ತಲಕಾವೇರಿಯಲ್ಲಿ ತೀರ್ಥೋದ್ಭವ- ಭಕ್ತರ ದರ್ಶನಕ್ಕೆ ಸಕಲ ಸಿದ್ಧತೆ

Public TV
2 Min Read

ಮಡಿಕೇರಿ: ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದೆ. ತಲಕಾವೇರಿಯಲ್ಲಿ ಇದೇ ಅಕ್ಟೋಬರ್ 17ರಂದು ಭಾನುವಾರ ಮಧ್ಯಾಹ್ನ 1ಗಂಟೆ 11 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ.

ಈ ಬಾರಿ ಕಾವೇರಿ ತೀರ್ಥೊದ್ಭವ ವೀಕ್ಷಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುತ್ತದೆ. ಅದರೆ ಕೋವಿಡ್ ಪಾಸಿಟಿವ್ ರೇಟ್ ಏರಿಳಿತ ಅಗುತ್ತಿರುವುದರಿಂದ ಜನ ದಟ್ಟಣೆ ನಿಯಂತ್ರಣದಲ್ಲಿ ಇರಬೇಕಾಗುತ್ತದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ

ಇಂದು ಕಾವೇರಿ ತೀರ್ಥೊದ್ಭವ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತೀರ್ಥೂದ್ಭವ ಸಂದರ್ಭ ಸ್ಥಳೀಯರು ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಯಂನಿಯಂತ್ರಣ ಮಾಡಿಕೊಂಡು ಕಾವೇರಿ ದರ್ಶನ ಮಾಡಬೇಕು. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆ ಅವಕಾಶ ಇರುತ್ತದೆ. ತಲಕಾವೇರಿ ಕುಂಡಿಕೆ ಬಳಿ ಸ್ನಾನ ಮಾಡಲು ಅವಕಾಶ ಇಲ್ಲ. ಅಲ್ಲದೆ ಈ ಬಾರಿ ತಲಕಾವೇರಿಯಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಇರುವುದಿಲ್ಲ. ಕೇವಲ ಸ್ವಯಂ ಸೇವಕರು ಪೊಲೀಸ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗೆ ಮಾತ್ರ ಊಟ ವ್ಯವಸ್ಥೆಯನ್ನು ಕೊಡಗು ಏಕೀಕರಣ ರಂಗದ ಪ್ರಮುಖರು ಮಾಡಲ್ಲಿದ್ದಾರೆ ಎಂದು ತಿಳಿಸಿದರು.

ಕೊಡಗಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಪ್ರವಾಸಿಗರು ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕು. ಜಿಲ್ಲೆಯಲ್ಲಿರುವ ಹೋಮ್ ಸ್ಟೇ ಹೋಟೆಲ್ ರೇಸಾರ್ಟ್ ಮಾಲೀಕರು. ಬರುವ ಪ್ರವಾಸಿಗರಿಗೆ ಸರಿಯಾಗಿ ಮನವರಿಕೆ ಮಾಡಿ ಧಾರ್ಮಿಕ ಕ್ಷೇತ್ರಗಳಿಗೆ ಕಳುಹಿಸಬೇಕು. ಕೆಲ ಪ್ರವಾಸಿಗರು ಮದ್ಯಪಾನ ಮಾಡಿ, ತುಂಡು ಉಡುಗೆ ತೊಟ್ಟು ಬರುತ್ತಿದ್ದಾರೆ. ಕೊಡಗಿನ ತಲಕಾವೇರಿ, ಭಂಗಡೇಶ್ವರ, ಇರ್ಪು ರಾಮೇಶ್ವರ, ಪಾಡಿ ಇಗ್ಗುತಪ್ಪ, ಮಡಿಕೇರಿ ಓಂಕಾರೇಶ್ವರ ದೇವಾಲಯಗಳಿಗೆ ಹೋಗಬೇಕಾದರೆ ಸರಿಯಾದ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿಕೊಂಡು ಹೋಗಬೇಕು. ಮದ್ಯಪಾನ ಮಾಡಿ ಬರುವವರಿಗೆ ಸ್ಥಳದಲ್ಲೇ ದಂಡ ಹಾಕುವ ವ್ಯವಸ್ಥೆ ಅಗಬೇಕು ಎಂದು ಶಾಸಕ ಬೋಪಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್

ಕೊರೊನಾ ಹಿನ್ನೆಲೆ ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ಈ ಬಾರಿ ಸರಳ ರೀತಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದರು. ಆದರೆ ಕೊರಾನಾ ಹಿನ್ನೆಲೆಯಲ್ಲಿ ಹೆಚ್ಚು ಭಕ್ತರ ಆಗಮನಕ್ಕೆ ದೇವಾಲಯ ಅಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ತಡೆಯೊಡ್ಡಿದ್ದು, ಕಡಿಮೆ ಭಕ್ತರು ಆಗಮಿಸುವಂತೆ ಕೋರಿದೆ.

ಈ ಬಾರಿ ತೀರ್ಥೋದ್ಭವ ವೀಕ್ಷಣಗೆ ಎಲ್ಲರಿಗೂ ಮುಕ್ತ ಅವಕಾಶ ಇದೆ. ಆದರೆ ಜನರೇ ಸ್ವಯಂಪ್ರೇರಿತವಾಗಿ ರಕ್ಷಣೆ ಮಾಡಿಕೊಳ್ಳುವ ಅಗತ್ಯ ಇರುವುದರಿಂದ ಈ ಬಾರಿ ಕಡಿಮೆ ಭಕ್ತರು ತೀರ್ಥೊದ್ಭವ ಸಂದರ್ಭದಲ್ಲಿ ಭಾಗವಹಿಸಬೇಕು. ಈ ಬಾರಿ ಕಾವೇರಿಯ ಕುಡಿಕೆ ಬಳಿ ಸ್ನಾನಕ್ಕೆ ಅವಕಾಶ ಇರುವುದಿಲ್ಲ. ಕೇವಲ ತೀರ್ಥ ಸ್ವೀಕರಿಸಿ ಹೋಗುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *