ಸಾವಿರಾರು ಕೋಟಿ ಬಾಚಿದ ‘ಕೆಜಿಎಫ್ 2’ ಸಿನಿಮಾ ಆಗಸ್ಟ್ 20ರಂದು ಜೀ ಕನ್ನಡದಲ್ಲಿ ಪ್ರಸಾರ

Public TV
2 Min Read

ಕೆಜಿಎಫ್ ಚಾಪ್ಟರ್ 2, ಇಡೀ ಜಗತ್ತು ಒಮ್ಮೆಲೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಹೆಮ್ಮೆಯ ಇಂಡಿಯಾದ ಬ್ಲಾಕ್ ಬಸ್ಟರ್  ಸಿನಿಮಾ. ಕಥೆ, ತಾಂತ್ರಿಕತೆ ,ಶ್ರೀಮಂತಿಕೆ ಮತ್ತು ಕಲಾವಿದರ ಆಯ್ಕೆಯಲ್ಲಿ ಚಾಪ್ಟರ್ 1ನ್ನೇ ಮೀರಿಸುವಂತೆ ತೆರೆಗೆ ಅಪ್ಪಳಿಸಿದ ಈ ಚಿತ್ರ ಬಿಡುಗಡೆಗೊಂಡ ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಗಿದ್ದು ಈಗ ಇತಿಹಾಸ . ಇದೀಗ ಈ ಸಿನಿಮಾ ಕನ್ನಡ ಕಿರುತೆರೆಗೆ ಸಿರಿತನವನ್ನು ಪರಿಚಯಿಸಿದ ಕನ್ನಡಿಗರ ನೆಚ್ಚಿನ ನಂಬರ್ 1 ಮನರಂಜನಾ ವಾಹಿನಿ  ಜೀ ಕನ್ನಡದಲ್ಲಿ ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ .

Contents

ಸ್ಯಾಂಡಲ್ ವುಡ್ ಜೊತೆಗೆ ಅತ್ಯುತ್ತಮ ನಂಟು ಹೊಂದಿರುವ ಜೀ ಕನ್ನಡ ವಾಹಿನಿ ತಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ಉದ್ಯಮಕ್ಕೆ ಶ್ರೇಷ್ಟ ಕಲಾವಿದರನ್ನು ಕೊಡುಗೆಯಾಗಿ ನೀಡಿರುವ ಹೆಗ್ಗಳಿಕೆ ಹೊಂದಿದೆ. ಕೆಜಿಎಫ್ 2 ಚಿತ್ರದಲ್ಲೂ ಹಲವಾರು ಜೀ ಕುಟುಂಬದ ಕಲಾವಿದರು ನಟಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಗೆಲುವಿನ ಸರದಾರ ರಾಕಿಂಗ್ ಸ್ಟಾರ್ ಯಶ್ , ಶ್ರೀನಿಧಿ ಶೆಟ್ಟಿ , ಸಂಜಯ್ ದತ್ ,ರವೀನಾ ಟಂಡನ್ , ಮಾಳವಿಕಾ ,ವಸಿಷ್ಠ ಸಿಂಹ ,ಪ್ರಕಾಶ್ ರಾಜ್  ಹೀಗೆ ದೇಶ ಕಂಡ ಅದ್ಭುತ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ಪ್ರಶಾಂತ್ ನೀಲ್ ಅವರ ಅತ್ಯದ್ಭುತ ನಿರ್ದೇಶನವಿದೆ. ಚಂದನವನದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್  ಇದಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣದ ಜವಾಬ್ಧಾರಿ ಹೊತ್ತಿದ್ದರೇ  ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ . ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

ಚಾಪ್ಟರ್ 1 ನಿಂದಲೇ ಕನ್ನಡ ಚಿತ್ರರಂಗದ ದಿಕ್ಕು ಬದಲಿಸುವ ಸೂಚನೆ ನೀಡಿದ್ದ ಕೆಜಿಎಫ್ ಇದೀಗ ಚಾಪ್ಟರ್ 2 ನಿಂದ ಅದನ್ನು ನಿಜವಾಗಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಯಶಸ್ಸಿನ ಸವಾರಿ ಮಾಡಲು ಶುರುಮಾಡಿ 1000 ಕೋಟಿಗೂ ಹೆಚ್ಚು ಆದಾಯ ಗಳಿಸಿ ದಾಖಲೆ ಸೃಷ್ಟಿಸಿದ್ದಷ್ಟೇ  ಅಲ್ಲದೇ ಶತದಿನೋತ್ಸವವನ್ನು ಆಚರಿಸಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ.

ಹಬ್ಬಗಳ ಮಾಸ ಶ್ರಾವಣದಲ್ಲಿ ಕಿರು ಪರದೆಯ ಮೇಲೆ ಕೆಜಿಎಫ್ 2 ಅಬ್ಬರ ಆರಂಭವಾಗುತ್ತಿದ್ದು ಈಗಾಗಲೇ ಬಿಡುಗಡೆಯಾಗಿರುವ ವಿಶಿಷ್ಟ ಶೈಲಿಯ ಪ್ರೋಮೋಗಳು ವೀಕ್ಷಕರು ಈ ಸಿನಿಮಾ ಹಬ್ಬವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ.  ಇದೇ ಆಗಸ್ಟ್ 20 ರಂದು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಕೆಜಿಎಫ್ ಚಾಪ್ಟರ್ 2 ಅನ್ನು ಮನೆಮಂದಿಯೆಲ್ಲಾ ಕೂತು ನೋಡಿ ಈ ಸಿನಿಮೋತ್ಸವವನ್ನು ಆಚರಿಸಿ , ಆನಂದಿಸಿ. ಜೀ ಕನ್ನಡದ ಇತರೆ ಕಾರ್ಯಕ್ರಮಗಳಿಗೆ ನೀಡುವ ಪ್ರೋತ್ಸಾಹವನ್ನು ಮುಂದುವರೆಸಿ.

 

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *