಲ್ಲಿಯೇ ಯಶ್ ಕೂಡಾ ಈ ಯಶದ ಬಗ್ಗೆ ಮಾತಾಡಿದ್ದಾರೆ. ತಾನು ವಿಶ್ವಮಟ್ಟದಲ್ಲಿ ಗಮನ ಸೆಳೆದವ ನಟ ಅಲ್ಲದಿದ್ದರೂ ಶಾರೂಖ್ ರಂಥಾ ನಟರ ಸಿನಿಮಾದೊಂದಿಗೇ ತಮ್ಮ ಕೆಜಿಎಫ್ ಚಿತ್ರವೂ ತೆರೆ ಕಾಣುತ್ತಿರೋದರ ಬಗ್ಗೆ ಖುಷಿ ಇದೆ ಅಂದಿದ್ದಾರೆ. ಜೊತೆಗೆ ತಾವು ಸಿನಿಮಾ ಅಭಿಮಾನಿ ಅಂದಿರೋ ಯಶ್ ಅವರಿಗೆ ಬಾಲಿವುಡ್ಡಲ್ಲಿ ಅಮಿತಾಬ್ ಬಚ್ಚನ್ ಅಂದ್ರೆ ಇಷ್ಟವಂತೆ. ಇನ್ನು ದೀಪಿಕಾ ಪಡುಕೋಣೆ ಅಂದರೂ ತಮಗಿಷ್ಟ ಅಂದಿದ್ದಾರೆ ಯಶ್!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *