ಆಡಿಷನ್‍ಗೆ ಬನ್ನಿ – ಹೊಸ ಕಲಾವಿದರಿಗೆ ಬಾಗಿಲು ತೆರೆದ ಕೆಜಿಎಫ್

Public TV
1 Min Read

ಬೆಂಗಳೂರು: ಕನ್ನಡದ ಸಿನಿ ಅಂಗಳದಲ್ಲಿ ಇತಿಹಾಸ ಬರೆದ ಸಿನಿಮಾ ಕೆಜಿಎಫ್-ಚಾಪ್ಟರ್ 1. ಮೊದಲ ಆವೃತ್ತಿಯ ಸಿನಿಮಾ ತೆರೆಕಂಡು ಯಶಸ್ವಿಯಾಗಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಚಿತ್ರತಂಡ ಕೆಜಿಎಫ್-2 ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಈ ನಡುವೆ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್, ಹೊಸ ಕಲಾವಿದರಿಗೆ ಕೆಜಿಎಫ್-2ನಲ್ಲಿ ನಟಿಸುವ ಸುವರ್ಣಾವಕಾಶ ನೀಡಿದ್ದಾರೆ.

ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಪ್ರಶಾಂತ್ ನೀಲ್ ಆಡಿಶನ್ ದಿನಾಂಕವನ್ನು ಪ್ರಕಟಿಸಿದ್ದಾರೆ. ಇದೇ ಏಪ್ರಿಲ್ 26ರಂದು ಬೆಂಗಳೂರಿನ ಜಿಎಂ ರಿಜಾಯಜ್‍ನಲ್ಲಿ ಆಡಿಶನ್ ನಡೆಯಲಿದೆ. ಏಪ್ರಿಲ್ 26ರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಆಡಿಷನ್ ನಡೆಯಲಿದ್ದು, 8 ರಿಂದ 16 ವರ್ಷದ ಹುಡುಗರು ಮತ್ತು 25 ವರ್ಷ ಮೇಲ್ಪಟ್ಟ (ಪುರುಷರು)ಆಸಕ್ತಿಯುಳ್ಳ ಕಲಾವಿದರು ಆಡಿಷನ್‍ನಲ್ಲಿ ಭಾಗವಹಿಸಬಹುದು. ಎಲ್ಲರೂ ಕೇವಲ ಒಂದು ನಿಮಿಷದಲ್ಲಿ ತಮ್ಮ ಡೈಲಾಗ್ ನ್ನು ಒಪ್ಪಿಸಬೇಕು.

ಮೊದಲ ಕೆಜಿಎಫ್ ಭಾಗದಲ್ಲಿಯೂ ಚಿತ್ರತಂಡ ಹೊಸ ಕಲಾವಿದರಿಗೆ ಮಣೆ ಹಾಕಿತ್ತು. ಇದೀಗ ಎರಡನೇ ಭಾಗದ ಸಿನಿಮಾಕ್ಕಾಗಿ ಮತ್ತೆ ಹೊಸ ನಟರ ನಿರೀಕ್ಷೆಯಲ್ಲಿದೆ. ಪ್ರಶಾಂತ್ ನೀಲ್ ಮೊದಲಿನಿಂದಲೂ ತಮ್ಮ ಕಥೆಗೆ ತಕ್ಕಂತಹ ಪಾತ್ರದಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆಸಕ್ತರು ಆಡಿಷನ್ ನಲ್ಲಿ ಭಾಗಿಯಾಗಿ ಕೆಜಿಎಫ್ ಚಿತ್ರದ ಭಾಗವಾಗುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು.

https://twitter.com/prashanth_neel/status/1119932065951076352

Share This Article
Leave a Comment

Leave a Reply

Your email address will not be published. Required fields are marked *