KFCSC ವ್ಯವಸ್ಥಾಪಕ ಆತ್ಮಹತ್ಯೆ

By
1 Min Read

ತುಮಕೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (KFCSC) ಸಗಟು ಮಳಿಗೆ ವ್ಯವಸ್ಥಾಪಕ ಆರ್.ರವಿಕುಮಾ‌ರ್ (59) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುರುವೇಕೆರೆ (Turuvekere) ತಾಲ್ಲೂಕಿನ ಎಲ್ಲಾ ಸೊಸೈಟಿ, ವಿವಿಧ ಹಾಸ್ಟೆಲ್, ಶಾಲೆಗಳಿಗೆ ಅಕ್ಕಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥ ಸರಬರಾಜು ಮಾಡುವ ಸಗಟು ನಿರ್ವಾಹಕ ಅಧಿಕಾರಿಯಾಗಿ ಅವರು ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಇಸ್ರೆಲ್‌ ರಕ್ಷಣಾ ಸಚಿವನನ್ನೇ ವಜಾಗೊಳಿಸಿದ ಪ್ರಧಾನಿ ನೆತನ್ಯಾಹು

ಶಿರಾ (Sira) ತಾಲ್ಲೂಕಿನ ದೇವನಹಳ್ಳಿ ರವಿಕುಮಾರ್ (Ravikumar) ಪಟ್ಟಣದ ಮಾಯಸಂದ್ರ ರಸ್ತೆ ಓಂಕಾ‌ರ್ ಆಸ್ಪತ್ರೆ ಹಿಂಭಾಗದ ಕಟ್ಟಡದ ಬಾಡಿಗೆ ಮನೆಯೊಂದರಲ್ಲಿ ಹಲವು ದಿನಗಳಿಂದ ವಾಸವಾಗಿದ್ದರು. ಅವರ ಕುಟುಂಬ ತುಮಕೂರಿನಲ್ಲಿ ನೆಲೆಸಿದೆ.

ಬೆಳಿಗ್ಗೆ ಕರೆ ಮಾಡಿದರೂ ಸ್ವೀಕರಿಸದ ಕಾರಣ ಪತ್ನಿ, ಪತಿ ವಾಸವಾಗಿದ್ದ ಬಾಡಿಗೆ ಮನೆಗೆ ಬಂದು ವಿಚಾರಿಸಿದ್ದಾರೆ. ಅನುಮಾನಗೊಂಡು ಮನೆ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article