ಕೇರಳ: 6 ನಿಮಿಷದಲ್ಲಿ 16 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಹಿಡಿದ ಮಹಿಳಾ ಅರಣ್ಯಾಧಿಕಾರಿ

Public TV
2 Min Read

– ಹಾವು ಹಿಡಿಯುವುದರಲ್ಲಿ 8 ವರ್ಷಗಳ ಅನುಭವ ಹೊಂದಿರುವ ರೋಶ್ನಿ
– ಈವರೆಗೆ 800ಕ್ಕೂ ಹೆಚ್ಚು ಹಾವುಗಳು ಸೆರೆ

ತಿರುವನಂತಪುರಂ: ಮಹಿಳಾ ಅರಣ್ಯಾಧಿಕಾರಿಯೊಬ್ಬರು 16 ಅಡಿ ಉದ್ದದ ಕಾಳಿಂಗ ಸರ್ಪವನ್ನು 6 ನಿಮಿಷದಲ್ಲಿ ಸೆರೆ ಹಿಡಿದಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಜು.6ರಂದು ಪರುತಿಪಲ್ಲಿ ಅರಣ್ಯ ಶ್ರೇಣಿಯ ಬೀಟ್ ಅರಣ್ಯ ಅಧಿಕಾರಿ ರೋಶ್ನಿ, ತಿರುವನಂತಪುರದ (Thiruvananthapuram) ಮೂಡಿಲ್ ಪ್ರದೇಶದಲ್ಲಿ ಕಾಳಿಂಗ ಸರ್ಪವನ್ನು ಸೆರೆಹಿಡಿದ್ದಾರೆ. ಈ ವೇಳೆ 20 ಕೆಜಿಯ ಕಾಳಿಂಗ ಸರ್ಪವು 3 ಬಾರಿ ಕಚ್ಚಲು ಪ್ರಯತ್ನಿಸಿರುವುದು ವೈರಲ್ ವಿಡಿಯೋದಲ್ಲಿ ಕಂಡಿದೆ.ಇದನ್ನೂ ಓದಿ: ಏಕಾಏಕಿ ಕಾಣಿಸಿಕೊಂಡ ಎದೆನೋವು – ಚಿಕಿತ್ಸೆ ಸಿಗದೆ ನರಳಾಡಿ ಪ್ರಾಣಬಿಟ್ಟ ವ್ಯಕ್ತಿ

ಮೊದಲಿಗೆ ಕಟ್ಟಿಗೆಗೆ ಒಂದು ಚೀಲ ಕಟ್ಟಿ ಅದರೊಳಗೆ ಹಾವು ಒಳನುಸುಳುವಂತೆ ಮಾಡುತ್ತಾರೆ. ಬಳಿಕ ಹಾವಿನ ಬಾಲ ಹಿಡಿದು ಅದನ್ನು ನಿಧಾನವಾಗಿ ಚೀಲಕ್ಕೆ ತುಂಬುತ್ತಾರೆ. ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳದ ಕೆಲವು ಪ್ರದೇಶಗಳಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುವುದು ಬಹುಅಪರೂಪ, ಆದರೆ ಮೊದಲ ಬಾರಿಗೆ ನಾನು ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದೇನೆ. ಈವರೆಗೆ ನಾನು ವಿಷಕಾರಿ ಮತ್ತು ವಿಷಕಾರಿಯಲ್ಲದ 800ಕ್ಕೂ ಹೆಚ್ಚು ಹಾವುಗಳನ್ನು ಸೆರೆಹಿಡಿದಿದ್ದೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು: ಶಿಕ್ಷಣ ಇಲಾಖೆ ಆದೇಶ

Share This Article