ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ!

Public TV
1 Min Read

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೂರು ವರ್ಷದ ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮತದಾನ ಇಂದು ನಡೆಯುತ್ತಿದೆ.

ಅಧ್ಯಕ್ಷರಾದ ಸಾ ರಾ ಗೋವಿಂದ್‍ರವರ ಅಧಿಕಾರ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಕಳೆದ ಮೂರು ವರ್ಷಗಳ ನಂತರ ಚುನಾವಣೆ ನಡೆಯುತ್ತಿದ್ದು, ಈ ಬಾರಿ ಅಧ್ಯಕ್ಷ ಸ್ಥಾನವನ್ನು ವಿತರಣಾ ವಲಯಕ್ಕೆ ಮೀಸಲಿಡಲಾಗಿದೆ. ವಿವಿಧ ಕ್ಷೇತ್ರಗಳಿಂದ ಒಟ್ಟು 1,500 ಮತದಾರರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೊಂದಿದೆ.

ಅಧ್ಯಕ್ಷ ಸ್ಥಾನಕ್ಕೆ ವಿತರಕರ ವಲಯದಿಂದ ಚಿನ್ನೆಗೌಡ್ರು ಮತ್ತು ಮಾರ್ಸ್ ಸುರೇಶ್ ಸ್ಫರ್ದಿಸಿದ್ದು, ಇವರಿಬ್ಬರ ನಡುವೆ ತೀವ್ರ ಪೈಪೊಟಿ ಕಂಡುಬಂದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ವಿತರಕರ ವಲಯದಿಂದ ಕುಟ್ಟಿ ಜಿ.ಕೆ., ಕುಪ್ಪುಸ್ವಾಮಿ, ಕೇಶವ ಬಿ.ಆರ್., ಮಾಗರಾಜ್.ಬಿ.ಎಲ್ ಹಾಗೂ ಮಂಜು.ಕೆ ಸ್ಪರ್ಧಿಸಿದ್ದಾರೆ.

ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಗಾಂಧಿ, ಪ್ರಮೀಳ ಜೋಷಾಯ್ ಹಾಗೂ ಸುಭ್ರಮಣಿ.ವಿ ಸ್ಪರ್ಧಿಸಿದ್ದಾರೆ. ಅಲ್ಲದೆ ಮಳೆ ಹುಡುಗಿ ಪೂಜಾ ಗಾಂಧಿ ನಿರ್ಮಾಪಕರ ವಲಯದಿಂದ ಸಮಿಸಿ ಸದಸ್ಯತ್ವಕ್ಕೆ ಸ್ಪರ್ಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *