ಹಸೆಮಣೆ ಏರಿದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ

Public TV
1 Min Read

‘ಕಾಂತಾರ’ ಸಿನಿಮಾದಲ್ಲಿ ‘ಸಿಂಗಾರ ಸಿರಿಯೇ’ ಸಾಹಿತಿ ಪ್ರಮೋದ್ ಮರವಂತೆ (Pramod Maravante) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಕೆಜಿಎಫ್ 2’ (KGF 2) ಸಿಂಗರ್ ಸುಚೇತ (Suchetha Basrur) ಜೊತೆ ಹೊಸ ಬಾಳಿಗೆ ಪ್ರಮೋದ್ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ರಿಲೇಷನ್‌ಶಿಪ್ ವದಂತಿ ನಡುವೆ ವಿಜಯ್ ದೇವರಕೊಂಡ ಫ್ಯಾಮಿಲಿಗೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ

ಡಿ.5ರಂದು ಕುಂದಾಪುರದಲ್ಲಿ ಸಿಂಗರ್ ಸುಚೇತ ಜೊತೆ ಪ್ರಮೋದ್ ಮರವಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇನ್ನೂ ಇತ್ತೀಚೆಗೆ ನಿಶ್ಚಿತಾರ್ಥದ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ‘ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ’ ಎಂದು ಸಾಲುಗಳನ್ನು ಬರೆದು ಭಾವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿದ್ದರು.

ಪ್ರಮೋದ್ ಭಾವಿ ಪತ್ನಿಯ ಹೆಸರು ಸುಚೇತ ಬಸ್ರೂರು, ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದಾರೆ. ಅವರ ರವಿ ಬಸ್ರೂರು ಅವರ ಅಕ್ಕನ ಮಗಳು ಸುಚೇತ.

ಅಂದಹಾಗೆ, ಸಿಂಗಾರ ಸಿರಿಯೇ, ಚೆಂದ ಚೆಂದ ನನ್ನ ಹೆಂಡ್ತಿ, ಮತ್ತು ‘ಸೀತಾರಾಮ’ ಸೀರಿಯಲ್‌ನ ಟೈಟಲ್ ಟ್ರ‍್ಯಾಕ್‌ಗೆ ಪ್ರಮೋದ್ ಸಾಹಿತ್ಯ ಬರೆದಿದ್ದಾರೆ. ಸಾಕಷ್ಟು ಸಿನಿಮಾಗಳ ಹಾಡಿಗೆ ಲಿರಿಕ್ಸ್ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

Share This Article