ಮಗಳು, ಇಬ್ಬರು ಪತ್ನಿಯರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಕೆಜಿಎಫ್ ಬಾಬು

Public TV
3 Min Read

-ನಮ್ಮನೆಯವರು ದೇವರಂತ ಮನುಷ್ಯ

ಬೆಂಗಳೂರು: ರಾಜಕೀಯದಲ್ಲಿ ಇಂತದೆಲ್ಲಾ ಇದೆ ಅಂತ ಗೊತ್ತಾಗಿದ್ದರೆ ದೇವರಾಣೆ ರಾಜಕೀಯಕ್ಕೆ ಬರುತ್ತಿರಲಿಲ್ಲ. ಬಂದು ತಪ್ಪು ಮಾಡಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ ಯಾನೆ ಕೆಜಿಎಫ್ ಬಾಬು ಕಣ್ಣೀರಿಡುತ್ತಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಕೆಲದಿನಗಳ ಹಿಂದೆ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಎಸ್‍.ಟಿ ಸೋಮಶೇಖರ್ ಆರೋಪಿಸಿದ್ದರು. ಈ ಬಗ್ಗೆ ವಸಂತ ನಗರದ ತಮ್ಮ ಕಚೇರಿಯಲ್ಲಿ ಹೆಂಡತಿ ಮಕ್ಕಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಕೆಜಿಎಫ್ ಬಾಬು, ನನಗೆ ಪತ್ರಿಕಾಗೋಷ್ಠಿ ನಡೆಸೋಕೆ ಇಷ್ಟ ಇರಲಿಲ್ಲ. ನನಗೆ ಹೆಂಡತಿ ಮಗಳು ಅಂದರೆ ಪ್ರಾಣ. ನವೀದ್ ಅನ್ನೋನು ನನ್ನ ಜೊತೆ ಜೆವಿಯಲ್ಲಿ 200-300 ಕೋಟಿ ವ್ಯವಹಾರಕ್ಕೆ ಮುಂದಾಗಿ ನನ್ನ ಆಸ್ತಿಯಲ್ಲಿ 200 ಕೋಟಿ ನಷ್ಟ ಮಾಡಿದ. ನಾನು ಮದುವೆ ಆದ ಎರಡನೇ ಹೆಂಡತಿ ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. 2 ವರ್ಷ ನಾವಿಬ್ಬರು ಮದುವೆ ಆಗಿದ್ದು ಮೊದಲ ಹೆಂಡತಿಗೆ ಗೊತ್ತಿರಲಿಲ್ಲ. ನವೀದ್ ನನ್ನ ಮೊದಲ ಹೆಂಡತಿಗೆ ಈ ವಿಷಯ ತಿಳಿಸಿ ನಿಮಗೆ ಆಸ್ತಿ ಸಿಗಲ್ಲ ಅಂತ ತಲೆ ಕೆಡಿಸಿದ್ದರು. ಬೇರೆ ಬೇರೆ ಕಡೆ ಕರೆದೊಯ್ದು 6 ತಿಂಗಳು ಮೊದಲ ಹೆಂಡತಿ ನನ್ನ ಕೈಗೆ ಸಿಗದಂತೆ ಮಾಡಿದರು. ಕಷ್ಟದಲ್ಲಿ ಮೊದಲ ಹೆಂಡತಿ ನನ್ನ ಜೊತೆಗಿದ್ದಳು ಹಾಗಾಗಿ ಅವಳನ್ನು ನಾನು ಬಿಡಲು ಸಿದ್ಧನಿರಲಿಲ್ಲ. ಡೊಮೆಸ್ಟಿಕ್ ವೈಲೆನ್ಸ್ ಕೇಸ್ ಹಾಕಿಸಿದ್ದರು ಇಬ್ಬರು ವಕೀಲರು ಸೇರಿ. 6 ತಿಂಗಳು ಬಿಟ್ಟು ಹೆಂಡತಿ ಕೋರ್ಟ್‍ನಲ್ಲಿ ನನಗೆ ಸಿಕ್ಕಳು. ಸಾವಿರ ಕೋಟಿ ಕೇಸು ಹಾಕಿದ್ದೀಯಾ ಹುಚ್ಚಿ ಎಲ್ಲಾ ನೀನು ಬಂದ ಮೇಲೆ ಸಂಪಾದಿಸಿದ್ದು ಎಲ್ಲಾ ನಿನ್ನದೆ ನಾನೇ 2ನೇ ಹೆಂಡತಿಯನ್ನು ಕರೆದುಕೊಂಡು ಹೊರಗೆ ಹೋಗುತ್ತೇನೆ ಎಂದಿದ್ದೆ. ಆಗ ಅಲ್ಲೇ ಗಟ್ಡಿಯಾಗಿ ಹಿಡಿದು ಕೊಂಡು ಅತ್ತಳು ಆಮೇಲೆ ನಾವು ಒಟ್ಟಿಗೆ ಇದ್ದೇವೆ.

ಈ ಹಿಂದೆ ನನ್ನ ಮಗಳ ಬ್ರೈನ್ ವಾಶ್ ಮಾಡಿಸಿ ನನ್ನ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ದೂರು ದಾಖಲಿಸಲು ಕೆಲವರು ಮುಂದಾದರು ಎಂದು ಕೆಜಿಎಫ್ ಬಾಬು ಬಿಕ್ಕಿ ಬಿಕ್ಕಿ ಅತ್ತರು. ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ: ಸೋಮಶೇಖರ್

ನಂತರ ಮಾತನಾಡಿದ ಮೊದಲ ಪತ್ನಿ ರುಕ್ಸಾನ, ಯಾರ ಮನೆಯಲ್ಲಿ ಜಗಳ ಆಗಲ್ಲ. ನಮ್ಮನೆಯವರು ಎರಡನೇ ಮದುವೆ ಆದರು ಅಂತ ಜಗಳವಾಯಿತು. ಆ ಟೈಮಲ್ಲಿ ಈ ಕೇಸನ್ನು ಹಾಕಲಾಗಿತ್ತು. ನಮ್ಮನೆಯವರು ದೇವರಂತ ಮನುಷ್ಯ. ಒಟ್ಟಿಗೆ ಬಾಳುತ್ತಿದ್ದೇವೆ. ಕೋಪದಲ್ಲಿ ಆವಾಗ ಕೇಸು ಹಾಕಿದ್ದೆ. ಅವರೊಬ್ಬ ಒಳ್ಳೆಯ ಮನುಷ್ಯ. ಈ ಹಿಂದೆ ನಡೆದದ್ದು ಮುಗಿದ ಅಧ್ಯಾಯ. ರಾಜಕೀಯದಲ್ಲಿ ಅದೆಲ್ಲಾ ಮಾತನಾಡಿ ನಮ್ಮ ಮನೆ ಸಂಸಾರ ಹಾಳು ಮಾಡಬೇಡಿ. ಮಗಳ ಜೀವನ ಹಾಳುಮಾಡಬೇಡಿ ಎಂದು ಕಣ್ಣೀರಿಟ್ಟರು.

ಈ ಹಿಂದೆ ರೇಪ್ ಕೇಸ್ ಹಾಕಿದ್ದ ಮಗಳು ಉಮ್ರ ಮಾತನಾಡಿ, ನನ್ನ ಅಪ್ಪ, ಅಮ್ಮಾ ಒಟ್ಟಾಗಬೇಕು ಅಂತ ನಾನು ಬಯಸಿದ್ದೆ. ಕೇಸು ಹಾಕಬೇಕು ಅಂತ ಪೇಪರ್‍ ಗೆ ಸಹಿ ಹಾಕಿಸಿಕೊಂಡರು ಹೀಗೆ ಕೇಸು ಹಾಕುತ್ತಾರೆ ಅಂತ ಗೊತ್ತಿರಲಿಲ್ಲ. ನನ್ನ ತಂದೆ ದೇವರಂತ ಮನುಷ್ಯ ಎಂದರು. ಇದನ್ನೂ ಓದಿ: ಬರೋಬ್ಬರಿ 1,743 ಕೋಟಿ ಆಸ್ತಿ ಹೊಂದಿರುವ ಶ್ರೀಮಂತ ರಾಜಕಾರಣಿ ಕಣಕ್ಕೆ – ಕೆಜಿಎಫ್‌ ಬಾಬು ಆಸ್ತಿ ಎಷ್ಟಿದೆ?

ಎರಡನೇ ಪತ್ನಿ ಶಾಝಿಯ ಮಾತನಾಡಿ, ರಾಜಕೀಯದಲ್ಲಿ ಯಾಕೆ ಆರೋಪ ಮಾಡ್ತೀರ ನಿಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು ಇಲ್ವಾ? ನಿಮಗೂ ಮಗಳು ಇಲ್ವಾ ಅವಳ ವಿಚಾರದಲ್ಲೂ ಹೀಗೆ ಮಾಡ್ತೀರಾ? ಕುಟುಂಬ ಬೇರೆ ರಾಜಕೀಯ ಬೇರೆ ಕುಟುಂಬದ ವಿಚಾರ ರಾಜಕೀಯಕ್ಕೆ ಯಾಕೆ ತರಬೇಕು? ಬಿಲ್ಡರ್ ನವೀದ್ ಈಗಲೂ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹಿಂದಿನ ಘಟನೆ ನಡೆದು 10 ವರ್ಷ ಆಗಿದೆ. ರಾಜಕಾರಣದಲ್ಲಿ ಹೀಗಾಗುತ್ತೆ ಅಂತ ಗೊತ್ತಿದ್ದರೆ ಇಬ್ಬರು ಹೆಂಡತಿಯರು ಸೇರಿ ಬಾಬು ಅವರ ಕಾಲು ಹಿಡಿದು ರಾಜಕೀಯ ಬೇಡ ಎನ್ನುತ್ತಿದ್ದೆವು. ಎಸ್.ಟಿ. ಸೋಮಶೇಖರ್‌ಗೆ ನವೀದ್ ಈ ಎಲ್ಲಾ ದಾಖಲೆ ಕೊಟ್ಟಿರುವುದು. ನಮ್ಮ ಕುಟುಂಬದ ವಿರುದ್ಧ ಮಾತನಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದರು. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

 

Share This Article
Leave a Comment

Leave a Reply

Your email address will not be published. Required fields are marked *